ಉಡುಪಿ: ಶಿರ್ವದ ಸಾವುದ್ ಮಾತೆಯ ದೇವಸ್ಥಾನ, ಉಡುಪಿ ಧರ್ಮಪ್ರಾಂತ್ಯದ ಆರೋಗ್ಯ ಆಯೋಗ, ಕಥೊಲಿಕ್ ಸಭಾ, ಸ್ತ್ರೀ ಸಂಘಟನೆ, ಸೀನಿಯರ್ ಸಿಟಿಜನ್ ಕ್ಲಬ್, ಐಸಿವೈಎಂ, ವಲಯ ಹೆಲ್ತ್ ಕಮಿಷನ್ ಹಾಗೂ ಸೆಂಟರ್ ಫಾರ್ ಎಕನಾಮಿಕ್ ಅಂಡ್ ಸೋಷಿಯಲ್ ನೆಟ್ವರ್ಕಿಂಗ್, ಮಾಹೆ ಮಣಿಪಾಲ ಸಂಯುಕ್ತ ಆಶ್ರಯದಲ್ಲಿ ಶಿರ್ವದ ಡಾನ್ ಬಾಸ್ಕೋ ಇಂಗ್ಲಿಷ್ ಶಾಲೆಯಲ್ಲಿ ಮೆಗಾ ಕಾರ್ಡಿಯಾಲಜಿ ಶಿಬಿರ ನಡೆಯಿತು.

ಮಂಗಳೂರಿನ ಕೆಎಂಸಿ ಆಸ್ಪತ್ರೆಯ ಕಾರ್ಡಿಯಾಲಜಿ ವಿಭಾಗದ ಘಟಕ ಮುಖ್ಯಸ್ಥರು ಮತ್ತು ಕಾರ್ಡಿಯಾಲಜಿ ಅಟ್ ಡೋರ್ ಸ್ಟೆಪ್ಸ್ ಸಂಸ್ಥೆಯ ಸಂಸ್ಥಾಪಕರಾದ ಡಾ. ಪದ್ಮನಾಭ ಕಾಮತ್ ಅವರು ಯುವ ಹೃದಯಗಳನ್ನು ರಕ್ಷಿಸಿ ಎಂಬ ವಿಷಯದ ಕುರಿತು ಉಪನ್ಯಾಸ ನೀಡಿ ಯುವಜನರಿಗೆ ಹೃದಯ ಸಂಬಂಧಿ ಕಾಯಿಲೆಗಳ ಬಗ್ಗೆ ಜಾಗೃತಿ ಮೂಡಿಸಿದರು. ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರದಲ್ಲಿ ನೀಡಿದ ದೀರ್ಘಕಾಲದ ಸೇವೆಯನ್ನು ಸ್ಮರಿಸಿ ಮಾಧೆ ಪ್ರೊ-ಚಾನ್ಸೆಲರ್ ಡಾ. ಎಚ್.ಎಸ್. ಬಲ್ಲಾಳರನ್ನು ವೇದಿಕೆಯ ಮೇಲೆ ಸನ್ಮಾನಿಸಲಾಯಿತು.

ಮುಖ್ಯ ಅತಿಥಿಗಳಾದ ಡಾ. ಪದ್ಮನಾಭ ಕಾಮತ್ ಅವರು ಹೃದಯ ಆರೋಗ್ಯದ ಮಹತ್ವವನ್ನು ಮತ್ತು ಜೀವನಶೈಲಿ ಪರಿವರ್ತನೆಯ ಅಗತ್ಯವನ್ನು ಒತ್ತಿ ಹೇಳಿದರು. ಕಾರ್ಯಕ್ರಮಕ್ಕೆ ಅಧ್ಯಕ್ಷತೆ ವಹಿಸಿದ್ದ ಶಿರ್ವ ವಲಯದ ಐಸಿವೈಎಂ ನಿರ್ದೇಶಕ ಫಾ. ಕಿರಣ್ ನಜರೆತ್ ಅವರು, ದೈಹಿಕ ಆರೋಗ್ಯದ ಜೊತೆಗೆ ಸಮುದಾಯದಲ್ಲಿ ಮಾನಸಿಕ ಆರೋಗ್ಯದ ಜಾಗೃತಿ ಅಗತ್ಯವಿದೆ ಎಂದರು. ಕಾರ್ಯಕ್ರಮದ ಭಾಗವಾಗಿ ಬೆಳಪು ಮತ್ತು ಪಡುಬೆಳ್ಳೆ ಸಮುದಾಯ ಆರೋಗ್ಯ ಕೇಂದ್ರಗಳಿಗೆ ಇಸಿಜಿ ಯಂತ್ರಗಳನ್ನು ಹಸ್ತಾಂತರಿಸಲಾಯಿತು.

ಉಡುಪಿ ಡಯಾಸಿಸ್ನ ಆರೋಗ್ಯ ಆಯೋಗದ ಸದಸ್ಯ ಡಾ. ರಾಯನ್ ಮಥಯಾಸ್ ಡಾ. ಎಚ್. ಎಸ್. ಬಲ್ಲಾಳರನ್ನು ಪರಿಚಯಿಸಿದರು, ಶಿರ್ವದ ಆರೋಗ್ಯ ಆಯೋಗದ ಸಂಚಾಲಕ ಜಾನ್ ಫೆರ್ನಾಂಡಿಸ್ ಡಾ. ಪದ್ಮನಾಭ ಕಾಮತ್ ಅವರನ್ನು ಪರಿಚಯಿಸಿದರು. ನಿವೃತ್ತ ಶಿಕ್ಷಕ ಗಿಲ್ಬರ್ಟ್ ಪಿಂಟೊ ಕಾರ್ಯಕ್ರಮವ ನಿರ್ವಹಿಸಿದರು. ಶಿರ್ವ ಚರ್ಚ್ನ ಪಾಲನ ಮಂಡಳಿಯ ಉಪಾಧ್ಯಕ್ಷೆ ಮೆಲ್ವಿನ್ ಅರಾನ್ಹಾ ಸ್ವಾಗತಿಸಿದರು. ಉಡುಪಿಯ ಧರ್ಮಪ್ರಾಂತ್ಯದ ಆರೋಗ್ಯ ಆಯೋಗದ ಸಂಚಾಲಕಿ ಹಿಲ್ಡಾ ಕರ್ನೆಲಿಯೊ ಅವರು ಧನ್ಯವಾದಗಳನ್ನು ಅರ್ಪಿಸಿದರು. ಶಿರ್ವದ ಡಾನ್ ಬಾಸ್ಕೋ ಇಂಗ್ಲಿಷ್ ಮಾಧ್ಯಮ ಶಾಲೆಯ ಪ್ರಾಂಶುಪಾಲರಾದ ಫಾದರ್ ರೋಲ್ವಿನ್ ಅರಾನ್ಹಾ ಕೂಡ ಈ ಸಂಧರ್ಭದಲ್ಲಿ ಉಪಸ್ಥಿತರಿದ್ದರು.ಮೆಗಾ ಹೃದ್ರೋಗ ಶಿಬಿರವು ಸಮುದಾಯದ 200 ಕ್ಕೂ ಹೆಚ್ಚು ಸದಸ್ಯರಿಗೆ ಪ್ರಯೋಜನವನ್ನು ನೀಡಿತು.



