Thursday, October 23, 2025

spot_img

ಮಸ್ಕತ್-ಮಂಗಳೂರು ನೇರವಿಮಾನ ಸೇವೆ ಸ್ಥಗಿತ, ಪುನಃಪ್ರಾರಂಭಿಸಲು ಸಂಸದ ಕೋಟಕೇಂದ್ರ ಸಚಿವರಿಗೆ ಪತ್ರ.

ಉಡುಪಿ : ಮಸ್ಕತ್ ಮತ್ತು ಕರಾವಳಿ ಪ್ರದೇಶದ ಅನಿವಾಸಿ ಭಾರತೀಯರು ಮಸ್ಕತ್ ನಿಂದ ಮಂಗಳೂರು ನೇರ ವಿಮಾನ ಸೇವೆಯನ್ನು ಮರು ಪ್ರಾರಂಭಿಸಲು ಸಂಸದ ಕೋಟ ಶ್ರೀನಿವಾಸ ಪೂಜಾರಿಯವರಿಗೆ ಮನವಿಯನ್ನು ಸಲ್ಲಿಸಿದ್ದು, ಈ ಕುರಿತು ಸಂಸದರು ಮಸ್ಕತ್-ಮಂಗಳೂರು ನೇರ ವಿಮಾನಯಾನ ಸೇವೆ ಪುನರಾರಂಭಿಸಲು ಕೇಂದ್ರ ಸಚಿವರಿಗೆ ಮನವಿ ಮಾಡಿದ್ದಾರೆ.

 ಈ ಬಗ್ಗೆ ಪತ್ರಿಕೆಯ ವರದಿಯನ್ನು ಗಮನಿಸಿದ ಸಂಸದ ಕೋಟ ಕೇಂದ್ರ ವಿಮಾನಯಾನ ಸಚಿವರಾದ ಕಿಂಜಿರಪು ರಾಮಮೋಹನ್ ನಾಯ್ಡು ಇವರಿಗೆ ಪತ್ರ ವ್ಯವಹಾರವನ್ನು ಮಾಡಿ, ಮಂಗಳೂರು- ಮಸ್ಕತ್ ನೇರ ವಿಮಾನಯಾನ ಸೇವೆಯನ್ನು ಕಳೆದ 3 ತಿಂಗಳಿನಿಂದ ತಾತ್ಕಾಲಿಕವಾಗಿ ಸ್ಥಗಿತಗೊಳಿಸಿರುವುದರಿಂದ ಅನಿವಾಸಿ ಭಾರತೀಯರು ತೊಂದರೆಯನ್ನು ಅನುಭವಿಸುತ್ತಿದ್ದಾರೆ ಹಾಗೂ ಈ ಮಾರ್ಗದಲ್ಲಿ ಮೊದಲು ವಾರಕ್ಕೆ 4 ವಿಮಾನಗಳು ನಿಯಮಿತವಾಗಿ ಸಂಚಾರ ನಡೆಸುತ್ತಿದ್ದು, ದಶಕಗಳಿಂದ ನಿರಂತರವಾಗಿ ನಡೆದಿದ್ದ ಈ ವಿಮಾನ ಸೇವೆ ಸ್ಥಗಿತಗೊಂಡಿದ್ದರಿಂದ ಕರಾವಳಿ ಭಾಗದ ಜನರಿಗೆ ತುಂಬಾ ತೊಂದರೆಯುಂಟಾಗಿರುವುದರಿಂದ ಕೂಡಲೇ ಮಸ್ಕತ್-ಮಂಗಳೂರು ನೇರ ವಿಮಾನಯಾನ ಸೇವೆ ಪುನರಾರಂಭಿಸಲು ಕೇಂದ್ರ ಸಚಿವರಿಗೆ ಮನವಿ ಮಾಡಿದ್ದಾರೆ.

Related Articles

LEAVE A REPLY

Please enter your comment!
Please enter your name here

Stay Connected

642FansLike
81FollowersFollow
17SubscribersSubscribe
- Advertisement -spot_img

Latest Articles