Monday, March 2, 2026

spot_img

ಬೈಕ್‌ ಸ್ಕಿಡ್‌ ಆಗಿ ಸಹಸವಾರ ಸ್ಥಳದಲ್ಲೆ ಸಾವು..!

ಉಡುಪಿ: ಇಳಿಜಾರಿನ ತಿರುವಿನಲ್ಲಿ ಬೈಕ್‌ ಸ್ಕಿಡ್‌ ಆಗಿ ಸಹಸವಾರ ಸ್ಥಳದಲ್ಲೆ ಮೃತಪಟ್ಟು, ಸವಾರ ಗಂಭೀರವಾಗಿ ಗಾಯಗೊಂಡ ಘಟನೆ ಮಣಿಪಾಲದಲ್ಲಿ ನಡೆದಿದೆ. ಕಟಪಾಡಿ ನಿವಾಸಿ ಮೋಹನ್ (33) ಮೃತ ಸಹಸವಾರ.

 ಶನಿವಾರ ತಡರಾತ್ರಿ ಮಣಿಪಾಲ- ಅಲೆವೂರು‌ ರಸ್ತೆಯ ಮಂಚಿ ಇಳಿಜಾರಿನ ತಿರುವಿನಲ್ಲಿ ಸವಾರ ಪ್ರದೀಪ್‌ ಬೈಕ್‌ ಚಲಾಯಿಸಿಕೊಂಡು ಬರುವಾಗ ಸ್ಕಿಡ್‌ ಆಗಿದೆ. ಸ್ಕಿಡ್‌ ಆದ ರಭಸಕ್ಕೆ ಸಹಸವಾರ ಮೋಹನ್‌ ಪೊದೆಗೆ ಎಸೆಯಲ್ಪಟ್ಟಿದ್ದಾನೆ. ಮುಂಜಾನೆಯ ವರೆಗೂ ಯಾರು ನೋಡದ ಹಿನ್ನಲೆಯಲ್ಲಿ ಸಹಸವಾರ ಅಲ್ಲಿಯೇ ಮೃತಪಟ್ಟಿದ್ದಾನೆ. ಗಂಭೀರವಾಗಿ ಗಾಯಗೊಂಡ ಸವಾರ ಪ್ರದೀಪ್‌ ಸದ್ಯ ಮಣಿಪಾಲ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.  

Related Articles

LEAVE A REPLY

Please enter your comment!
Please enter your name here

Stay Connected

642FansLike
81FollowersFollow
17SubscribersSubscribe
- Advertisement -spot_img

Latest Articles