ರಿಷಬ್ ಶೆಟ್ಟಿ ಜನ್ಮದಿನ 7 July 1983, ಜನ್ಮದಿನ ನೇರವಾಗಿ ಕೇತುವನ್ನು ಪ್ರತಿನಿಧಿಸುತ್ತದೆ , ಅಂದರೆ ವ್ಯಕ್ತಿಯು ಛಲಗಾರ , ಬುದ್ದಿವಂತ . .ಹಾಗೂ ಅಧ್ಯಾತ್ಮ, ದೇವರು , ಸಮಾಜಸೇವೆ.. ಇವೆಲ್ಲವೂ ಜೊತೆಗೂಡಿರುತ್ತದೆ. ಆದರೆ.. ನೇರ ಲಾಭದ ಅಥವಾ ಬರಿ ಹಣಗಳಿಸುವ ಯೋಜನೆಯಿಂದ ಯಾವುದೇ ಕಾರ್ಯ ಮಾಡಿದಲ್ಲಿ ಕೇತುವು ಅನುಗ್ರಹಿಸುವುದಿಲ್ಲ. ಕೇತುವು ಮೋಕ್ಷಕಾರಕ ನಾದ್ದರಿಂದ ಹಣಕ್ಕೆ ಬೆಲೆ ಕೊಡುವುದಿಲ್ಲ. ಬದಲಾಗಿ ಹಿಂದಿನ ಜನ್ಮದ ಬಾಕಿ ಕರ್ಮಗಳನ್ನು ನೆನಪಿಸುತ್ತಿರುತ್ತಾನೆ. ಸಮಯಕ್ಕೆ ಸರಿಯಾದ ಮಾರ್ಗದರ್ಶನ ಸಿಕ್ಕಿ ನಮ್ಮ ಜವಾಬ್ಧಾರಿಗಳನ್ನು ಅರ್ಥಮಾಡಿಕೊಂಡು ಜೀವನಶೈಲಿಯನ್ನು ಬದಲಾಯಿಸಿಕೊಂಡಲ್ಲಿ ಕೇತುವು ಸಂತೃಪ್ತಿಗೊಂಡು ನಿಮ್ಮ ಶ್ರಮಕ್ಕೆ ನಿರೀಕ್ಷಿಸದ ಫಲಗಳನ್ನು ನೀಡುತ್ತಾನೆ. ವ್ಯಕ್ತಿಗೆ ತಪಸ್ವಿ ಮನೋಭಾವವಿರುತ್ತದೆ. .ಜೊತೆಗೆ ಕಂಡಕ್ಟರ್ ಅಥವಾ ಭಾಗ್ಯಾಂಕ ಎಂಟು ಆಗಿರುವುದರಿಂದ ಶನಿಯು ಕೂಡ ಇವರನ್ನು ಆಳುತ್ತಾನೆ ಮತ್ತು ವ್ಯಕ್ತಿಗೆ ಅಹಂ ಇರೋದಿಲ್ಲ ಆದರೆ ಶಿಸ್ತು ಬದ್ಧನಾಗಿದ್ದು ತನ್ನ ತತ್ವಗಳಿಗೆ ಸರಿ ಹೊಂದುವ ಮಾತುಗಳಿಗೆ ಅಂತಹ ವ್ಯಕ್ತಿಗಳಿಗೆ ಮಾತ್ರ ಬೆಲೆಕೊಡುತ್ತಾನೆ, ಇಲ್ಲದಿದ್ದಲ್ಲಿ ಒಂದು ಮುಗುಳ್ನಗೆಯಿಂದ ಮುಂದಕ್ಕೆ ಹೋಗುತ್ತಾನೆ. ಅಂದರೆ ಈಗ ನಡೆಯುತ್ತಿರುವುದೆಲ್ಲವೂ ಪೂರ್ವಜನ್ಮದ ಪುಣ್ಯವೆಂದೇ ಅರ್ಥ

ಕೇತುವಿನ ನಿಬಂಧನೆಗಳು ಮತ್ತು ರಿಷಬ್ !
ಕೇತುವು ಹಣದ ವ್ಯಾಮೋಹ ಬಿಡು , ಪ್ರತಿದಿನವೂ ಹೊಸ ಹೊಸ ಸವಾಲುಗಳನ್ನು ಸ್ವೀಕರಿಸು, ಕಲಿ, ಅಧ್ಯಾತ್ಮಕ್ಕೆ ಬಾ, ಸಂಸಾರ ಮಾಯೆ ಭ್ರಮೆಯಿಂದ ಮೋಕ್ಷದತ್ತ ಬಾ , ಶರಣಾಗು , ದಾನ ಧಾರ್ಮ ಮಾಡು , ವಿದ್ಯಾರ್ಥಿಗಳಿಗೆ , ಕ್ರೀಡೆಗೆ, ಅಂಗವಿಕಲರಿಗೆ ಮತ್ತು ಸಮಾಜದಲ್ಲಿ ಕಡು ಬಡವರಿಗೆ ಸಹಾಯ ಮಾಡು ಎನ್ನುತ್ತಾನೆ. ಹಾಗಾದರೆ ಕೇತುವಿನ ನಿಬಂಧನೆಗಳನ್ನು ರಿಷಬ್ ಹೇಗೆ ಪೂರೈಸಿದರು.
ಅವರಿಗೆ ಬಹಳ ದೊಡ್ಡ ವಿಜಯವನ್ನು ತಂದುಕೊಟ್ಟದ್ದು ಕಾಂತಾರ ಆದ್ದರಿಂದ ಅದನ್ನು ವಿಶ್ಲೇಶಣೆ ಮಾಡೋಣ..
ಕಾಂತಾರ ರಿಲೀಸ್ ದಿನಾಂಕ 30 September 2022, ಇಲ್ಲಿ ಮೊದಲನೇ ಕಾಂತಾರವನ್ನು ಮಾತ್ರ ವಿಶ್ಲೇಷಿಸೋಣ.. ಎರಡನೆಯ ಕಾಂತಾರವನ್ನು ವಿಶ್ಲೇಷಿಸುವುದರಲ್ಲಿ ಏನೂ ಅರ್ಥವಿಲ್ಲ ಯಾಕೆಂದರೆ ಮೊದಲನೇ ಕಾಂತಾರವು ಭದ್ರ ಬುನಾದಿಯನ್ನು ಹಾಕಿ ಕೊಟ್ಟದ್ದರಿಂದ ಎರಡನೆಯ ಕಾಂತಾರದ ಅರ್ಧ ಅಥವಾ ಮುಕ್ಕಾಲು ಪಾಲು ಯಶಸ್ಸು ಮೊದಲನೇ ಕಾಂತಾರದ್ದೇ ಆಗಿದೆ . . .

ದಿನಾಂಕ 30 September 2022
ರಿಷಬ್ ರವರಿಗೆ ನ್ಯೂಮರಾಲಜಿಯ ಪ್ರಕಾರ ಆ ದಿನಾಂಕವು ಕೇತುವಿನ ಮಹಾದೆಸೆಯಡಿಯಲ್ಲಿ ಬರುತ್ತದೆ . .ಆಳುವ ಗ್ರಹದ ಮಹಾದೆಸೆ ಎಂದಾಗ ಅದೃಷ್ಟ ಕಟ್ಟಿಟ್ಟಬುತ್ತಿ. ಇಲ್ಲಿ ಕೇತು ಇರುವುದರಿಂದ ರಿಷಬ್ ರವರಿಗೆ ಪಿತೃಗಳ ಬಹಳ ದೊಡ್ಡ ಆಶೀರ್ವಾದವಿದೆ ಹಾಗೂ ಇವರ ಕುಟುಂಬದ ಅಳಿದುಳಿದ ಧಾರ್ಮಿಕ ಕೆಲಸಗಳನ್ನು ಇವರ ಹತ್ತಿರವೇ ಮಾಡಿಸಿಕೊಳ್ಳುತ್ತದೆ. 2022 ಅವರಿಗೆ ಪರ್ಸನಲ್ ಇಯರ್ ಎರಡು ಅಂದರೆ ನಟನೆ ಅಥವಾ ಯಾವುದೇ ರೀತಿಯಲ್ಲಿ ಜನ ಸಮೂಹದ ಮನ ಮುಟ್ಟಲು ಬಹಳ ಸಪೋರ್ಟ್ ಮಾಡುತ್ತದೆ. ಅಲ್ಲದೆ ವಿಜಯದ ಮುನ್ಸೂಚನೆಯನ್ನೂ ಕೂಡಾ ನೀಡುತ್ತದೆ, ದಿನಾಂಕದಲ್ಲಿ ಗುರುವಿನ ಬಲವು ಕೂಡ ಇದೆ. ಕಾಂತಾರವನ್ನು ಒಂದು ಮಗು ಎಂದು ಪರಿಗಣಿಸಿ ಅದರ ನ್ಯೂಮೆರಾಲಜಿಯ ವಿಶ್ಲೇಷಣೆ ಮಾಡಿದಾಗ ಗುರು ಮತ್ತು ಮಂಗಳ ಅದನ್ನು ಆಳುತ್ತಾರೆ. ಹಾಗಾಗಿ ಚಲನಚಿತ್ರಕ್ಕೆ ಯಾವುದೇ ಕಾನೂನಿನ/ಇತರ ಅಡಚಣೆಗಳು ಬಂದರೂ ಬೆಂಕಿಯ ಚೆಂಡಿನಂತೆ ಮುನ್ನುಗ್ಗಿ ಯಶಸ್ಸನ್ನು ದಾಖಲಿಸಿತು.
ಕಾಂತಾರವು ಕೂಡ ಒಂದು ಲವ್ ಅಥವಾ ವ್ಯಾಪಾರಿ ಸರಕಿನ ಚಿತ್ರವಾಗಿರದೆ , ಒಂದು ನೈಜ ಬದುಕಿನ ಆವರಣದಲ್ಲಿ ಕೇತುವಿನ ಷರತ್ತುಗಳಿಗೆ ಬದ್ಧವಾದ ಚಿತ್ರವೇ ಆಗಿರುತ್ತದೆ. ಚಿತ್ರದಲ್ಲಿ ಜೀವನದಲ್ಲಿ ತೃಪ್ತಿಯಿಲ್ಲದ ರಾಜ ತನ್ನ ಬಹಳಷ್ಟು ಆಸ್ತಿಯನ್ನು ಕಲ್ಲಿನ ರೂಪದಲ್ಲಿರುವ ದೈವಕ್ಕಾಗಿ ದೈವ ಹೇಳಿದಷ್ಟು ಜಾಗವನ್ನು ಗ್ರಾಮದ ಜನತೆಗೆ ನೀಡಿ ದೈವವನ್ನು ತನ್ನದಾಗಿಸಿಕೊಳ್ಳುವುದು . .ಅರ್ಥಾತ್ ಇರುವುದೆಲ್ಲವ ತ್ಯಜಿಸಿ ಮೋಕ್ಷದ ಕಡೆಗೆ ನಡೆಯುವುದು !

ಅದೆಲ್ಲವೂ ಕೇತುವಿನ ಕೈವಾಡವೇ !
ಪೂರ್ವಜನ್ಮದಲ್ಲಿ ಅನುಭವಿಸಿರುವೆ ಈಗ ಬೇಡ ಸಾಕು ಎಂದಂತೆ. ಕೇತುವಿನಿಂದ ಆಳಲ್ಪಡುವವನಿಗೆ ಏನೇ ಸಾಧನೆ ಮಾಡಿದರು ತೃಪ್ತಿ ಇರುವುದಿಲ್ಲ , ಹಾಗಾದರೆ ತೃಪ್ತಿ ಎಲ್ಲಿಂದ ಸಿಗುತ್ತದೆ ? ಅವರಿಗೆ ತೃಪ್ತಿ ಕೇವಲ ಧ್ಯಾನಾಸಕ್ತರಾದಲ್ಲಿ/ ಧ್ಯಾನಮಗ್ನರಾದಲ್ಲಿ ಮಾತ್ರ ಅತೀವ ತೃಪ್ತಿ ಸಿಗುತ್ತದೆ. ಇದರಲ್ಲಿ , ಶಿವನ ಹುಡುಗಾಟ, ಯೌವನ , ಸಂಸಾರ , ಮತ್ತು ಆದ್ಯಾತ್ಮದ ಸೆಳೆತ . . ಹಾಗೆ ವಿಧಿಲಿಖಿತವನ್ನು ಬದಲಾಯಿಸಹೊರಟವನಿಗೆ (ದಣಿ) ತಕ್ಕ ಶಿಕ್ಷೆ, ಕ್ರೀಡೆಯಾಗಿ ಕಂಬಳ ಎಲ್ಲವೂ ಕೇತುವಿನ ಅನುಗ್ರವನ್ನು ದೊಡ್ಡಮಟ್ಟದಲ್ಲಿ ಪಡೆಯಲು ಬಹಳ ಸಹಾಯಕಾರಿಯಾಗಿದೆ.
ಕೇತುವಿನ ನಿಭಂದನೆಗಳ ಪೂರೈಕೆ . .
ಇಲ್ಲಿ ಕಾಂತಾರ ಯಶಸ್ಸಿನ ನಂತರ ರಿಷಬ್ ಶೆಟ್ಟಿಯವರು ತಮ್ಮ ಊರಿನ ಹತ್ತಿರದ ಸರಕಾರಿ ಶಾಲೆಯನ್ನು ದತ್ತಕ್ಕೆ ತೆಗೆದುಕೊಂಡದ್ದು , ಆನೆಗುಡ್ಡೆ ಗಣಪತಿ (ಕೇತುವಿನ ಬದಲು ನಾವು ಪೂಜಿಸುವ ದೇವರು )ಯಿಂದ ಹಿಡಿದು ಅನೇಕ ದೇವಸ್ಥಾನಗಳ ಭೇಟಿಯ ಬಗ್ಗೆ ನಾವೆಲ್ಲಾ ತಿಳಿದುಕೊಂಡಿದ್ದೇವೆ. ಎಲ್ಲಕ್ಕೂ ಮೊದಲು ಪ್ರಶಾಂತ್ ಶೆಟ್ಟಿ ಯಿಂದ ಸಂಖ್ಯಾಶಾಸ್ತ್ರದ ಮಾರ್ಗದರ್ಶನ ಮೇರೆಗೆ ರಿಷಬ್ ಆಗಿ ಬದಲಾದದ್ದು ಎಲ್ಲವೂ ವಿಧಿಯ ಇಚ್ಛೆ . .
ರಿಷಬ್ ಗೆ ಈಗ ಜವಾಬ್ದಾರಿಗಳು ಮತ್ತೂ ಜಾಸ್ತಿಯಾಗಿವೆ . . ಅವರ ಜವಾಬ್ದಾರಿಗೆ ತಕ್ಕ ಶಕ್ತಿ ಹಾಗೂ ಯಶಸ್ಸು ಆ ಗಣೇಶನು ದಯಪಾಲಿಸಲಿ
***********************************************************************
Dinesh holla, Numerologist – contact – 9591906335
Decode – Transform – Prosper
***********************************************************************

Rishab Shetty & Kantara!!
Rishab Shetty was born on 7th July 1983. His birth date directly represents Ketu, which signifies a person who is determined, intelligent, spiritual, devoted to God, and inclined towards social service. However, Ketu never blesses actions done solely for profit or financial gain. Since Ketu is the significator of Moksha (liberation), it does not value money. Instead, it constantly reminds the native of their pending karmas from past lives.If one receives proper guidance at the right time, understands their responsibilities, and adapts their lifestyle accordingly, Ketu becomes satisfied and rewards the person with unexpected results for their hard work.
Such individuals carry a tapasvi (ascetic) mindset. Rishab’s conductor number (Bhagyank) is 8, which brings Saturn’s influence. Hence, he is disciplined, principled, and values only those who align with his philosophy. He has no arrogance but immense self-discipline. Otherwise, he simply smiles and moves on. Thus, everything unfolding in his life today is the fruit of past-life merits.

Ketu’s Conditions and Rishab’s Journey
Ketu demands: “Detach from greed for money, embrace new challenges, learn continuously, walk the path of spirituality, rise above worldly illusions, surrender to the divine, perform charity, help students, sports, the disabled, and the underprivileged.” Now, how did Rishab fulfill Ketu’s conditions? The answer lies in his monumental success — Kantara.
Kantara – A Turning Point
Release Date: 30th September 2022
On this day, numerologically, Rishab was under Ketu Mahadasha. When the ruling planet’s Mahadasha operates, destiny itself supports the individual. In his case, Ketu brought the immense blessings of ancestors, compelling him to carry forward unfinished spiritual duties of his lineage. The year 2022 was his Personal Year 2, which supports acting, performance, and winning the hearts of the masses. It also carried Guru’s (Jupiter’s) strength, signaling victory.
If we treat Kantara as a newborn and analyze its numerology, it comes under Jupiter and Mars. Therefore, even if legal or external obstacles appeared, the movie surged forward like a fireball, achieving grand success. Importantly, Kantara was not a typical love story or commercial entertainer. Instead, it resonated with Ketu’s philosophy.

Ketu’s Symbolism in Kantara
In the film, the dissatisfied king donates much of his wealth (in the form of land) to the deity and the village people in pursuit of peace. Symbolically, it is about renunciation and walking towards Moksha. This is pure Ketu’s influence — the feeling of “I have experienced enough in past lives, I no longer desire.” A person ruled by Ketu never finds lasting satisfaction in worldly achievements; true fulfillment comes only through meditation and spiritual absorption.
Kantara also showcased:
The playful, youthful, yet spiritual pull of Lord Shiva
The consequences of attempting to alter destiny
The Kambala sport as divine expression
All these strongly align with Ketu’s blessings.
Rishab’s Post-Success Path
After Kantara’s success, Rishab Shetty adopted a government school near his village, visited several temples (including Anegudde Ganapati, a deity we worship as Ketu’s form), and engaged in social service. Notably, his transformation Prashanth to “Rishab” itself was guided by numerology expert — all part of destiny’s design. Now, Rishab’s responsibilities have multiplied. May Lord Ganesha grant him the strength and success to fulfill them with grace.
***********************************************************************
Dinesh holla, Numerologist – contact – 9591906335
Decode – Transform – Prosper
***********************************************************************
