ಕರಾವಳಿಯ ಗಂಡು ಕಲೆ ಯಕ್ಷಗಾನ ಎಂದರೆ ಬಹುತೇಕ ಎಲ್ಲರಿಗೂ ಇಷ್ಟ ಎನ್ನಬಹುದು. ಇನ್ನು ಯಕ್ಷಗಾನ ವೇಷದಲ್ಲಿ ಸಿನಿಮಾ ನಟರು ರಾಜಕಾರಣಿಗಳನ್ನ ಹಾಗೂ ಇನ್ನೂ ವಿಶೇಷ ವ್ಯಕ್ತಿಗಳನ್ನ ನಾವು ಈಗಾಗಲೇ ನೋಡಿದ್ದೇವೆ. ಇದೀಗ ಯಕ್ಷಗಾನ ಲೋಕದಲ್ಲಿ ಹೊಸ ಪ್ರಯೋಗ ಎನ್ನುವಂತೆ ಜಿಲ್ಲೆಯ ಹೆಸರು ಅಂತ ವೈದ್ಯರು ಯಕ್ಷಗಾನ ಕಲಾವಿದರಾಗಿ ಬಣ್ಣ ಹಚ್ಚಲು ಸಿದ್ಧರಾಗಿದ್ದಾರೆ.
ಶ್ರೀ ಕನ್ನಿಕಾ ಪರಮೇಶ್ವರಿ ಯಕ್ಷಗಾನ ಕಲಾಸಂಘ ಕಣ್ಣೂರು ಇದರ ಸುವರ್ಣ ಮಹೋತ್ಸವದ ಸಂಭ್ರಮ ಐವತ್ತನೇ ಯಕ್ಷ ಕಲೋತ್ಸವದ ಪ್ರಯುಕ್ತ ಮಾರ್ಚ್ 8ರಂದು ವೈದ್ಯ ಮಿತ್ರರು ಒಡಗೂಡಿ ಸುರನದಿ -ಸುತ ಯಕ್ಷಗಾನ ಪ್ರಸಂಗದಲ್ಲಿ ಬಣ್ಣ ಹಚ್ಚಲಿದ್ದಾರೆ. ಡಾ. ನಾಗಭೂಷಣ್ ಉಡುಪ, ಡಾ. ಆದರ್ಶ ಹೆಬ್ಬಾರ್, ಡಾ. ಕುಸುಮಾಕರ್ ಶೆಟ್ಟಿ, ಡಾ. ಜಗದೀಶ ಶೆಟ್ಟಿ, ಡಾ.ಗಣೇಶ್ ಯು, ಡಾ.ಸುದರ್ಶನ, ಡಾ. ಅಶೋಕ್ ಆಚಾರ್ಯ ಎಚ್, ಡಾ.ರಾಜೇಶ್ ಶೆಟ್ಟಿ, ಡಾ.ಸುನೀಲ್, ಡಾ.ಕೃತಿ ಕನ್ನಂತ ಮತ್ತು ಡಾ. ಕವಿತಾ ಕುಂಭಾಶಿ ಹೀಗೆ ಉಡುಪಿ ಜಿಲ್ಲೆಯ ಮತ್ತು ಮಂಗಳೂರಿನ ಹೆಸರಾಂತ ವೈದ್ಯರು ಬಣ್ಣ ಹಚ್ಚಲಿದ್ದಾರೆ. ಇನ್ನು ವಿಶೇಷ ಎನ್ನುವಂತೆ ಈ ಯಕ್ಷಗಾನ ಪ್ರದರ್ಶನದ ಆಮಂತ್ರಣ ಪತ್ರಿಕೆ ವೈದ್ಯರ ಪ್ರಿಸ್ಕ್ರಿಪ್ಷನ್ ಚೀಟಿಯಂತೆ ಮುದ್ರಿಸಿರುವುದು ಯಕ್ಷಗಾನ ಪ್ರಿಯರನ್ನು ಸೆಳೆದಿರುವುದರ ಜೊತೆಗೆ ಸಾಮಾಜಿಕ ಜಾಲತಾಣದಲ್ಲಿ ವೈರಲಾಗಿದೆ…