ಉಡುಪಿ : ಶ್ರೀಕೃಷ್ಣ ಮಠದ ಪರ್ಯಾಯ ಶೀರೂರು ಮಠದ ಪರ್ಯಾಯ ಪೀಠಾಧೀಶರಾದ ಶ್ರೀ ಶ್ರೀ ವೇದವರ್ಧನ ತೀರ್ಥ ಶ್ರೀಪಾದರ ಆಶಯದಂತೆ ನಡೆಯುತ್ತಿರುವ ಶ್ರೀಕೃಷ್ಣ ಮಂತ್ರ ಲೇಖನ ಯಜ್ಞದ ಪುಸ್ತಕ ಸಮರ್ಪಣೆಯ ಅಂಗವಾಗಿ ಕೃಷ್ಣ ಮಠದ ಯಾಗಶಾಲೆಯಲ್ಲಿ ಶ್ರೀಕೃಷ್ಣ ಮಂತ್ರ ಹೋಮ ನಡೆಯಿತು.

ಶ್ರೀಪಾದರ ಸಾನ್ನಿಧ್ಯದಲ್ಲಿ ನಡೆದ ಹೋಮದಲ್ಲಿ ಭಕ್ತರು ಭಕ್ತಿಭಾವದಿಂದ ಭಾಗವಹಿಸಿ, ತಾವು ಬರೆದ ಶ್ರೀಕೃಷ್ಣ ಮಂತ್ರ ಲೇಖನದ ಪುಸ್ತಕಗಳನ್ನು ಸಮರ್ಪಿಸಿದರು. ವೇದಮಂತ್ರಗಳ ಘೋಷದ ನಡುವೆ ನಡೆದ ಧಾರ್ಮಿಕ ಕಾರ್ಯಕ್ರಮದಲ್ಲಿ ಅನೇಕ ಭಕ್ತರು ಉಪಸ್ಥಿತರಿದ್ದು, ಶ್ರೀಕೃಷ್ಣನ ಅನುಗ್ರಹಕ್ಕೆ ಪಾತ್ರರಾದರು.

ಕಾರ್ಯಕ್ರಮದಲ್ಲಿ ಮಂತ್ರ ಲೇಖನ ಯಜ್ಞದ ಮಹತ್ವವನ್ನು ವಿವರಿಸಲಾಯಿತು. ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಧಾರ್ಮಿಕ ವಿಧಿವಿಧಾನಗಳಲ್ಲಿ ತೊಡಗಿಸಿಕೊಂಡರು. ಈ ಸಂದರ್ಭದಲ್ಲಿ ಮಠದ ಹಿರಿಯರು, ಅರ್ಚಕರು ಹಾಗೂ ಭಕ್ತವೃಂದ ಉಪಸ್ಥಿತರಿದ್ದರು.



