Wednesday, March 4, 2026

spot_img

ಸಿದ್ದಾಪುರದಲ್ಲಿ ಎರಡು ಆಟೋ ರಿಕ್ಷಾಗಳ ಅಪಘಾತ: ಹಲವರಿಗೆ ಗಾಯ…

ಉಡುಪಿ : ಹೆಂಗವಳ್ಳಿ ಉಗ್ರಾಣಿಮನೆ ಸಮೀಪದ ತಿರುವಿನಲ್ಲಿ ಎರಡು ಆಟೋ ರಿಕ್ಷಾಗಳ ನಡುವೆ ಸಂಭವಿಸಿದ ಅಪಘಾತದಲ್ಲಿ ಹಲವು ಮಂದಿ ಗಾಯಗೊಂಡ ಘಟನೆ ಜ. 8ರಂದು ನಡೆದಿದೆ.

ಅಮಾಸೆಬೈಲುವಿನಿಂದ ಹೆಂಗವಳ್ಳಿ ಕಡೆಗೆ ಆಟೋ ರಿಕ್ಷಾದಲ್ಲಿ ಪ್ರಯಾಣಿಸುತ್ತಿದ್ದ ಹೆಂಗವಳ್ಳಿಯ ರತ್ನ, ಕಾವೇರಿ ಹಾಗೂ ಚೈತ್ರಾ ಎಂಬವರಿದ್ದ ವಾಹನದ ಮೇಲೆ, ಅತೀ ವೇಗವಾಗಿ ಬಂದ ಮತ್ತೊಂದು ಆಟೋ ರಿಕ್ಷಾ ನಿಯಂತ್ರಣ ತಪ್ಪಿ ಪಲ್ಟಿಯಾಗಿದೆ. ಪರಿಣಾಮವಾಗಿ ಅಪಘಾತ ಸಂಭವಿಸಿದ್ದು, ಎರಡೂ ಆಟೋಗಳಲ್ಲಿ ಪ್ರಯಾಣಿಸುತ್ತಿದ್ದವರಿಗೆ ಗಾಯಗಳಾಗಿವೆ.

ಪಲ್ಟಿಯಾದ ಆಟೋ ರಿಕ್ಷಾದ ಚಾಲಕ ವಸಂತ ಸೇರಿದಂತೆ ಗಾಯಾಳುಗಳನ್ನು 108 ಆಂಬ್ಯುಲೆನ್ಸ್ ಮೂಲಕ ಕುಂದಾಪುರ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಯಿತು. ಗಾಯಗೊಂಡವರ ಪೈಕಿ ಕಾವೇರಿ ಅವರನ್ನು ಒಳರೋಗಿಯಾಗಿ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದ. ಈ ಸಂಬಂಧ ಹೆಂಗವಳ್ಳಿ ಶಾಲೆ ಸಮೀಪದ ನಿವಾಸಿ ರತ್ನ (42) ಅವರು ನೀಡಿದ ದೂರಿನ ಮೇರೆಗೆ ಶಂಕರನಾರಾಯಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ.

Related Articles

LEAVE A REPLY

Please enter your comment!
Please enter your name here

Stay Connected

642FansLike
81FollowersFollow
17SubscribersSubscribe
- Advertisement -spot_img

Latest Articles