Saturday, September 12, 2026

spot_img

ಯುವತಿ ನಾಪತ್ತೆ..

ಉಡುಪಿ : ಕಿನ್ನಿಮೂಲ್ಕಿ ವೇಗಸ್ ಟೌನ್‌ಶಿಪ್‌ನಲ್ಲಿ ವಾಸವಾಗಿದ್ದ ಪೂಜಾ (18) ಎಂಬ ಯುವತಿ ಸೆ.6ರಂದು ಮಧ್ಯರಾತ್ರಿ ಮನೆಯಿಂದ ನಾಪತ್ತೆಯಾಗಿದ್ದಾರೆ.

ಯುವಕನೊಬ್ಬನನ್ನು ಪ್ರೀತಿಸುತ್ತಿದ್ದು, ಆತನೊಂದಿಗೆ ವಿವಾಹವಾಗುತ್ತಿರುವುದಾಗಿ ಹಾಗೂ ತನ್ನನ್ನು ಹುಡುಕಬಾರದೆಂದು ಪತ್ರ ಬರೆದಿಟ್ಟು ಮನೆಯಿಂದ ತೆರಳಿದ್ದಾರೆ ಎಂದು ಉಡುಪಿ ನಗರ ಪೊಲೀಸ್ ಠಾಣೆಗೆ ನೀಡಿರುವ ದೂರಿನಲ್ಲಿ ತಿಳಿಸಲಾಗಿದೆ.

ನಾಪತ್ತೆಯಾಗಿರುವ ಯುವತಿ ಸುಮಾರು 4 ಅಡಿ 8 ಇಂಚು ಎತ್ತರ, ಗೋದಿ ಮೈಬಣ್ಣ ಹೊಂದಿದ್ದು, ಕನ್ನಡ ಹಾಗೂ ತುಳು ಭಾಷೆ ಮಾತನಾಡುತ್ತಾರೆ. ಯುವತಿಯ ಕುರಿತು ಯಾವುದೇ ಮಾಹಿತಿ ದೊರೆತಲ್ಲಿ ಉಡುಪಿ ನಗರ ಪೊಲೀಸ್ ಠಾಣೆ 0820-2520444, ಪೊಲೀಸ್ ನಿಯಂತ್ರಣ ಕೊಠಡಿ 0820-2526444, ಪೊಲೀಸ್ ನಿರೀಕ್ಷಕರು 9480805408 ಅಥವಾ ಪೊಲೀಸ್ ಉಪನಿರೀಕ್ಷಕರು 9080805445 ಸಂಖ್ಯೆಗೆ ಸಂಪರ್ಕಿಸುವಂತೆ ಠಾಣಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Related Articles

LEAVE A REPLY

Please enter your comment!
Please enter your name here

Stay Connected

642FansLike
81FollowersFollow
17SubscribersSubscribe
- Advertisement -spot_img

Latest Articles