Monday, August 25, 2025

spot_img

ವಿಶ್ವಾಸದ ಮನೆ ಕರುಣಾಲಯ ವೃದ್ಧಾಶ್ರಮದಲ್ಲಿ: 140 ಬೆಡ್‌ಶೀಟ್ ಮತ್ತು ಸಿಹಿ ತಿಂಡಿ ವಿತರಣೆ 

ಉಡುಪಿ : ಸೈಂಟ್ ‌ ಮಿಲಾಗ್ರಿಸ್ ಕ್ರೆಡಿಟ್ ಸೌಹಾರ್ದ ಕೋ-ಅಪರೇಟಿವ್ ಸೊಸೈಟಿ ಲಿ. ಇದರ ಅಧ್ಯಕ್ಷ ಜಾರ್ಜ್ ಫೆರ್ನಾಂಡಿಸ್ ರವರ ಆಶಯದಂತೆ ಮೂಡುಬೆಳ್ಳ ಶಾಖೆಯ ವತಿಯಿಂದ ಪ್ರತಿವರ್ಷದಂತೆ 79ನೇ ಸ್ವಾತಂತ್ರೋತ್ಸವದ ಪ್ರಯುಕ್ತ ವಿಶ್ವಾಸದ ಮನೆ ಕರುಣಾಲಯ ವೃದ್ಧಾಶ್ರಮದಲ್ಲಿ ಸುಮಾರು 140 ಬೆಡ್‌ಶೀಟ್ ಮತ್ತು ಸಿಹಿ ತಿಂಡಿ ವಿತರಣೆ ಮಾಡಲಾಯಿತು. 

ಈ ಸಂದರ್ಭದಲ್ಲಿ ಮುಖ್ಯ ಅತಿಥಿಯಾಗಿ ಆಗಮಿಸಿದ ಕರಾವಳಿ ಅಭಿವೃದ್ಧಿ ಪ್ರಾಧಿಕಾರ ಕರ್ನಾಟಕ ಸರ್ಕಾರ ಇದರ ಮಾಜಿ ಅಧ್ಯಕ್ಷ ಮಟ್ಕಾರು ರತ್ನಾಕರ ಹೆಗ್ಡೆ ಹಾಗೂ ಮಾಜಿ ಜಿಲ್ಲಾ ಪಂಚಾಯತ್ ಅಧ್ಯಕ್ಷರಾದ ಜೋರ್ಜ ಜರಾಲ್ಡ್ ಫೆರ್ನಾಂಡಿಸ್, ಮೇಲ್ವಿಚಾರಕರು ಮ್ಯಾಥಿವ್, ಮಿಲಾಗ್ರಿಸ್ ಸಂಸ್ಥೆಯ ಉಡುಪಿ ಮಂಗಳೂರು ವಿಭಾಗದ ಅಭಿವೃದ್ಧಿ ವ್ಯವಸ್ಥಾಪಕರಾದ ಮನಿಷ್ ಎಮ್ ಮತ್ತು ಸಾಲ ವಸೂಲಾತಿ ಆಧಿಕಾರಿಯಾದ ಗೌತಮ್ ರೈ, ಮೂಡುಬೆಳ್ಳಿ ಶಾಖೆಯ ವ್ಯವಸ್ಥಾಪಕಿ ಪ್ರೀತಿ ಚಪ್ಕರ್ ಮತ್ತು ಕಾಪು ಶಾಖೆಯ ವ್ಯವಸ್ಥಾಪಕಿ ಕಾವ್ಯಾಶ್ರೀ ಉಪಸ್ಥಿತರಿದ್ದರು. ವೃದ್ಧಾಶ್ರಮದ ಹಾಗೂ ಕಾಪು ಮತ್ತು ಮೂಡುಬೆಳ್ಳೆಯ ಸಿಬ್ಬಂ ದಿಗಳು ಸಹಕರಿಸಿದರು. 

ಸ್ನೇಹಾ ಕಾರ್ಯಕ್ರಮವನ್ನು ನಿರೂಪಿಸಿದರು, ಸಹಕಾರಿಯ ಪಕ್ಷಿನೊಟ ವಿಜಯಲಕ್ಷ್ಮೀ ವಿವರಿಸಿದರು. ಅಕ್ಷಯ್ ಸ್ವಾಗತವನ್ನು ಕೋರಿದರು. ಹಾಗೂ ಸುಶ್ಮಿತಾರವರು ವಂದಿಸಿದರು.

Related Articles

LEAVE A REPLY

Please enter your comment!
Please enter your name here

Stay Connected

642FansLike
81FollowersFollow
17SubscribersSubscribe
- Advertisement -spot_img

Latest Articles