Monday, October 12, 2026

spot_img

ಡಾ. ರಾಘವೇಂದ್ರ ಉಳ್ಳೂರ ಅವರಿಗೆ ‘ಕರ್ಣಾಟನಾಡಪೋಷಕ ಪ್ರಶಸ್ತಿ’ ಪ್ರದಾನ

ಉಡುಪಿ: ಆಧ್ಯಾತ್ಮಿಕ ಕ್ಷೇತ್ರದಲ್ಲಿ ಸಲ್ಲಿಸಿರುವ ಸೇವೆ ಹಾಗೂ ಸಾಧನೆಯನ್ನು ಗುರುತಿಸಿ, ಧರ್ಮಸಿಂಧು ಸ್ಪಿರಿಚುಯಲ್ ಲೈಫ್, ಮುಳ್ಳುಗುಡ್ಡೆ, ಕುಂದಾಪುರ ಇದರ ಸಂಸ್ಥಾಪಕ ಡಾ. ರಾಘವೇಂದ್ರ ಉಳ್ಳೂರ ಅವರಿಗೆ 2026–27ನೇ ಸಾಲಿನ ಪ್ರತಿಷ್ಠಿತ ಕರ್ಣಾಟನಾಡಪೋಷಕ ಪ್ರಶಸ್ತಿ ಪ್ರದಾನ ಮಾಡಿ ಗೌರವಿಸಲಾಯಿತು. ನಮ ತುಳುವೆರ್ ಕಲಾ ಸಂಘಟನೆ (ರಿ.), ನಾಟ್ಕದೂರು, ಮುದ್ರಾಡಿ, ಹೆಬ್ರಿ ಇವರ ವತಿಯಿಂದ ಆಯೋಜಿಸಲಾದ 26ನೇ ವರ್ಷದ ನವರಂಗೋತ್ಸವ ಹಾಗೂ 41ನೇ ವರ್ಷದ ಸಂಭ್ರಮದ ಅಂಗವಾಗಿ ಅ. 11ರಂದು ನಡೆದ ಸಮಾರಂಭದಲ್ಲಿ ಈ ಪ್ರಶಸ್ತಿ ಪ್ರದಾನ ಮಾಡಲಾಯಿತು.

ಆಧ್ಯಾತ್ಮಿಕ ಕ್ಷೇತ್ರದಲ್ಲಿ ಡಾ. ರಾಘವೇಂದ್ರ ಉಳ್ಳೂರ ಅವರು ಸಲ್ಲಿಸಿರುವ ಸೇವೆ ಹಾಗೂ ಸಾಧನೆಯನ್ನು ಪರಿಗಣಿಸಿ ಈ ಗೌರವ ನೀಡಲಾಗಿದೆ. ವಿವಿಧ ಕ್ಷೇತ್ರಗಳ ಗಣ್ಯರು ಪಾಲ್ಗೊಂಡಿದ್ದ ಸಮಾರಂಭದಲ್ಲಿ ಅವರ ಆಧ್ಯಾತ್ಮಿಕ ಸೇವೆಯನ್ನು ಗುರುತಿಸಿ ಅಭಿನಂದಿಸಲಾಯಿತು.

ಕಾರ್ಯಕ್ರಮದಲ್ಲಿ ನಾಟ್ಕ ಮುದ್ರಾಡಿಯ ಅಧ್ಯಕ್ಷ ಸುಕುಮಾರ್ ಮೋಹನ್, ಹೆಗ್ಗದ್ದೆ ಮಾಧ್ಯಮದ ಸಂದೀಪ್ ಶೆಟ್ಟಿ, ಉಡುಪಿಯ ರಂಗ ನಿರ್ದೇಶಕ ಪ್ರಶಾಂತ್ ಉದ್ಯಾವರ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು. ಡಾ. ರಾಘವೇಂದ್ರ ಉಳ್ಳೂರ ಅವರಿಗೆ ಸಂದಿರುವ ಈ ಪ್ರಶಸ್ತಿಯು ಅವರ ಆಧ್ಯಾತ್ಮಿಕ ಸೇವೆ ಹಾಗೂ ಸಾಧನೆಗೆ ದೊರೆತ ಮನ್ನಣೆಯಾಗಿದ್ದು, ಮುಂದಿನ ದಿನಗಳಲ್ಲಿಯೂ ಆಧ್ಯಾತ್ಮಿಕ ಕ್ಷೇತ್ರದಲ್ಲಿ ಇನ್ನಷ್ಟು ಸೇವೆ ಸಲ್ಲಿಸಲು ಪ್ರೇರಣೆಯಾಗಲಿದೆ ಎಂದು ಆಶಯ ವ್ಯಕ್ತವಾಯಿತು.

Related Articles

LEAVE A REPLY

Please enter your comment!
Please enter your name here

Stay Connected

642FansLike
81FollowersFollow
17SubscribersSubscribe
- Advertisement -spot_img

Latest Articles