ಉಡುಪಿ: ಉಪ್ಪುಂದ ನಿವಾಸಿ ವಿಠಲ್ ಶೇಟ್ (63) ಅವರು ಡಿಸೆಂಬರ್ 6ರಿಂದ ನಾಪತ್ತೆಯಾಗಿದ್ದು, ಈ ಕುರಿತು ಬೈಂದೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ನಾಪತ್ತೆಯಾಗುವ ವೇಳೆ ಬೂದು ಬಣ್ಣದ ಲುಂಗಿ ಹಾಗೂ ಬಿಳಿ ಗೆರೆಯುಳ್ಳ ಅಂಗಿ ಧರಿಸಿದ್ದರು. ಅವರಿಗೆ ಕನ್ನಡ, ಕೊಂಕಣಿ, ಹಿಂದಿ, ಇಂಗ್ಲಿಷ್ ಮತ್ತು ಮರಾಠಿ ಭಾಷೆ ತಿಳಿದಿದೆ.

ವಿಠಲ್ ಶೇಟ್ ಬಗ್ಗೆ ಮಾಹಿತಿ ದೊರೆತಲ್ಲಿ ಬೈಂದೂರು ಪೊಲೀಸ್ ಠಾಣೆಯನ್ನು ಸಂಪರ್ಕಿಸುವಂತೆ ಪೊಲೀಸರು ಮನವಿ ಮಾಡಿದ್ದಾರೆ.



