Sunday, July 27, 2025

spot_img

ಸುಬ್ರಹ್ಮಣ್ಯ ನಗರ ವಾರ್ಡ್‌ನಲ್ಲಿ ಮನೆ ಮನೆಗೆ ಪೊಲೀಸ್ ಕಾರ್ಯಕ್ರಮ

ಉಡುಪಿ  : ಉಡುಪಿ ಜಿಲ್ಲಾ ಪೊಲೀಸ್‌ ಹಾಗೂ ಜಂಬೂ ಸ್ಟಾರ್‌ ಸೆಕ್ಯುರಿಟಿ ಮತ್ತು ಫೆಸಿಲಿಟಿ ಸರ್ವೀಸ್‌ ಪ್ರೈವೇಟ್‌ ಲಿಮಿಟೆಡ್‌ ರವರ ಸಹಭಾಗಿತ್ವದಲ್ಲಿ ಉಡುಪಿ ನಗರ ಠಾಣಾ ವ್ಯಾಪ್ತಿಯಲ್ಲಿ ಬರುವ ಪುತ್ತೂರು ಗ್ರಾಮದ ಸುಬ್ರಹ್ಮಣ್ಯ ನಗರ ವಾರ್ಡ್‌ನಲ್ಲಿ ಮನೆ ಮನೆಗೆ ಪೊಲೀಸ್ ಕಾರ್ಯಕ್ರಮದ ಭಾಗವಾಗಿ ದೃಷ್ಠಿ ಯೋಜನೆಯನ್ನು ಉಡುಪಿ ಜಿಲ್ಲೆಯ ಪೊಲೀಸ್ ಅಧೀಕ್ಷಕ ಹರಿರಾಂ ಶಂಕರ್‌ ಐಪಿಎಸ್‌ ರವರು ದೀಪ ಬೆಳಗಿಸುವ ಮೂಲಕ ಉಧ್ಘಾಟಿಸಿದರು. 

 ಈ ಉಧ್ಘಾಟನಾ ಕಾರ್ಯಕ್ರಮಕ್ಕೆ ಉಡುಪಿ ನಗರ ಸಭೆಯ ಅಧ್ಯಕ್ಷಕರು ಪ್ರಭಾಕರ ಪೂಜಾರಿ, ಹೆಚ್ಚುವರಿ ಪೊಲೀಸ್‌ ಅಧೀಕ್ಷಕರಾದ ಸುಧಾಕರ ನಾಯಕ್‌ ಮತ್ತು ಪರಮೇಶ್ವರ್‌ ಹೆಗಡೆ, ಜಂಬೋ ಸ್ಟಾರ್‌ ಸೆಕ್ಯುರಿಟಿ ಮತ್ತು ಫೆಸಿಲಿಟಿ ಸರ್ವೀಸ್‌ ಪ್ರೈವೇಟ್‌ ಲಿಮಿಟೆಡ್‌ ಅಧ್ಯಕ್ಷರಾದ ವಿಜಯ್‌ ಫೆರ್ನಾಂಡೀಸ್‌, ಸುಬ್ರಹ್ಮಣ್ಯ ನಗರ ವಾರ್ಡ್‌ನ ಕೌನ್ಸಿಲರ್‌ ಶ್ರೀಮತಿ ಜಯಂತಿ ಹಾಗೂ ಉಡುಪಿ ಉಪವಿಭಾಗ ಉಪಾಧೀಕ್ಷಕರಾದ ಪ್ರಭು ಡಿಟಿ ರವರು ಮತ್ತು ಉಡುಪಿ ನಗರ ಠಾಣೆಯ ನಿರೀಕ್ಷಕರಾದ ಮಂಜುನಾಥ ವಿ ಬಡಿಗೇರ, ಪೊಲೀಸ್‌ ಉಪನಿರೀಕ್ಷಕರು ಉಪಸ್ಥಿತಿ ಇದ್ದರು. ಸೆಕ್ಯುರಿಟಿಗೆ ಸಂಬಂಧಿಸಿದಂತೆ ಸದರಿ ಏಜೆನ್ಸಿರವರ ಬೋಲೆರೋ ವಾಹನ ಮತ್ತು ಬೈಕ್‌ಗೆ ಪುಷ್ಪಾರ್ಚನೆ ಮಾಡಿ ಗಸ್ತಿಗೆ ಪೊಲೀಸ್ ಅಧಿಕ ರವರು ಚಾಲನೆ ನೀಡಿದರು.

ಕಾರ್ಯಕ್ರಮದ ಉದ್ದೇಶ:ಪ್ರತೀ ಠಾಣಾ ವ್ಯಾಪ್ತಿಯು ದೊಡ್ಡದಾಗಿದ್ದು, ಪ್ರತೀ ಠಾಣಾ ವ್ಯಾಪ್ತಿಯಲ್ಲಿರುವ ಜನ ಸಂಖ್ಯೆ ಅಂದಾಜು 80 ಸಾವಿರದಿಂದ 1 ಲಕ್ಷ ಎನ್ನುವುದು . ಅಷ್ಟೂ ಜನಸಂಖ್ಯೆ ಇರುವ ಪ್ರದೇಶವನ್ನು ಕೇವಲ 40-60 ಜನ ಪೊಲೀಸರು ಕರ್ತವ್ಯ ನಿರ್ವಹಿಸುತ್ತಿರುತ್ತಾರೆ. ಅಂದರೇ ಪ್ರತೀ ಪೊಲೀಸರಿಗೆ ಸುಮಾರು 1700 ರಿಂದ 1800 ಜನರ ಜವಾಬ್ದಾರಿಯು ಬರುತ್ತದೆ. ಈ ದೆಸೆಯಿಂದ ಉಡುಪಿ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿಗಳು ಪ್ರತೀ ಬೀಟಿನಲ್ಲಿ ಸುಮಾರು 80-100 ಮನೆಗಳ ಒಂದು ವೆಲ್‌ ಫೇರ್‌ ಕಮಿಟಿ ಯನ್ನು ರಚಿಸುವುದು ಮತ್ತು ಅವರ ಮನೆಗಳಿಗೆ ರಕ್ಷಣೆಯನ್ನು ಕೊಡುವಂತೆ ನೀಡಿದ ನಿರ್ದೇಶನದಂತೆ ಈ ರೀತಿಯಾದ ಕಮಿಟಿಗಳನ್ನು ಮಾಡಲಾಗಿದೆ. ಈ ರೀತಿಯ ಕಮಿಟಿಗಳನ್ನು ಮಾಡುವುದರಿಂದ ಆ ಪ್ರದೇಶಗಳಲ್ಲಿ ವಾಸವಾಗಿರುವ ಜನರ ರಕ್ಷಣೆ, ವಯೋವೃದ್ಧರ ಕಾಳಜಿ , ರಾತ್ರಿ ಗಸ್ತು ಮಾಡುವುದರಿಂದ ಆಸ್ತಿಪಾಸ್ತಿ, ಜೀವ ರಕ್ಷಣೆಗಳನ್ನು ಮಾಡಬಹುದಾಗಿದೆ. ಅಲ್ಲದೇ ಈ ಪ್ರೈವೇಟ್‌ ಏಜೆನ್ಸಿಯಲ್ಲಿ ಎಲ್ಲರೂ ಎಕ್ಸ್‌ ಸರ್ವಿಸ್‌ ಮೆನ್ ರವರಿದ್ದು, ಈ ಬೀಟ್‌ಗಳಲ್ಲಿ ರಾತ್ರಿ ಗಸ್ತು ಕರ್ತವ್ಯವನ್ನು ಮಾಡುತ್ತಾರೆ. ‌

ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿಗಳ ನಿರ್ದೇಶನದಂತೆ ಉಡುಪಿ ಉಪವಿಭಾಗದ ಪೊಲೀಸ್‌ ಉಪಾಧೀಕ್ಷಕರಾದ ಪ್ರಭು ಡಿ ಟಿ ರವರ ನೇತೃತ್ವದಲ್ಲಿ ಸುಬ್ರಹ್ಮಣ್ಯ ನಗರ ವಾರ್ಡ್‌ನ ಶ್ರೀಮತಿ ಜಯಂತಿ ಕೌನ್ಸಿಲರ್‌ ರವರು ಉಡುಪಿ ನಗರ ಠಾಣೆಯ ಬೀಟ್‌ ಉಸ್ತುವಾರಿ ಅಧಿಕಾರಿ ಹರೀಶ್‌ ಸಹಾಯಕ ಪೊಲೀಸ್‌ ಉಪನಿರೀಕ್ಷಕರು, ಬೀಟ್‌ ಪೊಲೀಸ್‌ ಕಾನ್ಸ್‌ಟೇಬಲ್‌ಗಳಾದ ರಾಘವೇಂದ್ರ ಬನ್ನಿಹಳ್ಳಿ ಮತ್ತು ಕುಮಾರಿ ಸ್ಪೂರ್ತಿರವರುಗಳು ಸಭೆಗಳನ್ನು ಏರ್ಪಡಿಸಿ, ಈ ಕುರಿತು ಸುಬ್ರಹ್ಮಣ್ಯ ನಗರ ವಾರ್ಡ್‌ನ ನಿವಾಸಿಗಳಿಗೆ ಈ ಯೋಜನೆಯ ಬಗ್ಗೆ ಮನವರಿಕೆ ಮಾಡಿದ್ದು, ಈ ದೃಷ್ಠಿ ಯೋಜನೆಯನ್ನು ಜಾರಿಗೆ ತರಲು ಶ್ರಮಿಸಿರುತ್ತಾರೆ.

Related Articles

LEAVE A REPLY

Please enter your comment!
Please enter your name here

Stay Connected

642FansLike
81FollowersFollow
17SubscribersSubscribe
- Advertisement -spot_img

Latest Articles