Tuesday, March 18, 2025

spot_img

ಭಾರತದ ಭವಿಷ್ಯವನ್ನು ಆಕರ್ಷಕಗೊಳಿಸುವ 2025ರ ಬಜೆಟ್! – ಕಿಶೋರ್ ಕುಮಾರ್ ಪುತ್ತೂರು

ಮಂಗಳೂರು : ನಮ್ಮ ಗೌರವಾನ್ವಿತ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಜಿ ಅವರ ದೃಢನಿಶ್ಚಯ ಹಾಗೂ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರ ಪ್ರಭಾವಿ ಆರ್ಥಿಕ ನೀತಿಯ ಫಲವಾಗಿ, 2025ರ ಕೇಂದ್ರ ಬಜೆಟ್ ದೇಶದ ಪ್ರಗತಿಗೆ ಶಕ್ತಿಯುತ ಒತ್ತುವರಿಯಾಗಿದೆ ಎಂದಿದ್ದಾರೆ ವಿಧಾನ ಪರಿಷತ್ ಸದಸ್ಯ ಕಿಶೋರ್ ಕುಮಾರ್ ಪುತ್ತೂರು.
ಈ ಬಾರಿಯ ಜನಪರ ಬಜೆಟ್ ಮಧ್ಯಮವರ್ಗಕ್ಕೆ ದೊಡ್ಡ ಶ್ರಮಿಕ ಸಮ್ಮಾನ ನೀಡಿದ್ದು, ಆದಾಯ ತೆರಿಗೆ ಮನ್ನಾವನ್ನು ₹12 ಲಕ್ಷಕ್ಕೆ ಹೆಚ್ಚಿಸುವ ಮೂಲಕ ಹಣಕಾಸು ಭದ್ರತೆಯನ್ನು ಒದಗಿಸಿದೆ. ರೈತರಿಗಾಗಿ ಬೇಳೆ ಕಾಳು ಹಾಗೂ ಹತ್ತಿ ಬೆಳೆಯ ಉತ್ಪಾದನೆಗೆ ಹೊಸ ಯೋಜನೆ, ಕಿಸಾನ್ ಕ್ರೆಡಿಟ್ ಕಾರ್ಡ್ ಸಾಲದ ಮಿತಿ ಹೆಚ್ಚಳ, ಇವುಗಳಿಂದ ರೈತರ ಜೀವನ ಮಟ್ಟವನ್ನು ಸುಧಾರಿಸಲು ಕ್ರಮ ಕೈಗೊಳ್ಳಲಾಗಿದೆ. ಮೂಲಸೌಕರ್ಯ ಕ್ಷೇತ್ರಕ್ಕೆ ಭಾರೀ ಹೂಡಿಕೆ ಮಾಡಲಾಗಿದ್ದು, ರಸ್ತೆ, ರೈಲ್ವೆ, ಮತ್ತು ವಿದ್ಯುತ್ ಯೋಜನೆಗಳಿಗೆ ಹೆಚ್ಚಿನ ಅನುದಾನವನ್ನು ಘೋಷಿಸಲಾಗಿದೆ. ಇದನ್ನು ಜೊತೆಗೆ, ಸ್ಟಾರ್ಟ್‌ಅಪ್ ಮತ್ತು ಉದ್ಯಮಿಗಳ ಬೆಂಬಲಕ್ಕಾಗಿ ಹೊಸ ಸಹಾಯಧನವನ್ನು ಜಾರಿಗೆ ತರಲಾಗಿದ್ದು ಇದು ನೂತನ ಉದ್ಯಮಗಳಿಗೆ ಉತ್ತೇಜನ ಕೊಡಲಿದ್ದು ಈ ಕಾರಣದಿಂದ ಉದ್ಯೋಗಾವಕಾಶಗಳು ಹೆಚ್ಚಾಗಿ ನಿರುದ್ಯೋಗ ಸಮಸ್ಯೆಗೆ ಕಡಿವಾಣ ಉಂಟಾಗುತ್ತದೆ.
ಈ ಬಜೆಟ್ ಆತ್ಮನಿರ್ಭರ ಭಾರತದ ದೃಷ್ಟಿಕೋನವನ್ನು ಮತ್ತಷ್ಟು ಬಲಪಡಿಸುವಂತಹದ್ದು. ಇದು ಹೊಸ ಉದ್ಯೋಗ ಅವಕಾಶಗಳು, ವ್ಯಾಪಾರದ ವೃದ್ಧಿ, ಹಾಗೂ ಗ್ರಾಮೀಣಾಭಿವೃದ್ಧಿಯನ್ನು ಗುರಿಯಾಗಿ ಹೊಂದಿದೆ. ಪ್ರಧಾನಮಂತ್ರಿ ನರೇಂದ್ರ ಮೋದಿಜಿ ಅವರ ದಿಟ್ಟ ನಿರ್ಧಾರಗಳು ಹಾಗೂ ನಿರ್ಮಲಾ ಸೀತಾರಾಮನ್ ಅವರ ಆರ್ಥಿಕ ಯೋಜನೆಗಳು ಭಾರತವನ್ನು ವಿಶ್ವದ ಪ್ರಮುಖ ಆರ್ಥಿಕಶಕ್ತಿಯಾಗಿ ಸ್ಥಾಪಿಸಲು ಪೂರಕವಾಗಲಿದೆ. ಇದು “ಮೋದಿ ಹೈ ತೋ ಮುಮ್ಕಿನ್ ಹೈ” ಎಂಬ ಮಾತನ್ನು ಮತ್ತೊಮ್ಮೆ ಸಾಬೀತುಪಡಿಸಿದೆ! ಎಂದಿದ್ದಾರೆ.

Related Articles

LEAVE A REPLY

Please enter your comment!
Please enter your name here

Stay Connected

642FansLike
81FollowersFollow
17SubscribersSubscribe
- Advertisement -spot_img

Latest Articles