Tuesday, July 1, 2025

spot_img

ವಿದ್ಯಾಪೋಷಕ್ 72 ನೆಯ ಮನೆ ಹಸ್ತಾಂತರ

ಉಡುಪಿ : ವಿದ್ಯಾಪೋಷಕ್ ದ್ವಿತೀಯ ಪಿ. ಯು ವಿದ್ಯಾರ್ಥಿನಿ ಶ್ರಾವಣಿ (ಶ್ರೀಮತಿ ಶಾಲಿನಿ ಮತ್ತು ಶ್ರೀ ಗಣೇಶ್ ಕೊಠಾರಿ ಇವರ ಪುತ್ರಿ) ಇವಳಿಗೆ ಕುಂದಾಪುರ ತಾಲೂಕಿನ ಕಮಲಶಿಲೆಯಲ್ಲಿ ಉಡುಪಿ ಬನ್ನಂಜೆಯ ಯು. ಎಸ್ . ಶ್ರೀಧರ್ ಶೇಟ್ ಅವರು ತಮ್ಮ ಮಾತೃಶ್ರೀಯವರ ಜನ್ಮ ಶತಾಬ್ದಿಯ ಸವಿನೆನಪಿನಲ್ಲಿ ನಿರ್ಮಿಸಿಕೊಟ್ಟ ‘ಸುಮಿತ್ರಾ ಸುಂದರ’ ಮನೆಯನ್ನು ಕಮಲಶಿಲೆಯ ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದ ಅನುವಂಶಿಕ ಆಡಳಿತ ಮುಕ್ತೇಸರರಾದ ಸಚ್ಚಿದಾನಂದ ಛಾತ್ರಾ ಅವರು ಜ್ಯೋತಿ ಬೆಳಗಿಸಿ ಉದ್ಘಾಟಿಸಿ, ಸಮಾಜದಲ್ಲಿ ಇದ್ದವರು ಇಲ್ಲದವರಿಗೆ ನೀಡುವ ಮನೋಭಾವ, ಅದಕ್ಕೆ ಯಕ್ಷಗಾನ ಕಲಾರಂಗದಂತಹ ಸಂಸ್ಥೆ ದಾನಿಗಳನ್ನೂ ಫಲಾನುಭವಿಗಳನ್ನೂ ಜೋಡಿಸುವ ಕೆಲಸ ಅತ್ಯಂತ ಶ್ಲಾಘನೀಯ ಎಂದರು.

ಅಧ್ಯಕ್ಷತೆ ವಹಿಸಿದ್ದ ಶಾಸಕ ಗುರುರಾಜ ಗಂಟಿ ಹೊಳೆಯವರು ಕಲಾರಂಗದ ಮನೆ ಹಸ್ತಾಂತರ ಕಾರ್ಯಕ್ರಮಕ್ಕೆ ಬಂದಾಗಲೆಲ್ಲ ಸಜ್ಜನರ ಒಡನಾಟದ ಸುಖ ಅನುಭವಿಸುತ್ತೇನೆ, ಯಾವ ಆಡಂಬರ ಪ್ರಚಾರವಿಲ್ಲದೆ ಈ ಸಂಸ್ಥೆ ಮಾಡುತ್ತಿರುವ ಕೆಲಸ ಸಾಮಾಜಿಕ ಸಂಘಟನೆಗಳಿಗೆ ಮಾದರಿಯಾಗಿದೆ ಎಂದು ಅಭಿಪ್ರಾಯ ಪಟ್ಟರು. ಮನೆಯ ಪ್ರಾಯೋಜಕರಾದ ಯು. ಎಸ್. ಶ್ರೀಧರ ಶೇಟ್ ಮಾತನಾಡಿ ಇಲ್ಲದವರಿಗೆ ಮನೆಕಟ್ಟಿ ಕೊಡಬೇಕೆಂಬ ಯೋಚನೆಯಿತ್ತು. ಕಲಾರಂಗ ಅದಕ್ಕೆ ಅವಕಾಶ ಮಾಡಿಕೊಟ್ಟು ನಮ್ಮ ಕೆಲಸ ಸುಲಭಗೊಳಿಸಿತು. ಅರ್ಹ ಫಲಾನುಭವಿಗೆ, ನಾವು ನೀಡುವ ಹಣದ ಒಂದು ರೂಪಾಯಿಯೂ ವ್ಯರ್ಥವಾಗದಂತೆ ಮನೆ ನಿರ್ಮಿಸಿದ ಕಲಾರಂಗಕ್ಕೆ ಕೃತಜ್ಞತೆ ಹೇಳಿದರು.

ಶ್ರೀಮತಿ ರವಿಕಲಾ ಎಸ್. ಶೇಟ್ ತನ್ನ ಅತ್ತೆ ಮಾವಂದಿರ ಕಠಿಣ ದುಡಿಮೆ ಸಮಾಜ ಪ್ರೀತಿಯನ್ನು ಸ್ಮರಿಸಿ ಕೊಂಡರು. ಶ್ರೀಮತಿ ಲಕ್ಷ್ಮೀ ರಮಾನಂದ ಶೇಟ್, ಯು. ಎಸ್. ಶ್ರೀಪತಿ ಶೇಟ್, ಶ್ರೀಮತಿ ಸಂಗೀತಾ ಶ್ರೀಪತಿ, ಅನಂತ ಪ್ರಸಾದ ಶೇಟ್ ಹಾಗೂ ಶುಭನ್ ಶೇಟ್ ಅಭ್ಯಾಗತರಾಗಿ ಭಾಗವಹಿಸಿದ್ದರು. ಸಾಮಾಜಿಕ ಕಾರ್ಯಕರ್ತರಾದ ಬಾಲಚಂದ್ರ ಭಟ್, ವೇಣುಗೋಪಾಲ್, ಕಮಲಶಿಲೆ ಸರಕಾರಿ ಪ್ರೌಢಶಾಲಾ ಮುಖ್ಯೋಪಾಧ್ಯಾಯ ಸುರೇಂದ್ರ ಶೆಟ್ಟಿ, ಯಕ್ಷಗಾನ ಕಲಾರಂಗದ ಉಪಾಧ್ಯಕ್ಷ ವಿ. ಜಿ. ಶೆಟ್ಟಿ, ಕೋಶಾಧಿಕಾರಿ ಪ್ರೊ. ಕೆ. ಸದಾಶಿವ ರಾವ್ ಸದಸ್ಯರುಗಳಾದ ಯು. ವಿಶ್ವನಾಥ ಶೆಣೈ, ಯು. ಎಸ್. ರಾಜಗೋಪಾಲ ಆಚಾರ್ಯ, ಭುವನಪ್ರಸಾದ ಹೆಗ್ಡೆ, ಅನಂತರಾಜ ಉಪಾಧ್ಯ, ಕಿಶೋರ್ ಸಿ. ಉದ್ಯಾವರ ಭಾಗವಹಿಸಿದ್ದರು. ಅಧ್ಯಕ್ಷ ಎಂ. ಗಂಗಾಧರ ರಾವ್ ಸ್ವಾಗತಿಸಿದರು. ನಾರಾಯಣ ಎಂ. ಹೆಗಡೆ ವಂದಿಸಿದರು. ಕಾರ್ಯದರ್ಶಿ ಮುರಲಿ ಕಡೆಕಾರ್ ಪ್ರಸ್ತಾವನೆಯ ಮಾತುಗಳೊಂದಿಗೆ ಕಾರ್ಯಕ್ರಮ ನಿರೂಪಿಸಿ

Related Articles

LEAVE A REPLY

Please enter your comment!
Please enter your name here

Stay Connected

642FansLike
81FollowersFollow
17SubscribersSubscribe
- Advertisement -spot_img

Latest Articles