ಉಡುಪಿ : ಸುಪ್ರೀಂಕೊರ್ಟಿನಲ್ಲಿ , ಕೋರ್ಟ್ ಕಲಾಪ ನಡೆಯುತ್ತಿರುವ ಸಂಧರ್ಭದಲ್ಲೇ ವಕೀಲನೊಬ್ಬ ಮುಖ್ಯ ನ್ಯಾಯ ಮೂರ್ತಿ ಬಿ ಆರ್ ಗವಾಯಿ ಯವರ ಮೇಲೆ ಶೂ ಎಸೆಯಲು ಯತ್ನಿಸಿದ್ದನ್ನು ತೀವ್ರವಾಗಿ ಖಂಡಿಸಬೇಕು. ಇದು ಭಾರತದ ಸಂವಿಧಾನದ ಮೇಲೆ ನಡೆದ ಧಾಳಿ ಎಂದು ಕರ್ನಾಟಕ ದಲಿತ ಸಂಘರ್ಷ ಸಮಿತಿ (ರಿ) ಅಂಬೇಡ್ಕರ್ ವಾದ ಇದರ ಮೖಸೂರು ವಿಭಾಗೀಯ ಸಂಘಟನಾ ಸಂಚಾಲಕರಾದ ಶ್ಯಾಮರಾಜ್ ಬಿರ್ತಿ ಹೇಳಿದ್ದಾರೆ.

ಈ ಸನಾತನಿಗಳು ಅಂದು ಸ್ವಾತಂತ್ರ ಸಿಕ್ಕಿದಾಗಲೇ ನಮ್ಮ ದೇಶದ ಸಂವಿಧಾನವನ್ನು ವಿರೋಧಿಸಿದ್ದರು. ಮನುಸ್ಮ್ರತಿಯನ್ನು ತಮ್ಮ ಸಂವಿಧಾನವಾಗಿ ಮಾಡಲು ಹೊರಟಿರುವ ಈ ಹಿಂದುತ್ವವಾದಿಗಳು ಪದೇ ಪದೇ ಈ ರೀತಿಯ ಕಕ್ಕಸು ತಿನ್ನುವ ಕೆಲಸ ಮಾಡುತ್ತಿದ್ದಾರೆ. ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟ ಅಹಿಂಸವಾದಿ , ರಾಷ್ಟ್ರ ಪಿತ ಗಾಂದೀಜಿಯವರನ್ನೇ ಕೊಂದ ಈ ಸನಾತನಿಗಳು ತಾವು ಸೖತಾನನ ಸಂತಾನದವರೆಂದು ಸಾಬೀತು ಪಡಿಸುತ್ತಿದ್ದಾರೆ. ಅದೂ ಅಲ್ಲದೇ ಈ ಮುಖ್ಯ ನ್ಯಾಯಮೂರ್ತಿಯ ಪೀಠದಲ್ಲಿ ಕೂತು ದಲಿತನೊಬ್ಬ ನ್ಯಾಯಕೊಡುವುದನ್ನು ಯಾವೋತ್ತೂ ಈ ವೖಧಿಕಶಾಹಿ ಮನಸ್ಥಿತಿ ಒಪ್ಪಿಕೊಳ್ಳುವುದೇ ಇಲ್ಲಾ. ಮಹಾನ್ ಅಹಿಂಸಾವಾದಿ ಗಾಂಧಿಜೀಯವರನ್ನೇ ಕೊಂದ ನಾಥುರಾಮ್ ಗೋಡ್ಸೆಯನ್ನು ಪೂಜೆ ಮಾಡುವ, ಗೋಡ್ಸೆಗೆ ಗುಡಿ ಕಟ್ಟುವ ಈ ಸನಾತನಿಗಳ ಹೊಲಸು ಅಂತರಂಗವನ್ನು, ನಿಕ್ರಷ್ಟ ಸಂಸ್ಕೃತಿ ಯನ್ನು ಈ ಘಟನೆಗಳು ಬಿಂಬಿಸುತ್ತವೆ. ಅಖಂಡ ಭಾರತದ ಇತಿಹಾಸ, ಸಂಸ್ಕಾರ, ಸಂಸ್ಕೃತಿ, ಪರಪಂರೆ, ಬಗ್ಗೆ ಬಡಾಯಿ ಕೊಚ್ಚಿಕೊಳ್ಳುವ ಹಿಂದುತ್ವವಾದಿಗಳ, ಸನಾತನವಾದಿ ಪ್ರತಿಪಾದಕರ ಈ ಹೇಯ ಕ್ರತ್ಯವನ್ನು ತೀವ್ರವಾಗಿ ಖಂಡಿಸುತ್ತಾ , ಸಂವಿಧಾನದ ಆಶಯಗಳ ಮೇಲೆ ದಾಳಿಮಾಡುವ ಇಂಥಹ ದೇಶಧ್ರೋಹಿಗಳ ಮೇಲೆ ಯುಎಪಿಐ ಕಾಯ್ದೆಯಡಿ ಬಂಧಿಸಿ ಸರಿಯಾದ ಶಿಕ್ಷೆಗೆ ಗುರಿಪಡಿಬೇಕೆಂದು ಕರ್ನಾಟಕ ದಲಿತ ಸಂಘರ್ಷ ಸಮಿತಿ (ರಿ) ಅಂಬೇಡ್ಕರ್ ವಾದ ಇದರ ಮೖಸೂರು ವಿಭಾಗೀಯ ಸಂಘಟನಾ ಸಂಚಾಲಕರಾದ ಶ್ಯಾಮರಾಜ್ ಬಿರ್ತಿ ಪತ್ರಿಕಾ ಪ್ರಕಟಣೆಯಲ್ಲಿ ಖಂಡಿಸಿರುತ್ತಾರೆ.


