ಉಡುಪಿ : ಗಂಗೊಳ್ಳಿ ಬಂದರೆ ಜುಲೈ 15ರಂದು ನಾಡ ದೋಣಿಯ ಮೂಲಕ ಮೀನುಗಾರಿಕೆಗೆ ತೆರಳಿ ನೀರುಪಾಲಾಗಿದ್ದ ಮೂರು ಜನ ಮೀನುಗಾರರ ಪೈಕಿ ಇಬ್ಬರ ಮೃತ ದೇಹ ಪತ್ತೆಯಾಗಿದೆ. ಮುಂಜಾನೆ ಲೋಹಿತ್ ಖಾರ್ವಿ (38) ಅವರ ಮೃತ ದೇಹವು ಕೊಡಿ ಲೈಟ್ ಹೌಸ್ ಬಳಿಯ ಸಮುದ್ರ ತೀರದಲ್ಲಿ ಪತ್ತೆಯಾಗಿದೆ. ಇನ್ನೋರ್ವ ಮೀನುಗಾರ ಜಗನ್ನಾಥ್ ಖಾರ್ವಿ(50) ಮೃತದೇಹ ಬುಧವಾರ ಸಂಜೆ ಹಳೆ ಅಳಿವೆ ಕಿನಾರದ ಸಮುದ್ರದ ತೀರದಲ್ಲಿ ಪತ್ತೆಯಾಗಿದೆ.

ಸದ್ಯ ಇನ್ನೋರ್ವ ಮೀನುಗಾರ ಸುರೇಶ್ ಖಾರ್ವಿ ಮೃತದೇಹ ಪತ್ತೆಯಾಗಬೇಕಿದೆ. ಹೀಗಾಗಿ ಶೋಧ ಕಾರ್ಯ ಮುಂದುವರಿದಿದೆ. ಸಿಪಾಯಿ ಸುರೇಶ್ ಮಾಲಕತ್ವದ ನಾಡದೋಣಿಯಲ್ಲಿ ನಾಲ್ವರು ಮೀನುಗಾರಿಕೆಗೆ ತೆರಳಿದ ಸಂದರ್ಭ ಅಲೆಗಳ ರಭಸಕ್ಕೆ ದೋಣಿ ಮುಗುಚಿ ದುರಂತ ಸಂಭವಿಸಿತ್ತು. ಈ ಸಂದರ್ಭ ಓರ್ವ ಮೀನುಗಾರ ಸಂತೋಷ ಈಜಿ ದಡ ಸೇರಿದ್ದು, ಇಬ್ಬರ ಮೃತ ದೇಹ ಪತ್ತೆಯಾಗಿದೆ..



