Monday, August 11, 2025

spot_img

ಸಾಲಿಗ್ರಾಮ ಪ.ಪಂ: ಚೈನಿಸ್ ಮಾಂಜಾ ಬಳಕೆ ನಿಷೇಧ

ಕೋಟ : ಗಾಳಿಪಟ ಹಾರಿಸಲು ಹಾಗೂ ಮತ್ತಿತರ ಉದ್ದೇಶಕ್ಕೆ ಬಳಸುತ್ತಿದ್ದ ನೈಲಾನ್ ದಾರ ಮತ್ತು ಸಣ್ಣ ಗಾಜಿನ ಚೂರಿನಿಂದ ಲೇಪಿತವಾದ ಅಥವಾ ಇತರ ಹಾನಿಕಾರಕ ವಸ್ತುಗಳಿಂದ ತಯಾರಾದ ಚೈನಿಸ್ ಡೋರ್ ಅಥವಾ ಚೈನೀಸ್ ಮಾಂಜಾ ಎಂದು ಕರೆಯಲ್ಪಡುವ ದಾರಗಳು ಪಕ್ಷಿಗಳಿಗೆ ಪ್ರಾಣಾಂತಕವಾಗಿ ಪರಿಣಮಿಸುತ್ತಿದ್ದ ಹಿನ್ನೆಲೆ, ಸದರಿ ದಾರಗಳ ಬಳಕೆಯನ್ನು ರಾಜ್ಯಾದ್ಯಂತ ನಿಷೇಧಿಸಿ ಸರಕಾರ ಆದೇಶ ಹೊರಡಿಸಿರುತ್ತದೆ.

ಆದುದರಿಂದ ಸಾಲಿಗ್ರಾಮ ಪಟ್ಟಣ ಪಂಚಾಯತ್ ವ್ಯಾಪ್ತಿಯ ಸಾರ್ವಜನಿಕರು ಹಾಗೂ ಅಂಗಡಿ ಮಾಲೀಕರು ಗಾಳಿಪಟ ಹಾರಿಸಲು ಅಪಾಯಕಾರಿಯಾದ ಚೂಪಾಗಿರುವ ಮಾಂಜಾ, ನೈಲಾನ್, ಗಾಜು ಅಥವಾ ಲೋಹದಿಂದ ಲೇಪಿತವಾದ ಹತ್ತಿ ದಾರವನ್ನು ಬಳಕೆ ಮತ್ತು ಮಾರಾಟ ಮಾಡದಂತೆ, ಬದಲಾಗಿ ಸರಳವಾದ ಹತ್ತಿ ದಾರವನ್ನು ಮಾತ್ರ ಬಳಸುವಂತೆ ಸಾಲಿಗ್ರಾಮ ಪಟ್ಟಣ ವಂಚಾಯತ್ ಕಚೇರಿ ಪ್ರಕಟಣೆ ತಿಳಿಸಿದೆ.

Related Articles

LEAVE A REPLY

Please enter your comment!
Please enter your name here

Stay Connected

642FansLike
81FollowersFollow
17SubscribersSubscribe
- Advertisement -spot_img

Latest Articles