Monday, June 8, 2026

spot_img

ಮಣಿಪಾಲ್ ಪ್ರತಿಭಾ ಸ್ಪರ್ಧೆಅದ್ಧೂರಿ ಗ್ರ್ಯಾಂಡ್ ಫಿನಾಲೆ

ಉಡುಪಿ : ಮಿಸ್ಟರ್, ಮಿಸ್, ಟೀನ್ ಹಾಗೂ ಮಿಸೆಸ್ ಮಣಿಪಾಲ್ ಎಡಿಷನ್–3 ಮತ್ತು ಲಿಲ್ ಪ್ರಿನ್ಸ್ ಹಾಗೂ ಲಿಲ್ ಪ್ರಿನ್ಸೆಸ್ ಕರ್ನಾಟಕ ಉಡುಪಿ–ಮಂಗಳೂರು ಆವೃತ್ತಿ ಗ್ರ್ಯಾಂಡ್ ಫಿನಾಲೆ ಕಾರ್ಯಕ್ರಮ ಅದ್ಧೂರಿಯಾಗಿ ನಡೆಯಿತು.

ಲೂಪ್ ಈವೆಂಟ್ಸ್ ಹಾಗೂ ಒಎಸ್‌ಸಿ ಈವೆಂಟ್ಸ್ ಮಣಿಪಾಲ್ ಸಹಯೋಗದಲ್ಲಿ ಆಯೋಜಿಸಿದ್ದ ಸ್ಪರ್ಧೆಯು ಮಣಿಪಾಲದ ವೆಸ್ಟಿಂಡ್ ಕಂಟ್ರಿ ಕ್ಲಬ್‌ನಲ್ಲಿ ಹಾಗೂ ಬ್ರಹ್ಮಾವರದ ಚೇತನಾ ಹೈಸ್ಕೂಲ್ ಸಭಾಂಗಣದಲ್ಲಿ ನಡೆಯಿತು. ಕರಾವಳಿ ಭಾಗದ ವಿವಿಧೆಡೆಯಿಂದ ಭಾಗವಹಿಸಿದ್ದ ಸ್ಪರ್ಧಿಗಳು ತಮ್ಮ ಪ್ರತಿಭೆ, ವ್ಯಕ್ತಿತ್ವ, ಆತ್ಮವಿಶ್ವಾಸ ಹಾಗೂ ವೇದಿಕೆ ನಿರ್ವಹಣಾ ಕೌಶಲ್ಯವನ್ನು ಪ್ರದರ್ಶಿಸಿದರು.

ವಿವಿಧ ವಿಭಾಗಗಳಲ್ಲಿ 500ಕ್ಕೂ ಅಧಿಕ ಅರ್ಜಿಗಳು ಸಲ್ಲಿಕೆಯಾಗಿದ್ದು, ಉಡುಪಿ, ಮಂಗಳೂರು ಮತ್ತು ಕುಂದಾಪುರದಲ್ಲಿ ನಡೆದ ಆಡಿಷನ್‌ಗಳ ಬಳಿಕ ಸುಮಾರು 170 ಸ್ಪರ್ಧಿಗಳು ಗ್ರ್ಯಾಂಡ್ ಫಿನಾಲೆಗೆ ಆಯ್ಕೆಯಾಗಿದ್ದರು. ಕಾರ್ಯಕ್ರಮಕ್ಕೆ ನಟಿ ಶುಭಾ ಪೂಂಜಾ, ಪ್ರಿಯಾ ಹೆಗ್ಡೆ, ಪಲ್ಲವಿ ಗುರುಕಿರಣ್ ಸೇರಿದಂತೆ ಹಲವು ಗಣ್ಯರು ಅತಿಥಿಗಳಾಗಿ ಭಾಗವಹಿಸಿದ್ದರು. ಸ್ಪರ್ಧಿಗಳನ್ನು ಆತ್ಮವಿಶ್ವಾಸ, ಸಂವಹನ ಕೌಶಲ್ಯ, ವ್ಯಕ್ತಿತ್ವ, ಪ್ರತಿಭೆ ಹಾಗೂ ಒಟ್ಟಾರೆ ಪ್ರದರ್ಶನದ ಆಧಾರದ ಮೇಲೆ ತೀರ್ಪುಗಾರರು ಮೌಲ್ಯಮಾಪನ ಮಾಡಿದರು.

ವಿಜೇತರು ಮಿಸ್ಟರ್ ಮಣಿಪಾಲ್  ಸಮರ್ಥ್ ರೈ (ವಿಜೇತ), ಕರಣ್ ಸಾಲಿಯಾನ್ (ಪ್ರಥಮ ರನ್ನರ್-ಅಪ್), ಅಬ್ದುಲ್ ಬಶಿತ್ (ದ್ವಿತೀಯ ರನ್ನರ್-ಅಪ್). ಮಿಸ್ ಮಣಿಪಾಲ್ ರಕ್ಷಿತಾ ಶೆಟ್ಟಿ (ವಿಜೇತೆ), ಅಲ್ವಿನಾ ಮೆನೆಜಸ್ (ಕ್ರೌನ್ ಆಫ್ ಇನ್ಸಿಗ್ನಿಯಾ), ಕಾವ್ಯ ಸಾಲಿಯಾನ್ (ಪ್ರಥಮ ರನ್ನರ್-ಅಪ್), ಸಂಜನಾ ಬೆಸ್ಕೂರ್ (ದ್ವಿತೀಯ ರನ್ನರ್-ಅಪ್).

ಟೀನ್ ಮಣಿಪಾಲ್: ಚೈತಾಲಿ ಎಸ್. (ವಿಜೇತೆ), ದಿಯಾ ಗಡಿಯಾರ್ (ಪ್ರಥಮ ರನ್ನರ್-ಅಪ್), ಶಷ್ಟಿ ಕುಂದರ್ (ದ್ವಿತೀಯ ರನ್ನರ್-ಅಪ್). ಮಿಸೆಸ್ ಮಣಿಪಾಲ್ ಡಾ. ಅನ್ಸಿ ಸಿ. ಡಿಸೋಜಾ (ವಿಜೇತೆ), ಲೊರೈನ್ ನಜರೇತ್ (ಪ್ರಥಮ ರನ್ನರ್-ಅಪ್), ಅನುಷಾ ಯು.ಬಿ. (ದ್ವಿತೀಯ ರನ್ನರ್-ಅಪ್). ಲೂಪ್ ಈವೆಂಟ್ಸ್‌ನ ಸುಶೀಲ್ ಹೆಗ್ಡೆ, ನಿತಿನ್ ಲೋಬೋ ಹಾಗೂ ಪೂಜಾ ಸುಶೀಲ್ ಹೆಗ್ಡೆ ಅವರ ನೇತೃತ್ವದಲ್ಲಿ ಕಾರ್ಯಕ್ರಮ ಯಶಸ್ವಿಯಾಗಿ ಆಯೋಜಿಸಲಾಯಿತು. ಸ್ಪರ್ಧೆಯ ಮೂಲಕ ಶಿಕ್ಷಣ, ಅನಾಥಾಶ್ರಮ, ವೃದ್ಧಾಶ್ರಮ ಹಾಗೂ ಆರ್ಥಿಕವಾಗಿ ಹಿಂದುಳಿದ ರೋಗಿಗಳಿಗೆ ನೆರವು ನೀಡುವ ಸಮಾಜಮುಖಿ ಸೇವಾ ಕಾರ್ಯಗಳಿಗೂ ಚಾಲನೆ ನೀಡಲಾಗಿದೆ ಎಂದು ಸಂಘಟಕರು ತಿಳಿಸಿದ್ದಾರೆ.

Related Articles

LEAVE A REPLY

Please enter your comment!
Please enter your name here

Stay Connected

642FansLike
81FollowersFollow
17SubscribersSubscribe
- Advertisement -spot_img

Latest Articles