Wednesday, October 22, 2025

spot_img

ಡಾ. ಬಸವರಾಜ್ ಶೆಟ್ಟಿಗಾರ್‌ರವರಿಗೆ ಭಾರತ ರತ್ನ ಸರ್.ಎಂ.ವಿಶ್ವೇಶ್ವರಯ್ಯ ಅಂತರಾಷ್ಟ್ರೀಯ ಪ್ರಶಸ್ತಿ ಪ್ರದಾನ

ಉಡುಪಿ: ಭಾರತ ರತ್ನ ಸರ್.ಎಂ.ವಿಶ್ವೇಶ್ವರಯ್ಯ ಇಂಜಿನೀಯರಿಂಗ್ ಪ್ರತಿಷ್ಠಾನ ಟ್ರಸ್ಟ್ ಹಾಗೂ ಅಂತರಾಷ್ಟ್ರೀಯ ಪ್ರತಿಷ್ಠಾನದ ವೇದಿಕೆ ಕೊಡಲ್ಪಡುವ ಭಾರತ ರತ್ನ ಸರ್.ಎಂ.ವಿಶ್ವೇಶ್ವರಯ್ಯ ಅಂತರಾಷ್ಟ್ರೀಯ ಪ್ರಶಸ್ತಿಯನ್ನು ಮಾಜಿ ಲೋಕಾಯುಕ್ತ, ಸುಪ್ರೀಂ ಕೋರ್ಟ್ ನಿವೃತ್ತ ಮುಖ್ಯ ನ್ಯಾಯಮೂರ್ತಿಗಳಾದ ಡಾ. ಎಂ.ಸಂತೋಷ್ ಹೆಗ್ಡೆಯವರು ವಾಸ್ತುತಜ್ಞ, ಪ್ರಸಂಗಕರ್ತ ಡಾ. ಬಸವರಾಜ್ ಶೆಟ್ಟಿಗಾರ್‌ರವರಿಗೆ ಪ್ರದಾನ ಮಾಡಿದರು.  ಇತ್ತೀಚೆಗೆ ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ನಡೆದ ಪ್ರಶಸ್ತಿ ಪ್ರಧಾನ ಸಮಾರಂಭವನ್ನು ಉದ್ಘಾಟನೆ ಮಾಡಿದ ಮಾಜಿ ಲೋಕಾಯುಕ್ತರಾದ ಡಾ. ಎಂ.ಸಂತೋಷ್ ಹೆಗ್ಡೆಯವರು ಮಾತನಾಡಿ ಪ್ರಶಸ್ತಿ ಪುರಸ್ಕಾರಗಳನ್ನು ಪಡೆದವರಿಗೆ ಮತ್ತಷ್ಟು ಜವಾಬ್ದಾರಿ ಹೆಚ್ಚುತ್ತದೆ ಅಲ್ಲದೇ 42 ವರ್ಷಗಳಿಂದ ವಿವಿಧ 16 ಕ್ಷೇತ್ರಗಳಲ್ಲಿ ಸಾಧನೆ ಮಾಡಿ 50 ಕ್ಷೇತ್ರಗಳ ಅಧ್ಯಯನ ಮಾಡಿ 50 ಕ್ಷೇತ್ರ ಮಹಾತ್ಮೆ ಪ್ರಸಂಗವನ್ನು ರಚಿಸಿ ಜಾಗತಿಕ ದಾಖಲೆ ನಿರ್ಮಿಸಿದ ವಾಸ್ತುತಜ್ಞ ಡಾ. ಬಸವರಾಜ್ ಶೆಟ್ಟಿಗಾರ್‌ರವರಿಗೆ ಪ್ರಶಸ್ತಿಯನ್ನು ನೀಡಿರುವುದರಿಂದ ಸಂಸ್ಥೆಯ ಗೌರವ ಮತ್ತಷ್ಟು ಹೆಚ್ಚಿದಂತಾಗಿದೆ ಎಂದು ಶುಭ ಹಾರೈಸಿದರು.

 ಸಮಾರಂಭವ ಅಧ್ಯಕ್ಷತೆಯನ್ನು ವಹಿಸಿದ ಹಿರಿಯ ಸಾಹಿತಿ, ಐಎಎಸ್ ಅಧಿಕಾರಿ ಡಾ. ಸಿ. ಸೋಮಶೇಖರ್ ಮಾತನಾಡಿ ಕರಾವಳಿಯ ಭಾಗ್ಯಚೇತನವಾದ ಸಂತೋಷ್ ಹೆಗ್ಡೆಯವರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ಪ್ರಶಸ್ತಿ ಪ್ರಧಾನ ಮಾಡುತ್ತಾರೆ ಅಂತಾದರೆ ನಿಷ್ಕಳಂಕ ಹಾಗೂ ಮಾರ್ಗದರ್ಶಿ ಪ್ರತಿಷ್ಠಾನ ಎಂಬುವುದರಲ್ಲಿ ಎರಡು ಮಾತಿಲ್ಲ ಎಂದು ಪ್ರಶಸ್ತಿ ಪುರಸ್ಕೃತರಿಗೆ ಶುಭ ಹಾರೈಸಿದರು.

ಬೆಳಗಾವಿ ಜಿಲ್ಲೆಯ ಅಥಣಿ ಮಠದ ಶ್ರೀ ಶ್ರೀ ಶ್ರೀ ಪ್ರಭುಚೆನ್ನಬಸವ ಮಹಾಸ್ವಾಮಿ ಹಾಗೂ ಡಾ. ಕಲ್ಮೇಶ್ವರ ಮಹಾಸ್ವಾಮಿಜೀಯವರು ಆಶೀರ್ವಚನಗೈದರು. ಸಮಾರಂಭಕ್ಕೆ ಮುಖ್ಯ ಅತಿಥಿಗಳಾಗಿ ಕರ್ನಾಟಕ ರಾಜ್ಯ ಕೈಗಾರಿಕೆ ಮತ್ತು ಮೂಲಸೌಕರ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಎಸ್.ಜಿ.ನಂಜಯ್ಯನಮಠರವರು, ಪ್ರತಿಷ್ಠಾನದ ಸಂಚಾಲಕರಾದ ಎಂ.ಸಿ.ಕೃಷ್ಣ, ಕನಾಟಕ ಸವಿತಾ ಸಮಾಜದ ಅಭಿವೃದ್ಧಿ ನಿಗಮದ ಅಧ್ಯಕ್ಷ ಡಾ.ಎಂ.ಎಸ್. ಮುತ್ತುರಾಜ್, ಹಿರಿಯ ಮಕ್ಕಳ ಸಾಹಿತಿಗಳಾದ ಡಾ. ರಾಜೇಂದ್ರ ಎಸ್. ಗಡಾದರವರು, ಚಿತ್ರನಟರಾದ ಶಂಕರಭಟ್, ಗಣೇಶರಾವ್ ಕೇರ‍್ಕರ್, ಶ್ರೀಮತಿ ಮೀನಾ ಮುಂತಾದ ಗಣ್ಯರು ಉಪಸ್ಥಿತರಿದ್ದು ಶುಭ ಹಾರೈಸಿದರು. ಪ್ರತಿಷ್ಠಾನದ ಅಧ್ಯಕ್ಷ, ಪತ್ರಕರ್ತರಾದ ರಮೇಶ್ ಎಸ್.ರವರು ಸ್ವಾಗತಿಸಿ ವಂದಿಸಿದರು.

Related Articles

LEAVE A REPLY

Please enter your comment!
Please enter your name here

Stay Connected

642FansLike
81FollowersFollow
17SubscribersSubscribe
- Advertisement -spot_img

Latest Articles