Friday, September 18, 2026

spot_img

ಡಾ. ವಿವೇಕ ಉಡುಪರಿಗೆ ಮೋದಿ ಸರ್ಕಾರದ ಸಾಧನೆಯ ಪುಸ್ತಕ ಹಸ್ತಾಂತರ

ಉಡುಪಿ : ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ 12 ವರ್ಷಗಳ ಸಾಧನೆ ಹಾಗೂ ಅಭಿವೃದ್ಧಿ ಕಾರ್ಯಗಳ ಕುರಿತು ಪ್ರಕಟಿಸಲಾಗಿರುವ ಪುಸ್ತಕವನ್ನು ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಸಂಸದ ಕೋಟ ಶ್ರೀನಿವಾಸ ಪೂಜಾರಿ ಅವರು ಸಾಲಿಗ್ರಾಮದ ಡಿವೈನ್ ಪಾರ್ಕ್‌ನ ಉತ್ತರಾಧಿಕಾರಿ ಡಾ. ವಿವೇಕ ಉಡುಪರಿಗೆ ಹಸ್ತಾಂತರಿಸಿದರು.

ಸಾಲಿಗ್ರಾಮದಲ್ಲಿರುವ ಡಿವೈನ್ ಪಾರ್ಕ್ ಆಧ್ಯಾತ್ಮಿಕ ಕೇಂದ್ರವು ಸುಮಾರು 1970ರ ಅವಧಿಯಲ್ಲಿ ಡಾ. ಚಂದ್ರಶೇಖರ ಉಡುಪ ಅವರ ಮೂಲಕ ಸ್ಥಾಪನೆಯಾಯಿತು. ಸ್ವಾಮಿ ವಿವೇಕಾನಂದರ ತತ್ವಾದರ್ಶಗಳಿಂದ ಪ್ರೇರಿತರಾದ ಡಾ. ಚಂದ್ರಶೇಖರ ಉಡುಪರು ವಿವೇಕಾನಂದರ ಸಂದೇಶಗಳನ್ನು ಜನಸಾಮಾನ್ಯರಿಗೆ ತಲುಪಿಸುವ ಉದ್ದೇಶದಿಂದ ಡಿವೈನ್ ಪಾರ್ಕ್‌ ಅನ್ನು ರೂಪಿಸಿದ್ದರು.

ವ್ಯಕ್ತಿಯಲ್ಲಿರುವ ಆತ್ಮಶಕ್ತಿಯನ್ನು ಜಾಗೃತಗೊಳಿಸುವುದು, ಯೋಗ ಮತ್ತು ಧ್ಯಾನದ ಮೂಲಕ ಮನಸ್ಸಿಗೆ ಶಾಂತಿ ಹಾಗೂ ಜೀವನದಲ್ಲಿ ಆನಂದವನ್ನು ಕಂಡುಕೊಳ್ಳಲು ಮಾರ್ಗದರ್ಶನ ನೀಡುವುದು ಡಿವೈನ್ ಪಾರ್ಕ್‌ನ ಪ್ರಮುಖ ಆಶಯವಾಗಿದೆ. ಆಧ್ಯಾತ್ಮಿಕ ಚಿಂತನೆ, ಯೋಗ ಮತ್ತು ಧ್ಯಾನದ ಮೂಲಕ ಉತ್ತಮ ಬದುಕಿನತ್ತ ಜನರನ್ನು ಪ್ರೇರೇಪಿಸುವ ಕಾರ್ಯವನ್ನು ಕೇಂದ್ರವು ನಿರಂತರವಾಗಿ ನಡೆಸಿಕೊಂಡು ಬರುತ್ತಿದೆ.

Related Articles

LEAVE A REPLY

Please enter your comment!
Please enter your name here

Stay Connected

642FansLike
81FollowersFollow
17SubscribersSubscribe
- Advertisement -spot_img

Latest Articles