Monday, March 2, 2026

spot_img

ನೀಲಾವರದ ಮನೆಯಲ್ಲಿ ಇಸ್ಪೀಟ್‌ ಜುಗಾರಿ: 11 ಜನ ಬಂಧನ

ಉಡುಪಿ : ನೀಲಾವರ ಬಳಿ ಮನೆಯಲ್ಲಿಯೇ ಅಂದರ್ ಬಾಹರ್ ಇಸ್ಪೀಟ್ ಜುಗಾರಿ ಆಟ ಆಡುತ್ತಿದ್ದ 11 ಮಂದಿಯನ್ನು ಬ್ರಹ್ಮಾವರ ಪೊಲೀಸ್‌ ರು ವಶಕ್ಕೆ ಪಡೆದಿದ್ದಾರೆ. ಸದಾಶಿವ ದೇವಾಡಿಗ(48), ಪ್ರಸನ್ನ(43), ರಜಾಕ್(55), ಭಾಸ್ಕರ(48), ಅಶೋಕ(47), ಹರೀಶ್‌ ನಾಯ್ಕ(35), ಚಂದ್ರಹಾಸ(40), ರವಿಕುಮಾರ(57), ಶಶಿಕಾಂತ(36), ಆನಂದ ಕೋಟ್ಯಾನ(63), ಸಂಪತ್(37) ಬಂಧಿತರು.

 ನೀಲಾವರ ದೇವಸ್ಥಾನಕ್ಕೆ ಹೋಗುವ ರಸ್ತೆಯಲ್ಲಿರುವ ಮನೆಯಲ್ಲಿಯೇ ಅಂದರ್ ಬಾಹರ್ ಇಸ್ಪೀಟ್ ಜುಗಾರಿ ಆಟ ಆಡುತ್ತಿರುವ ವರ್ತಮಾನದ ಮೇರೆಗೆ ಬ್ರಹ್ಮಾವರ ಪೊಲೀಸ್‌ ರು ಧಾಳಿ ನಡೆಸಿದ್ದಾರೆ. ಧಾಳಿಯ ವೇಳೆ ಹಣವನ್ನು ಪಣವಿಟ್ಟು ಇಸ್ಪೀಟ್‌ ಜುಗಾರಿ ಆಡುತ್ತಿರುವುದು ಪತ್ತೆಯಾಗಿದೆ, ಈ ಹಿನ್ನಲೆಯಲ್ಲಿ ಆರೋಪಿಗಳನ್ನು ವಶಕ್ಕೆ ಪಡೆದು, 20900 ರೂಪಾಯಿ ನಗದು ಹಣ, 11 ಮೋಬೈಲ್‌ ಪೋನ್‌, ಮೂರು ಕಾರುಗಳು, 4 ಬೈಕ್‌ ಗಳನ್ನು ಪೊಲೀಸ್‌ ರು ವಶಕ್ಕೆ ಪಡೆದಿದ್ದಾರೆ. ಈ ಕುರಿತು ಬ್ರಹ್ಮಾವರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Related Articles

LEAVE A REPLY

Please enter your comment!
Please enter your name here

Stay Connected

642FansLike
81FollowersFollow
17SubscribersSubscribe
- Advertisement -spot_img

Latest Articles