ಉಡುಪಿ: ಶಿರ್ವ ಹಾಗೂ ಆಸುಪಾಸಿನ ಸಾರ್ವಜನಿಕರ ಅನುಕೂಲಕ್ಕಾಗಿ ನೂತನವಾಗಿ ಖರೀದಿಸಲಾದ ಉಚಿತ ಆಂಬ್ಯುಲೆನ್ಸ್ ಸೇವೆಗೆ ಶನಿವಾರ ಚಾಲನೆ ನೀಡಲಾಯಿತು.

ಕೆ. ಮನೋಹರ ಶೆಟ್ಟಿ ಮಂದಾರ ಅವರ ನೇತೃತ್ವದಲ್ಲಿ ಹಾಗೂ ಶಿರ್ವದ ನಾಗರಿಕರ ಸಹಕಾರದಲ್ಲಿ ಖರೀದಿಸಲಾದ ಆಂಬ್ಯುಲೆನ್ಸ್‌ನ್ನು ಕೊಲ್ಲಬೆಟ್ಟು ರವೀಂದ್ರ ಶೆಟ್ಟಿ ಅವರ ಮನೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಲೋಕಾರ್ಪಣೆಗೊಳಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನೂ ಅವರು ವಹಿಸಿದ್ದರು.

ಈ ಸಂದರ್ಭದಲ್ಲಿ ಹಿರಿಯ ಸಮಾಜ ಸೇವಕ ಟಿ. ಶಂಭು ಶೆಟ್ಟಿ, ಹೇಮಲತಾ ಶಂಭು ಶೆಟ್ಟಿ, ಕೆ. ಮನೋಹರ ಶೆಟ್ಟಿ, ರವೀಂದ್ರ ಶೆಟ್ಟಿ, ಎನ್.ಸಿ. ಶೆಟ್ಟಿ, ಶಿರ್ವ ಬಂಟರ ಸಂಘದ ಅಧ್ಯಕ್ಷ ಸಾಯಿನಾಥ ಶೆಟ್ಟಿ ಕುತ್ಯಾರು, ಮಹಿಳಾ ಮಂಡಲ ಅಧ್ಯಕ್ಷೆ ಸ್ಪೂರ್ತಿ ಶೆಟ್ಟಿ, ಶಿರ್ವ ಸಿ.ಎ. ಬ್ಯಾಂಕ್ ಅಧ್ಯಕ್ಷ ಕುತ್ಯಾರು ಪ್ರಸಾದ್ ಶೆಟ್ಟಿ, ಗುಲಾಬಿ ಶೆಟ್ಟಿ ಕೇಂಜ ನಡಿಗುತ್ತು ಹಾಗೂ ಸಮಾಜ ಸೇವಕ ರಾಮರಾಯ ಪಾಟ್ಕರ್ ಉಪಸ್ಥಿತರಿದ್ದರು.



