Tuesday, March 3, 2026

spot_img

ಮನೋರೋಗಕ್ಕೆ ತುತ್ತಾಗಿ ಜೀವನವೇ ಕಳೆದುಕೊಂಡಿದ್ದ ಯುವಕ: ಮರುಜೀವ ನೀಡಿದವರಿಗೆ ಕೃತಜ್ಞತೆ ಸಲ್ಲಿಕೆ

ಉಡುಪಿ :  ಕಳೆದ ಒಂದುವರೆ ತಿಂಗಳ ಹಿಂದೆ ಉಡುಪಿ ಜಿಲ್ಲೆಯ ಹೊರ ವಲಯದಲ್ಲಿ ತೀರಾ ಮನೋರೋಗಿಗಕ್ಕೆ ತುತ್ತಾದ ಜೀವನವೇ ಕಳೆದುಕೊಂಡಿದ್ದ ಯುವಕನೋರ್ವನನ್ನು ಸಮಾಜ ಸೇವಕ ವಿಶು ಶೆಟ್ಟಿ ಅಂಬಲಪಾಡಿ ರಕ್ಷಿಸಿ, ಚಿಕಿತ್ಸೆ ನೀಡಿ ಊರಿಗೆ ಕಳುಹಿಸಿದ್ದರು. ಸದ್ಯ ಸಂಪೂರ್ಣವಾಗಿ ಚೇತರಿಕೊಂಡಿರುವ ಯುವಕ ತನಗೆ ಸಹಕಾರ ನೀಡಿ ಜೀವನ ಉಳಿಸಿದ ವಿಶು ಶೆಟ್ಟಿ ಅವರನ್ನು ಭೇಟಿಯಾಗಿ ಕೃತಜ್ಞತೆ ತಿಳಿಸಿದ್ದಾನೆ.

 ಸದ್ಯ ಗುಣಮುಖನಾಗಿರುವ ಯುವಕ ಕೆಲಸವೊಂದಕ್ಕೆ ಸೇರಿಕೊಂಡಿದ್ದು, ಇಂದು  ವಿಶುಶೆಟ್ಟಿಯವರಿಗೆ ಧನ್ಯವಾದವನ್ನು ತಿಳಿಸಲು ಉಡುಪಿಗೆ ಬಂದಿದ್ದು, ವಿಶುಶೆಟ್ಟಿಯವರನ್ನು ಸಂಪರ್ಕಿಸಿ ಹೃದಯ ಪೂರ್ವಕ ಕೃತಜ್ಞತೆಯನ್ನು ಹೇಳಿದ್ದಾನೆ. ನೀವು ನೀಡಿದ ಸಹಾಯವನ್ನು ನನ್ನ ಬದುಕಿನುದ್ದಕ್ಕೂ ನೆನೆಯುತ್ತೇನೆ ನಿಮ್ಮನ್ನು ಮರೆಯುವುದಿಲ್ಲವೆಂದು ಹೇಳಿದ್ದಾನೆ.

ಈ ಸಮಯದಲ್ಲಿ ವಿಶುಶೆಟ್ಟಿಯವರು ಆತನಿಗೆ ವೈದ್ಯರು ತಿಳಿಸಿದಂತೆ ಔಷಧಿಯನ್ನು ಕ್ರಮಬದ್ದವಾಗಿ ತೆಗೆದುಕೊಳ್ಳಲು ಹೇಳಿದ್ದು ಖಂಡಿತವಾಗಿಯೂ ವೈದ್ಯರ ಸಲಹೆಯನ್ನು ಮೀರದೆ ಔಷಧಿಯನ್ನು ತೆಗೆದುಕೊಳ್ಳುವುದಾಗಿ ಭರವಸೆಯನ್ನು ನೀಡಿದ್ದಾನೆ. ಇಂತಹ ಒಂದು ಪ್ರಕರಣವು ನನ್ನ ಸೇವೆಗೆ ಸಂಪೂರ್ಣ ತೃಪ್ತಿ ನೀಡಿದೆ ಎಂದು ವಿಶುಶೆಟ್ಟಿಯವರು ತಿಳಿಸಿದ್ದಾರೆ.

Related Articles

LEAVE A REPLY

Please enter your comment!
Please enter your name here

Stay Connected

642FansLike
81FollowersFollow
17SubscribersSubscribe
- Advertisement -spot_img

Latest Articles