ಕುಂದಾಪುರ: ಮೂಡ್ಲುಕಟ್ಟೆ ಎಂ ಎಂ ಬಿ ಎಸ್ ಟ್ರಸ್ಟ್ ನ ಪೂರ್ವ ಪ್ರಾಥಮಿಕ ಶಾಲೆ ಯಾದ ವಿದ್ಯಾ ಅಕಾಡೆಮಿಯಲ್ಲಿ 2025 26 ನೇ ಸಾಲಿನ ಶೈಕ್ಷಣಿಕ ವರ್ಷವನ್ನು ಜೂನ್ 2 ರಂದು ಆರಂಭಿಸಲಾಗುತ್ತಿದೆ. ಈಗಾಗಲೇ ದಾಖಲಾತಿ ಪ್ರಕ್ರಿಯೆಗಳು ಪೂರ್ಣಗೊಂಡಿದ್ದು ವಿವಿಧ ಊರಿನ ವಿದ್ಯಾರ್ಥಿಗಳು ತಮ್ಮ ಉಜ್ವಲ ಭವಿಷ್ಯಕ್ಕಾಗಿ ವಿದ್ಯಾ ಅಕಾಡೆಮಿಯನ್ನು ಆಯ್ಕೆ ಮಾಡಿಕೊಂಡಿರುವುದಕ್ಕೆ ಸಂಸ್ಥೆ ಪೋಷಕರನ್ನು ಶ್ಲಾಘಿಸಿದೆ.

ಹೊಸ ಪಠ್ಯ ಪಠ್ಯೇತರ ಚಟುವಟಿಕೆಗಳೊಂದಿಗೆ ಚಿನ್ನರಿಗೆ ಮತ್ತಷ್ಟು ಉತ್ತಮ ಶೈಕ್ಷಣಿಕ ವಾತಾವರಣ ಕಲಿಸಲು ಸಜ್ಜಾಗಿದೆ. ಪಠ್ಯಪೂರಕ ಚಟುವಟಿಕೆ ಪ್ರತಿ ವಿದ್ಯಾರ್ಥಿಯ ಬಗೆಗೂ ವೈಯಕ್ತಿಕ ಗಮನ, ಮಾನಸಿಕ ,ಶೈಕ್ಷಣಿಕ, ದೈಹಿಕ ಬೆಳವಣಿಗೆಗೆ, ಜೀವನ ಕೌಶಲ್ಯ ವೃದ್ಧಿಗೆ ಪೂರಕ ಕಲಿಕೆಗೆ ಆದ್ಯತೆ ನೀಡಲಾಗುತ್ತದೆ. ಯೋಗ ಕಲೆ ಸಂಗೀತ ಚಿತ್ರಕಲೆ ಆಟೊ ಚಟುವಟಿಕೆಗಳ ಕಲಿಕೆಗೆ ತಜ್ಞರಿದ್ದಾರೆ. ಅತ್ಯಾಧುನಿಕ ಸೌಕರ್ಯಗಳ ಸ್ಮಾರ್ಟ್ ಕೊಠಡಿ, ಅತ್ಯುತ್ತಮ ಕಲಿಕಾ ಸಾಮಗ್ರಿ ಇಂಗ್ಲಿಷ್ ಕಲಿಕೆಗೆ ವಿಶಿಷ್ಟ ಹಾಗೂ ನೂತನ ಕಲಿಕಾ ಕ್ರಮ. ಓದಿನ ಆಸಕ್ತಿ ಮೂಡಿಸುವ ಗ್ರಂಥಾಲಯ, ಒಳಾಂಗಣ ಕ್ರೀಡೆ, ಹೊರಾಂಗಣ ಕ್ರಿಯೆ ಅವಕಾಶವಿದೆ. ನುರಿತ ಶಿಕ್ಷಕರ ತಂಡ ರಚನೆಗೊಂಡಿದ್ದು ವಿದ್ಯಾರ್ಥಿಗಳ ಆಗಮನಕ್ಕಾಗಿ ಉಸ್ತುಕರಾಗಿ ಕಾಯುತ್ತಿದ್ದಾರೆ. ಈಗಾಗಲೇ ನಮ್ಮ ಸಂಸ್ಥೆ ಪಠ್ಯ ಹಾಗೂ ಪಟ್ಟಿ ತರ ಚಟುವಟಿಕೆಗಳಲ್ಲಿ ತಮ್ಮದೇ ಚಾಪನ್ನ ಮೂಡಿಸಿದ್ದು ಮುಂದಿನ ಶೈಕ್ಷಣಿಕ ವರ್ಷದಲ್ಲಿ ಮಕ್ಕಳ ಸರ್ವಾಂಗಿನ ಪ್ರಗತಿಗಾಗಿ ಶಿಕ್ಷಕರ ತಂಡ ಸದಾ ಶ್ರಮಿಸುತ್ತದೆ ಎಂದು ಸಂಸ್ಥೆಯ ಮುಖ್ಯಸ್ಥರು ತಿಳಿಸಿದ್ದಾರೆ.


