ಉಡುಪಿ : ಬ್ರಹ್ಮಾವರ ಬಾರ್ಕೂರಿನ ಮೂಡುಕೇರಿಯಲ್ಲಿರುವ ಶ್ರೀ ವೇಣುಗೋಪಾಲ ಕೃಷ್ಣ ದೇವಸ್ಥಾನದಲ್ಲಿ ಕೃಷ್ಣ ಜನ್ಮಾಷ್ಟಮಿ ಆಚರಣೆ ನಡೆಯಿತು.

ಈ ಪ್ರಯುಕ್ತ ಬಾರ್ಕೂರಿನ ರಂಗೋಲಿ ಕಲಾವಿದೆ ವಿಶಾಲ ಮಹೇಶ್ ಪೂಜಾರಿ ಅವರು ವೇಣುಗೋಪಾಲನ ಚಿತ್ರವನ್ನು ರಂಗೋಲಿಯಲ್ಲಿ ಬಿಡಿಸಿ ಗಮನ ಸೆಳೆದಿದ್ದಾರೆ.

ಸುಮಾರು ಏಳು ಅಡಿ ಉದ್ದ ಆರು ಅಡಿ ಅಗಲದ ವೇಣುಗೋಪಾಲ ನಿಂತ ಭಂಗಿಯ ದೇವಾಲಯದ ವಿಗ್ರಹದ ರಂಗೋಲಿ ಭಕ್ತರನ್ನು ಸೆಳೆಯಿತು.



