ಉಡುಪಿ : ಈಶ್ವರನಗರದಲ್ಲಿರುವ ಬಾರ್ ಅಂಡ್ ರೆಸ್ಟೋರೆಂಟ್ ಹತ್ತಿರ ರಾತ್ರಿ ನಡೆದ ಗಲಾಟೆ ಮತ್ತು ಹೊಡೆದಾಟ ಪ್ರಕರಣಕ್ಕೆ ಸಂಬಂಧಿಸಿದಂತೆ ಮಣಿಪಾಲ ಪೊಲೀಸರು ನಾಲ್ವರು ಯುವಕರನ್ನು ಬಂಧಿಸಿದ್ದಾರೆ. ಬಂಧಿತರನ್ನು ಅಮರ್ ಶೆಟ್ಟಿ, ಚಂದನ್ ಸಿ. ಸಾಲ್ಯಾನ್, ಧನುಷ್ ಮತ್ತು ಅಜಯ್ ಎಂದು ಗುರುತಿಸಲಾಗಿದೆ.

ಪೊಲೀಸರು ನೀಡಿದ ಮಾಹಿತಿಯಂತೆ ರಾತ್ರಿ ಆರೋಪಿಗಳು ಬಾರ್ನಲ್ಲಿ ಊಟ ಮಾಡುತ್ತಿದ್ದ ವೇಳೆ ಚಂದನ್ನ ಕೈ ಅಮರ್ಗೆ ತಾಗಿದ ವಿಚಾರದಲ್ಲಿ ವಾಗ್ವಾದ ಉಂಟಾಗಿ, ಕೈಕೈ ಮಿಲಾಯಿಸಿಕೊಂಡು, ದೊಡ್ಡ ಹೊಡೆದಾಟಕ್ಕೆ ತಿರುಗಿತ್ತು.

ಘಟನಾಸ್ಥಳದಲ್ಲಿದ್ದವರು ಚಿತ್ರೀಕರಿಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಇದರ ಹಿನ್ನೆಲೆಯಲ್ಲಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತ್ವರಿತವಾಗಿ ಕ್ರಮ ಕೈಗೊಂಡಿದ್ದಾರೆ.

ಮಣಿಪಾಲ ಪೊಲೀಸ್ ಠಾಣಾ ಸಿಬ್ಬಂದಿ ನಡೆಸಿದ ತನಿಖೆಯ ಬಳಿಕ ನಾಲ್ವರನ್ನು ಬಂಧಿಸಿ, ಕಾನೂನು ಕ್ರಮ ಕೈಗೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಸ್ಥಳೀಯ ವಲಯದಲ್ಲಿ ಈ ಘಟನೆ ಚರ್ಚೆಗೆ ಕಾರಣವಾಗಿದ್ದು, ಪಬ್ ಮತ್ತು ಬಾರ್ಗಳ ಸುತ್ತ ಭದ್ರತೆ ಕಟ್ಟು ನಿಟ್ಟಾಗಿಸುವ ಅಗತ್ಯ ಕ್ರಮ ಜರುಗಿಸುವಂತೆ ನಾಗರಿಕರು ಆಗ್ರಹಿಸಿದ್ದಾರೆ.



