Thursday, March 5, 2026

spot_img

ಮೊಬೈಲ್‌ ಕೊಡಿಸಿಲ್ಲ ಎಂಬ ಕಾರಣಕ್ಕೆ ವಿದ್ಯಾರ್ಥಿ ಆತ್ಮಹತ್ಯೆ !?

ಉಡುಪಿ : ಪ್ರಥಮ ಪಿಯುಸಿ ವಿದ್ಯಾರ್ಥಿಯೋರ್ವ ತಾಯಿ ಮೊಬೈಲ್‌ ಕೊಡಿಸಿಲ್ಲ ಎನ್ನುವ ಕಾರಣಕ್ಕೆ ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ. ಕಾರ್ಕಳ ತಾಲೂಕಿನ ನಿಟ್ಟೆ ಪ್ರದೇಶದಲ್ಲಿ ಈ ಘಟನೆ ನಡೆದಿದ್ದು, ಸುಮಂತ್ ನಂದಳಿಕೆ (16) ನೀರು ನಿಂತಿದ್ದ ಕಲ್ಲುಕೋರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

 ಮಗನಿಗೆ ಹೊಸ ಮೊಬೈಲ್ ಕೊಡಿಸದಿದ್ದಕ್ಕೆ ಅಸಮಾಧಾನಗೊಂಡಿದ್ದ ಸುಮಂತ್, ಮನೆಯಲ್ಲಿ ಅಮ್ಮ ಸುರೇಖಾ ಅವರನ್ನು ಒತ್ತಾಯಿಸುತ್ತಿದ್ದನೆಂದು ತಿಳಿದುಬಂದಿದೆ. ಹಳೆ ಮೊಬೈಲ್ ದುರಸ್ತಿಗೆ ನೀಡಲಾಗಿದ್ದರಿಂದ, ಕೆಲವು ತಿಂಗಳುಗಳ ನಂತರ ಹೊಸದನ್ನು ಕೊಡಿಸುವ ಭರವಸೆ ತಾಯಿ ನೀಡಿದ್ದರೂ, ಸುಮಂತ್ ಆತ್ಮಹತ್ಯೆಗೆ ಶರಣಾಗಿದ್ದಾನೆ.

 ಸುಮಂತ್ ತಂದೆ ಮಂಜುನಾಥ್ ಕೆಲ ವರ್ಷಗಳ ಹಿಂದೆ ಆತ್ಮಹತ್ಯೆ ಮಾಡಿಕೊಂಡಿದ್ದರು. ಒಬ್ಬನೇ ಮಗನಾದ ಸುಮಂತ್‌ನ ಆತ್ಮಹತ್ಯೆಯಿಂದ ತಾಯಿ ಕಂಗಾಲಾಗಿದ್ದಾರೆ. ಈ ಸಂಬಂಧ ಕಾರ್ಕಳ ಗ್ರಾಮಾಂತರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Related Articles

LEAVE A REPLY

Please enter your comment!
Please enter your name here

Stay Connected

642FansLike
81FollowersFollow
17SubscribersSubscribe
- Advertisement -spot_img

Latest Articles