Friday, July 4, 2025

spot_img

ಸಣ್ಣ ನೀರಾವರಿ ಗಣತಿ ನೀರಿನ ಮೂಲಗಳ ಸಮೀಕ್ಷೆಗೆ ಸಾರ್ವಜನಿಕರು ಸಹಕರಿಸಿ

ಉಡುಪಿ : ನೀರಾವರಿ ನೀತಿಗಳನ್ನು ರೂಪಿಸಲು ಕೇಂದ್ರ ಜಲ ಸಂಪನ್ಮೂಲ ಸಚಿವಾಲಯದ ವತಿಯಿಂದ 7 ನೇ ಸಣ್ಣ ನೀರಾವರಿ ಗಣತಿ ನೀರಿನ ಮೂಲಗಳ ಸಮೀಕ್ಷೆಯನ್ನು ಮೇ ಯಿಂದ ಅಕ್ಟೋಬರ್ ಅಂತ್ಯದ ವರೆಗೆ ನಡೆಯಲಿದ್ದು, ಸಾರ್ವಜನಿಕರು ಈ ಗಣತಿಗೆ ಸಹಕರಿಸುವುದರೊಂದಿಗೆ ಯಶಸ್ವಿಗೊಳಿಸಬೇಕು ಎಂದು ಜಿಲ್ಲಾಧಿಕಾರಿ ಡಾ. ಕೆ ವಿದ್ಯಾ ಕುಮಾರಿ ತಿಳಿಸಿದರು.

ಅವರು ಇಂದು ನಗರದ ಮಣಿಪಾಲ ರಜತಾದ್ರಿಯ ಜಿಲ್ಲಾಧಿಕಾರಿ ಕಚೇರಿ ಸಂಕೀರ್ಣದಲ್ಲಿ ಏಳನೇ ಸಣ್ಣ ನೀರಾವರಿ ಗಣತಿ ಮತ್ತು ನೀರಿನಾಸರೆಗಳ ಗಣತಿ ಕಾರ್ಯಗಳ ಜಿಲ್ಲಾ ಮಟ್ಟದ ಸಮನ್ವಯ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು. ಜಿಲ್ಲೆಯ ಎಲ್ಲಾ ವಿಧದ ಸಣ್ಣ ನೀರಾವರಿ ಯೋಜನೆಗಳ, ನೀರಿನ ಆಸರೆಗಳ ಸಮಗ್ರ ಹಾಗೂ ನಂಬಲಾರ್ಹ ಮೂಲಕಗಳ ಅಂಕಿ-ಅಂಶಗಳ ಸಂಗ್ರಹಣೆ, ಭವಿಷ್ಯದಲ್ಲಿ ಅವುಗಳ ಸದ್ಬಳಕೆ, ನಿರ್ವಹಣೆ ಹಾಗೂ ಆದಾಯ ಸಂಗ್ರಹಣೆ, ಹೊಸ ಯೋಜನೆಗಳಿಗೆ ರೂಪ ಕೊಡುವುದು ಸೇರಿದಂತೆ ಪರಿಣಾಮಕಾರಿ ಯೋಜನೆಗಳು ಮತ್ತು ನೀತಿಗಳ ನಿರೂಪಣೆ ಕೈಗೊಳ್ಳಲು ಸಣ್ಣ ನೀರಾವರಿ ಗಣತಿ ಮತ್ತು ನೀರಿನಾಸರೆಗಳ ಗಣತಿಗಳು ಅನುಕೂಲವಾಗಿಲಿವೆ ಎಂದರು.

ನೀರಿನಾಸರೆಗಳ ಗಣತಿಯಲ್ಲಿ ನೈಸರ್ಗಿಕ ಹಾಗೂ ಮಾನವ ನಿರ್ಮಿತ ಎಲ್ಲಾ ನೀರಿನ ಆಸರೆಗಳ ಅಚ್ಚುಕಟ್ಟುಗಳ ಪ್ರಮಾಣ ಲೆಕ್ಕಿಸದೇ ಮಾಹಿತಿ ಸಂಗ್ರಹಿಸಲಾಗುವುದು ಎಂದ ಅವರು, ಗ್ರಾಮ ಹಾಗೂ ನಗರ ಅಂತರ್ಜಲ ಯೋಜನೆಗಳಾದ ಅಗೆದ ಬಾವಿ, ವಿವಿಧ ಕೊಳವೆ ಬಾವಿಗಳ ಮಾಹಿತಿ, ಜಲ ಯೋಜನೆಗಳಾದ ಮೇಲ್ಮೆöÊ ಹರಿವು ಹಾಗೂ ಏತ ನೀರಾವರಿ ಯೋಜನೆಗಳನ್ನು ಒಳಗೊಂಡಿರುವಂತೆ ಮಾಹಿತಿ ಕಲೆ ಹಾಕಬೇಕು ಎಂದರು.

ನೀರಾವರಿ ಅಥವಾ ಇತರೆ ಉದ್ದೇಶಗಳಾದ ಕೈಗಾರಿಕೆ, ಮೀನುಗಾರಿಕೆ, ಕುಡಿಯುವ ನೀರು, ಆಟೋಟ ಮನೋರಂಜನೆ, ಧಾರ್ಮಿಕ ಅಂತರ್ಜಲ ಪುನಃಶ್ಚೇತನ, ಕೃಷಿ ಹೊಂಡ ಮುಂತಾದವುಗಳಲ್ಲಿ ಬಳಕೆಯಾಗುವ ಎಲ್ಲಾನೀರಿನ ಆಸರೆಗಳನ್ನು ಈ ಗಣತಿಯಲ್ಲಿ ಪರಿಗಣಿಸಲಾಗುವುದು ಎಂದರು. ಗಣತಿಯ ಅನುಷ್ಠಾನ ಕಾರ್ಯದಲ್ಲಿ ಭಾಗಿಯಾಗುವ ಗ್ರಾಮ ಲೆಕ್ಕಿಗರಿಗೆ ಹಾಗೂ ನಗರ ಸ್ಥಳೀಯ ಸಂಸ್ಥೆಗಳ ಅಧಿಕಾರಿಗಳ ನೌಕರರಿಗೆ ಜಿಲ್ಲಾ ಹಾಗೂ ತಾಲೂಕು ಮಟ್ಟಗಳಲ್ಲಿ ಕಾರ್ಯಾಗಾರಗಳನ್ನು ಏರ್ಪಡಿಸಿ, ಅವರಿಗೆ ತರಬೇತಿ ನೀಡಬೇಕು ಎಂದ ಅವರು, ತಾಲೂಕು ಮಟ್ಟದಲ್ಲಿ ಮೇಲ್ವಿಚಾರಕರಾದ ತಹಶೀಲ್ದಾರರುಗಳು, ಕಂದಾಯ ನಿರೀಕ್ಷಕರುಗಳು ಹಾಗೂ ಸಾಂಖಿಕ ನಿರೀಕ್ಷಕರು ಗಣತಿ ಕಾರ್ಯದ ಮೇಲ್ವಿಚಾರಣೆಯನ್ನು ಮಾಡಬೇಕು. ನಿಯಮಿತವಾಗಿ ಶೇ. 10 ರಷ್ಟು ಯೋಜನೆಯನ್ನು ಆಯ್ಕೆ ಮಾಡಿ, ಭೌತಿಕವಾಗಿ ಸಂದರ್ಶಿಸಿ, ಮತ್ತು ಗುಣಮಟ್ಟ ಹಾಗೂ ವ್ಯಾಪ್ತಿಯ ನೈಜತೆಯನ್ನು ಪರಿಶೀಲಿಸಬೇಕು ಎಂದರು.

ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಅಬೀದ್ ಗದ್ಯಾಳ, ಸಹಾಯಕ ಕಮೀಷನರ್ ರಶ್ಮಿ ಎಸ್, ಮಂಗಳೂರು ಸಣ್ಣ ನೀರಾವರಿ ವಿಭಾಗದ ಕಾರ್ಯಪಾಲಕ ಇಂಜಿನಿಯರ್ ಅಲ್ವಿನ್ ಅಗೇರ, ವಿವಿಧ ಜಿಲ್ಲಾ ಮಟ್ಟದ ಅಧಿಕಾರಿಗಳು, ತಹಶೀಲ್ದಾರರುಗಳು ಹಾಗೂ ಮತ್ತಿತರರು ಉಪಸ್ಥಿತರಿದ್ದರು.

6 ನೇ ಸಣ್ಣ ನೀರಾವರಿ ಗಣತಿ ದತ್ತಾಂಶದ ಅನ್ವಯ ಜಿಲ್ಲೆಯಲ್ಲಿ ಒಟ್ಟು 257 ಗ್ರಾಮಗಳಲ್ಲಿ 18,290 ಅಂತರ್ಜಲ ಯೋಜನೆಗಳು, 181 ಮೇಲ್ಮೈ  ಜಲ ಹರಿಯುವ ಯೋಜನೆಗಳು ಮತ್ತು 338 ಏತ ನೀರಾವರಿ ಯೋಜನೆಗಳು ಒಟ್ಟು 519 ಮೇಲ್ಮೈ ಜಲ ಯೋಜನೆಗಳಾಗಿದ್ದು, ಗಣತಿಯಲ್ಲಿ ಒಟ್ಟು 18809 ಯೋಜನೆಗಳು ಇರುವುದು ಕಂಡುಬಂದಿರುತ್ತದೆ. ಪ್ರಸ್ತುತ ದಿನಗಳಲ್ಲಿ ಅಂತರ್ಜಲ ಯೋಜನೆಗಳು ಹೆಚ್ಚಾಗಿರಬಹುದು. ಜಿಲ್ಲೆಯ ಪ್ರತಿಯೊಂದು ಸಣ್ಣ ನೀರಾವರಿ ಹಾಗೂ ನೀರಿನಾಸರೆಗಳ ಗಣತಿಯ ದತ್ತಾಂಶಗಳನ್ನು ಯಾವುದೇ ಲೋಪವಿಲ್ಲದಂತೆ ಕ್ರೋಢೀಕರಿಸಬೇಕು.

ಡಾ. ಕೆ ವಿದ್ಯಾಕುಮಾರಿ (ಜಿಲ್ಲಾಧಿಕಾರಿ)

Related Articles

LEAVE A REPLY

Please enter your comment!
Please enter your name here

Stay Connected

642FansLike
81FollowersFollow
17SubscribersSubscribe
- Advertisement -spot_img

Latest Articles