ಕಾಪು : ಹಿಟಾಚಿ ಸಹಾಯದಿಂದ ಪಾಪನಾಶಿನಿ ಹೊಳೆಯ ಸರ್ಕಾರಿ ಜಾಗದಲ್ಲಿ ಅಕ್ರಮವಾಗಿ ಮರಳು ತೆಗೆಯುತ್ತಿದ್ದ ಸ್ಥಳಕ್ಕೆ ಪೊಲೀಸ್ ರು ಧಾಳಿ ಮಾಡಿ ಟಿಪ್ಪರ್ ಮತ್ತು ಹಿಟಾಚಿ ವಶಕ್ಕೆ ಪಡೆದ ಘಟನೆ ನಡೆದಿದೆ.

ಕಾಪು ತಾಲೂಕಿನ ಶಿರ್ವ ಗ್ರಾಮದ ಗರಡಿ ಮನೆ ಎಂಬಲ್ಲಿ ಈ ಘಟನೆ ನಡೆದಿದ್ದು, ಪಾಪನಾಶಿನಿ ಹೊಳೆಯ ಸರ್ಕಾರಿ ಜಾಗದಲ್ಲಿ ಹಿಟಾಚಿ ಸಹಾಯದಿಂದ ಅಕ್ರಮವಾಗಿ ಮರಳು ತೆಗೆಯುತ್ತಿ ಸಂದರ್ಭ ಪೊಲೀಸ್ ರು ಧಾಳಿ ಮಾಡಿದ್ದಾರೆ. ದಾಳಿ ಮಾಡಿ ಸ್ಥಳದಲ್ಲಿದ್ದ ಸುಮಾರು ಎರಡು ಟಿಪ್ಪರ್ ಮರಳು ಹಾಗೂ ಒಂದು ಹಿಟಾಚಿ ವಾಹನವನ್ನು ವಶಕ್ಕೆ ಪಡೆದಿದ್ದಾರೆ. ಈ ಕುರಿತು ಶಿರ್ವ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


