ಉಡುಪಿ : ಪ್ರಸ್ತುತ ಕಾಲ ಘಟ್ಟದಲ್ಲಿ ರಕ್ತದ ಬೇಡಿಕೆ ವಿಪುಲವಾಗಿದ್ದು ವ್ಯಕ್ತಿ ಅನಾರೋಗ್ಯ ಪೀಡಿತನಾದಾಗ ಆಫಘಾತ ಕ್ಕಿದಾದಾಗ ತುರ್ತು ರಕ್ತದ ಅವಶ್ಯಕತೆ ನಿರಂತರವಾಗಿದ್ದು, ರಕ್ತದಾನ ಶಿಬಿರಗಳನ್ನು ಆಯೋಜಿಸಿ ರಕ್ತ ಸಂಗ್ರಹ ಮಾಡಿದಾಗ ಪೂರೈಕೆ ಸುಲಭವಾಗುತ್ತದೆ, ಹಾಗೆಯೇ ಸತತವಾಗಿ ರಕ್ತದಾನ ಮಾಡುವುದರಿಂದ ದಾನಿಯು ಅರೋಗ್ಯಕರವಂತನಾಗುತ್ತಾನೆ ಎಂದು ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ಹೇಳಿದರು.

ಅವರು ನೆಸ್ ಫಿಟ್ ಜಿಮ್ ಮಣಿಪಾಲ, ಅಭಯಹಸ್ತ ಚಾರಿಟೇಬಲ್ ಟ್ರಸ್ಟ್ ರಿ. ಉಡುಪಿ ಹಾಗೂ ರಕ್ತ ಕೇಂದ್ರ ಕೆಎಂಸಿ ಮಣಿಪಾಲ ಸಹಕಾರದಲ್ಲಿ ಭಾನುವಾರ ರಕ್ತ ನಿಧಿ ಕೇಂದ್ರ ಕೆಎಂಸಿ ಮಣಿಪಾಲದಲ್ಲಿ ನಡೆದ ಸ್ವಯಂಪ್ರೇರಿತ ರಕ್ತದಾನ ಶಿಬಿರವನ್ನು ಉದ್ಘಾಟಿಸಿ ಮಾತಾಡಿದರು. ರಕ್ತ ನಿಧಿ ಕೇಂದ್ರ ಕೆಎಂಸಿ ಮಣಿಪಾಲದ ಮುಖ್ಯಸ್ಥರಾದ ಡಾ. ಗಣೇಶ್ ಮೋಹನ್ ಸಭೆಯ ಅಧ್ಯಕ್ಷತೆ ವಹಿಸಿದ್ದರು.

ಈ ಸಂದರ್ಭದಲ್ಲಿ ಉಡುಪಿ ನಗರಸಭಾ ಸದಸ್ಯರಾದ ಮಂಜುನಾಥ್ ಮಣಿಪಾಲ, ಎನ್ ಎಸ್ ಎಸ್ ಎಂಐಟಿ ಮಣಿಪಾಲದ ಇದರ ಕಾರ್ಯಕ್ರಮ ಅಧಿಕಾರಿ ಡಾ. ಬಾಲಕೃಷ್ಣ ಮದ್ದೋಡಿ, ಕಸ್ತೂರಬಾ ಆಸ್ಪತ್ರೆ ಮಣಿಪಾಲ ಇದರ ಸುರಕ್ಷಾ ಅಧಿಕಾರಿ ಕ್ಲಿಂಗ್ ಜಾನ್ಸನ್, ಅಭಯಹಸ್ತ ಚಾರಿಟೇಬಲ್ ಟ್ರಸ್ಟ್ ರಿ. ಉಡುಪಿ ಇದರ ಅಧ್ಯಕ್ಷ ರಕ್ತದ ಆಪತ್ಭಾಂದವ ಸತೀಶ್ ಸಾಲ್ಯಾನ್ ಮಣಿಪಾಲ್ ಹಾಗೂ ರಕ್ತದಾನ ಶಿಬಿರದ ಮುಖ್ಯ ರೂವಾರಿ ವೆಲ್ ನೆಸ್ ಜಿಮ್ ಮಣಿಪಾಲ ಇದರ ತಿಲಕ್ ಶೆಟ್ಟಿ ರಕ್ತ ಕೇಂದ್ರ ಕೆಎಂಸಿ ಮಣಿಪಾಲದ ಶ್ರೀಮತಿ ಸವಿನ ಹಾಗೂ ಅಮಿತ ಶೆಟ್ಟಿ ಉಪಸ್ಥಿತರಿದ್ದರು. ಸಾಜನ್ ಸತೀಶ್ ಸಾಲ್ಯಾನ್ ಸ್ವಾಗತಿಸಿ ಕಾರ್ಯಕ್ರಮ ನಿರೂಪಣೆ ಮಾಡಿದರು. ಮಂಜುನಾಥ್ ಧನ್ಯವಾದ ಅರ್ಪಿಸಿದರು.



