Wednesday, March 4, 2026

spot_img

ಯುವ ರೆಡ್ ಕ್ರಾಸ್ ಹಾಗೂ ರೋವರ್ಸ್ ಮತ್ತು ರೇಂಜರ್ಸ್ ಘಟಕದ ಸಮಾರೋಪ ಸಮಾರಂಭ

ಉಡುಪಿ: ಮಹಾತ್ಮ ಗಾಂಧಿ ಸ್ಮಾರಕ ಸಂಧ್ಯಾ ಕಾಲೇಜಿನಲ್ಲಿ ಯುವ ರೆಡ್ ಕ್ರಾಸ್ ಮತ್ತು ರೋವರ್ಸ್–ರೇಂಜರ್ಸ್ ಘಟಕಗಳ ಸಂಯುಕ್ತ ಸಮಾರೋಪ ಸಮಾರಂಭವು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕುಕ್ಕುಜೆ ಕಾರ್ಕಳ ಇಲ್ಲಿ ನಡೆಯಿತು.

 ಹೆಬ್ರಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಸಹ ಶಿಕ್ಷಕಿ ಶ್ರೀಮತಿ ಯಶೋಧಾ ಹೆಗ್ಡೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿ, ಯುವ ರೆಡ್ ಕ್ರಾಸ್ ಮತ್ತು ರೋವರ್ಸ್–ರೇಂಜರ್ಸ್ ಘಟಕಗಳು ವಿದ್ಯಾರ್ಥಿಗಳಲ್ಲಿ ಮಾನವೀಯತೆ, ಸಾಮಾಜಿಕ ಹೊಣೆಗಾರಿಕೆ ಮತ್ತು  ಸೇವಾಭಾವ ಬೆಳೆಸುವಲ್ಲಿ ಮಹತ್ತರ ಪಾತ್ರವಹಿಸುತ್ತವೆ, ವಿದ್ಯಾರ್ಥಿಗಳು ಸಮಾಜಮುಖಿ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವ ಮೂಲಕ ರಾಷ್ಟ್ರ ನಿರ್ಮಾಣದಲ್ಲಿ ತಮ್ಮದೇ ಆದ ಕೊಡುಗೆಯನ್ನು ನೀಡಬೇಕು ಎಂದು ಕರೆ ನೀಡಿದರು.

 ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಡಾ। ದೇವಿದಾಸ್ ಎಸ್. ನಾಯಕ್ ಅವರು ಮಾತನಾಡಿ, ವಿದ್ಯಾರ್ಥಿಗಳಲ್ಲಿರುವ ಶಕ್ತಿ, ಶಿಸ್ತು, ಸೇವಾಭಾವ ಹಾಗೂ ದೇಶಪ್ರೇಮವನ್ನು ಉತ್ತೇಜಿಸುವಲ್ಲಿ ಇಂತಹ ಘಟಕಗಳು ಸೇತುವೆಯಂತೆ ಕಾರ್ಯನಿರ್ವಹಿಸುತ್ತವೆ ಎಂದು ಅಭಿಪ್ರಾಯಪಟ್ಟರು. ರೆಡ್ ಕ್ರಾಸ್ ಶಿಬಿರಾಧಿಕಾರಿ ಕು .ದೀಪಿಕಾ, ರೇಂಜರ್ಸ್ ಹಾಗೂ ರೋವರ್ಸ್ ನ ಶಿಬಿರಾಧಿಕಾರಿಗಳಾದ ಸ್ಟಾಲಿನ್ ಡಿಸೋಜಾ ಹಾಗೂ ಕು. ಅಕ್ಷತಾ ನಾಯಕ್, ಎನ್ ಎಸ್ ಎಸ್ ನ ಶಿಬಿರಾಧಿಕಾರಿಯಾದ ಸನತ್ ಕೋಟ್ಯಾನ್ ಉಪಸ್ಥಿತರಿದ್ದರು.  ಶ್ರೇಷ್ಠ ಸ್ವಾಗತಿಸಿ, ರಕ್ಷಿತಾ ಅತಿಥಿ ಪರಿಚಯ ನೀಡಿ ,ಭಾರ್ಗವ ಭಟ್ ಧನ್ಯವಾದ ಸಮರ್ಪಿಸಿ , ನಿಕ್ಷಿತಾ ನಿರೂಪಿಸಿದರು.

Related Articles

LEAVE A REPLY

Please enter your comment!
Please enter your name here

Stay Connected

642FansLike
81FollowersFollow
17SubscribersSubscribe
- Advertisement -spot_img

Latest Articles