ಗಂಗೊಳ್ಳಿ : ರೋಟರಿ ಕ್ಲಬ್ ಗಂಗೊಳ್ಳಿ ಇದರ ವತಿಯಿಂದ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ ಗುಜ್ಜಾಡಿ ಇಲ್ಲಿನ ಅಕ್ಷರ ದಾಸೋಹ ಯೋಜನೆಗೆ ಅನುಕೂಲ ಆಗುವಂತೆಮಕ್ಕಳಿಗೆ ಊಟ ಬಡಿಸಲು ಸ್ಟೀಲಿನ ಟ್ರಾಲಿ ಮತ್ತು ಪಾತ್ರೆಯನ್ನು ಕೊಡುಗೆಯಾಗಿ ನೀಡಲಾಯಿತು. ರೋಟರಿಯ ಅಧ್ಯಕ್ಷರು ಮತ್ತು ಸದಸ್ಯರು ಹಾಗೂ ಶಾಲಾ ಮುಖ್ಯ ಶಿಕ್ಷಕರಾದ ಗಂಗಾಧರ ಬಂಟ, sdmc ಅಧ್ಯಕ್ಷರಾದ ನಾರಾಯಣ ಕೆ ಮತ್ತು ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷರಾದ ರಾಮನಾಥ್ ಚಿತ್ತಾಲ್ ಹಾಗೂ ಶಾಲಾ ಶಿಕ್ಷಕರು ಉಪಸ್ಥಿತರಿದ್ದರು



