Wednesday, March 4, 2026

spot_img

ರಜತಪೀಠ ಹಾಗೂ ಬೆಳ್ಳಿಯ ಪ್ರಭಾವಳಿಯ ಮೆರವಣಿಗೆಗೆ ಶಾಸಕ ಎ.ಕಿರಣ್  ಕೊಡ್ಗಿ ಚಾಲನೆ

ಕುಂದಾಪುರ: ಕುಂದಾಪುರ ದಸರಾ ಮಹೋತ್ಸವ ಎಂದೆ ಪ್ರಖ್ಯಾತಿ ಪಡಿದಿರುವ ಬ್ರಹ್ಮಶ್ರೀ ನಾರಾಯಣ ಗುರು ಯುವಕ ಮಂಡಲ ಇವರ 48ನೇ ಕುಂದಾಪುರ ದಸರಾ ಮಹೋತ್ಸವದ, ಅಂಗವಾಗಿ ತಾಯಿ ಶಾರದ ಮಾತೆಗೆ ಅರ್ಪಿಸುವಂತಹ ಬೆಳ್ಳಿಯ ರಜತಪೀಠ ಹಾಗೂ ಬೆಳ್ಳಿಯ ಪ್ರಭಾವಳಿ ಮತ್ತು ಸಮರ್ಪಣ ಮೆರವಣಿಗೆ ಗೆ ಕುಂದಾಪುರ ಶಾಸಕ ಕಿರಣ್‌ ಕೊಡ್ಗಿ ಚಾಲನೆ ನೀಡಿದರು.

ಧರ್ಮಸ್ಥಳ ಶ್ರೀ ರಾಮ ಕ್ಷೇತ್ರ ಮಹಾಸಂಸ್ಥಾನ ಪರಮಪೂಜ್ಯ ಮಹಾಮಂಡಲೇಶ್ವರ 1008 ಸದ್ಗುರು ಶ್ರೀ ಶ್ರೀ ಶ್ರೀ ಸ್ವಾಮಿ ಸದ್ಗುರು ಬ್ರಹ್ಮಾನಂದ ಸರಸ್ವತಿ ಮಹಾರಾಜರು ಪೀಠಾಧೀಶರು ಇವರ ಉಪಸ್ಥಿತಿಯಲ್ಲಿ  ಕುಂದಾಪುರ ಶಾಸ್ತ್ರಿ ವೃತ್ತದಿಂದ ರಜತ ಪೀಠ ಮತ್ತು ಬೆಳ್ಳಿಯ ಪ್ರಭಾವಳಿಯ ಮೆರವಣಿಗೆ ಚಾಲನೆ ನೀಡಲಾಯಿತು.

ವೈಭವದ ಮೆರವಣಿಗೆ ಕುಂದಾಪುರದ ಮುಖ್ಯ ರಸ್ತೆಗಳ ಮೂಲಕ ಸಾಗಿ ಕುಂದಾಪುರ ನಾರಾಯಣಪುರ ಕಲ್ಯಾಣ ಮಂಟಪ ತಲುಪಿತು. ಈ ಸಂದರ್ಭದಲ್ಲಿ ಬಿಲ್ಲವ ಸಮಾಜ ಬಾಂಧವದ ಮುಖಂಡರು, ನಾರಾಯಣ ಗುರು ಯುವಕ ಮಂಡಲದ ಸದಸ್ಯರು ನೂರಾರು ಭಕ್ತ ಸಮೂಹ ನೆರೆದಿದ್ದರು.

Related Articles

LEAVE A REPLY

Please enter your comment!
Please enter your name here

Stay Connected

642FansLike
81FollowersFollow
17SubscribersSubscribe
- Advertisement -spot_img

Latest Articles