Thursday, March 5, 2026

spot_img

ಪರ್ಕಳ ಪೇಟೆಯಲ್ಲಿ ವ್ಯಕ್ತಿ ಅಚೇತನವಾಗಿ ಕುಸಿದು, ಬಳಿಕ ಮೃತಪಟ್ಟ ಪ್ರಕರಣ

ಉಡುಪಿ : ಉಡುಪಿ ಪರ್ಕಳ ಪೇಟೆ ಬಳಿ ಅಚಾನಕ್ ಕುಸಿದು ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ವ್ಯಕ್ತಿಯನ್ನು ಸ್ಥಳೀಯ ಸಮಾಜಸೇವಕ ನಿತ್ಯಾನಂದ ಒಳಕಾಡು ಅವರು ತಕ್ಷಣ ಅಜ್ಜರಕಾಡು ಜಿಲ್ಲಾಸ್ಪತ್ರೆಗೆ ಅಂಬುಲೆನ್ಸ್ ಮೂಲಕ ಸಾಗಿಸಿದರು. ಆದರೆ ಪರಿಶೀಲಿಸಿದ ವೈದ್ಯರು ಆ ವ್ಯಕ್ತಿ ಮೃತರಾಗಿರುವುದನ್ನು ದೃಢಪಡಿಸಿದರು.

 ಮೃತರ ಬಳಿ ಪತ್ತೆಯಾದ ಆಧಾರ್ ಕಾರ್ಡ್ ಪ್ರಕಾರ, ಅವರ ಹೆಸರು ದಾಮೋದರ ಗೌಡ (50), ಸಂತಟ್ಟು ಹೌಸ್, ಬಡಗಾಯಿಪದವು, ಮಂಗಳೂರು ಎಂದು ತಿಳಿದುಬಂದಿದೆ. ಪ್ರಸ್ತುತ ಶವವನ್ನು ಜಿಲ್ಲಾಸ್ಪತ್ರೆಯ ಶವಾಗಾರದಲ್ಲಿ ಸಂರಕ್ಷಿಸಲಾಗಿದೆ.

ಮೃತರ ವಾರಸುದಾರರು ಅಥವಾ ಬಂಧುಗಳು ಜಿಲ್ಲಾಸ್ಪತ್ರೆಯ ನಾಗರಿಕ ಸಹಾಯ ಕೇಂದ್ರ ಅಥವಾ ಮಣಿಪಾಲ ಪೊಲೀಸ್ ಠಾಣೆಯನ್ನು ತಕ್ಷಣ ಸಂಪರ್ಕಿಸಲು ವಿನಂತಿಸಲಾಗಿದೆ.

Related Articles

LEAVE A REPLY

Please enter your comment!
Please enter your name here

Stay Connected

642FansLike
81FollowersFollow
17SubscribersSubscribe
- Advertisement -spot_img

Latest Articles