ಉಡುಪಿ : ಯು.ಎಸ್ ನಾಯಕ್ ಪ್ರೌಢ ಶಾಲೆ, ಪಟ್ಲ ಇದರ ನವೀಕೃತ ಸಭಾಭವನದ ಗುದ್ದಲಿ ಪೂಜೆಯನ್ನು ಶಾಸಕರಾದ ಗುರ್ಮೆ ಸುರೇಶ್ ಶೆಟ್ಟಿ ಅವರು ನೆರವೇರಿಸಿದರು. ಈ ಸಂದರ್ಭದಲ್ಲಿ ಹರಿದಾಸ್ ಭಟ್ ಚಿತ್ರಬೈಲ್, ಶಾಲಾ ಸಂಚಾಲಕರಾದ ನಾರಾಯಣ ಶಣೈ, ಕಾರ್ಯದರ್ಶಿಗಳಾದ ಶ್ರೀಶ ನಾಯಕ್, ಜೊತೆ ಕಾರ್ಯದರ್ಶಿಗಳಾದ ಜಯರಾಜ್ ಶೆಟ್ಟಿ, ಆಡಳಿತ ಮಂಡಳಿ ಸದಸ್ಯರಾದ ಕೇಶವ ಮೂರ್ತಿ ಬೆಲ್ಪತ್ರೆ, ಪ್ರಕಾಶ್ ನಾಯಕ್, ಗೋಪಿನಾಥ್ ನಾಯಕ್, ಶ್ರೀಕಾಂತ್ ಕಾಮತ್, ರಾಮದಾಸ್ ನಾಯಕ್, ಶ್ರೀಕಾಂತ್ ಪ್ರಭು, ಶಾಲಾ ಮುಖ್ಯ್ಯೊಪಾಧ್ಯಯರಾದ ಶಾಂತಪ್ಪ ಮೂಲಂಗಿ, ಶಿಕ್ಷಕರು, ಶಾಲಾ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.