ಉಡುಪಿ : ಜನನಿಬಿಡ ತಲ್ಲೂರು ಜಂಕ್ಷನ್ನ ಎಂ.ಡಿ. ರೆಸಿಡೆನ್ಸಿ ಎದುರು ಸಂಜೆ ಸುಮಾರು 4.30 ರಿಂದ 5 ಗಂಟೆಯ ನಡುವೆ ಅಪರಿಚಿತ ಖದೀಮರು ಕಾರಿನ ಗಾಜು ಒಡೆದು 2 ಲಕ್ಷ ರೂಪಾಯಿ ನಗದು ಕಳವು ಮಾಡಿದ ಘಟನೆ ಮಂಗಳವಾರ ನಡೆದಿದೆ.

ಸಾರ್ವಜನಿಕ ಸ್ಥಳದಲ್ಲಿ ನಿಂತಿದ್ದ ಕಾರಿನೊಳಗಿನ ನಗದು ಮೊತ್ತವನ್ನು ಗುರಿಯಾಗಿಸಿಕೊಂಡು ಕಳ್ಳರು ಕ್ಷಣಾರ್ಧದಲ್ಲಿ ಗಾಜು ಒಡೆದು ಹಣ ಎಗರಿಸಿಕೊಂಡಿದ್ದಾರೆ.

ಘಟನೆಯ ಬಳಿಕ ಸ್ಥಳೀಯರಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದ್ದು, ಕಾರುಗಳಲ್ಲಿ ನಗದು ಇರಿಸುವ ಅಥವಾ ಸಾಗಿಸುವವರು ಎಚ್ಚರಿಕೆಯಿಂದ ಇರಬೇಕು ಎಂದು ಪೊಲೀಸರು ಸೂಚಿಸಿದ್ದಾರೆ. ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ತನಿಖೆ ಮುಂದುವರಿದಿದೆ.



