Monday, October 12, 2026

spot_img

ಡಲ್ಲಾಸ್‌ನಲ್ಲಿ ಪುತ್ತಿಗೆ ಶ್ರೀಗಳಿಗೆ ಭವ್ಯ ಗುರುವಂದನೆ

ಉಡುಪಿ : ಉಡುಪಿ ಶ್ರೀಕೃಷ್ಣ ಮಠದ ಐತಿಹಾಸಿಕ ಚತುರ್ಥ ವಿಶ್ವ ಗೀತಾ ಪರ್ಯಾಯವನ್ನು ಯಶಸ್ವಿಯಾಗಿ ಪೂರೈಸಿ, ಪರ್ಯಾಯೋತ್ತರ ವಿಶ್ವಸಂಚಾರದಲ್ಲಿರುವ ಪರಮಪೂಜ್ಯ ಯತಿಕುಲ ಚಕ್ರವರ್ತಿ ಡಾ. ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದರಿಗೆ ಅಮೆರಿಕದ ಡಲ್ಲಾಸ್‌ನಲ್ಲಿ ಭಕ್ತರು ಹಾಗೂ ವಿವಿಧ ಸಂಘಟನೆಗಳ ವತಿಯಿಂದ ಭವ್ಯ ಗುರುವಂದನೆ ಸಲ್ಲಿಸಲಾಯಿತು.

ಗುರುವಂದನೆಯನ್ನು ಸ್ವೀಕರಿಸಿ ಅನುಗ್ರಹ ಸಂದೇಶ ನೀಡಿದ ಶ್ರೀಪಾದರು, ಭಗವದ್ಗೀತೆ ಕೇವಲ ಹಿಂದೂಗಳಿಗೆ ಸೀಮಿತವಾದ ಗ್ರಂಥವಲ್ಲ; ಅದು ಸಮಸ್ತ ವಿಶ್ವದ ಕಲ್ಯಾಣಕ್ಕಾಗಿ ಶ್ರೀಕೃಷ್ಣನು ನೀಡಿದ ದಿವ್ಯಜ್ಞಾನವಾಗಿದೆ ಎಂದು ಹೇಳಿದರು.

“ಜೀವನದಲ್ಲಿ ಎದುರಾಗುವ ಸಮಸ್ಯೆಗಳನ್ನು ಧೈರ್ಯ ಮತ್ತು ವಿವೇಕದಿಂದ ಎದುರಿಸಲು ಭಗವದ್ಗೀತೆ ಮಾರ್ಗದರ್ಶನ ನೀಡುತ್ತದೆ. ಕುಟುಂಬದ ಪ್ರತಿಯೊಂದು ಸಂಬಂಧವನ್ನೂ ಶ್ರೀಕೃಷ್ಣನ ಅನುಗ್ರಹವೆಂದು ಭಾವಿಸಿದಾಗ ಬದುಕು ಸಾರ್ಥಕವಾಗುತ್ತದೆ. ಶ್ರೀಕೃಷ್ಣನ ಮೂಲಕ ಬೆಸೆಯುವ ಸಂಬಂಧಗಳು ಮಾನವ ಜೀವನಕ್ಕೆ ಹೊಸ ಅರ್ಥ ಮತ್ತು ಮೌಲ್ಯವನ್ನು ನೀಡುತ್ತವೆ” ಎಂದು ಅವರು ನುಡಿದರು.

ಉಡುಪಿಯಲ್ಲಿ ನಡೆದ ಚತುರ್ಥ ವಿಶ್ವ ಗೀತಾ ಪರ್ಯಾಯದಲ್ಲಿ ಜಗತ್ತಿನ ವಿವಿಧ ದೇಶಗಳ ಭಕ್ತರು ಪಾಲ್ಗೊಂಡಿದ್ದು, ಕೋಟಿ ಗೀತಾ ಲೇಖನ ಯಜ್ಞದಲ್ಲಿ ಅನೇಕರು ಹತ್ತು, ಇಪ್ಪತ್ತು ಹಾಗೂ ನೂರು ಬಾರಿ ಭಗವದ್ಗೀತೆಯನ್ನು ಬರೆದು ಅಪಾರ ಆನಂದ ಅನುಭವಿಸಿದ್ದಾರೆ. ಇದು ಭಗವದ್ಗೀತೆಯ ಮಹಿಮೆ ಮತ್ತು ವಿಶ್ವವ್ಯಾಪಿ ಪ್ರಭಾವಕ್ಕೆ ಸಾಕ್ಷಿಯಾಗಿದೆ ಎಂದು ಶ್ರೀಪಾದರು ತಿಳಿಸಿದರು. ವೇಗವಾಗಿ ಬೆಳೆಯುತ್ತಿರುವ ಡಲ್ಲಾಸ್‌ನಲ್ಲಿ ಶ್ರೀಕೃಷ್ಣ ವೃಂದಾವನವನ್ನು ವಿಶಾಲವಾದ ಧಾರ್ಮಿಕ ಮತ್ತು ಸಾಂಸ್ಕೃತಿಕ ಕೇಂದ್ರವಾಗಿ ಅಭಿವೃದ್ಧಿಪಡಿಸುವ ಆಶಯವನ್ನು ಶ್ರೀಪಾದರು ವ್ಯಕ್ತಪಡಿಸಿದರು.

ಇದಕ್ಕಾಗಿ ಮತ್ತೊಂದು ವಿಶಾಲವಾದ ಸ್ಥಳವನ್ನು ಪರಿಶೀಲಿಸಲಾಗುತ್ತಿದೆ. ಆದಷ್ಟು ಶೀಘ್ರದಲ್ಲಿ ದೊಡ್ಡ ಜಾಗದಲ್ಲಿ ಸುಂದರವಾದ ಶ್ರೀಕೃಷ್ಣ ವೃಂದಾವನ ನಿರ್ಮಾಣವಾಗಬೇಕು. ಮುಂದಿನ ಪೀಳಿಗೆಯ ಆಧ್ಯಾತ್ಮಿಕ ಮತ್ತು ಸಾಂಸ್ಕೃತಿಕ ಕಲ್ಯಾಣವನ್ನು ಗಮನದಲ್ಲಿಟ್ಟುಕೊಂಡು ಕೈಗೊಳ್ಳುವ ಈ ಮಹತ್ಕಾರ್ಯಕ್ಕೆ ಎಲ್ಲರೂ ಕೈಜೋಡಿಸಬೇಕು. ಈ ಕಾರ್ಯಕ್ಕೆ ಸಹಕರಿಸುತ್ತಿರುವ ಎಲ್ಲ ಮಹನೀಯರ ಮೇಲೂ ಶ್ರೀಕೃಷ್ಣನ ಪೂರ್ಣಾನುಗ್ರಹವಿರಲಿ. ನೀವು ನಮಗೆ ಸಲ್ಲಿಸಿದ ಗೌರವವನ್ನು ಶ್ರೀಕೃಷ್ಣನ ಚರಣಗಳಿಗೆ ಸಮರ್ಪಿಸುತ್ತೇವೆ ಎಂದು ಶ್ರೀಪಾದರು ಆಶೀರ್ವದಿಸಿದರು.

ಸಮಾರಂಭದಲ್ಲಿ ಮಾತನಾಡಿದ ಗಣ್ಯರು, ಎರಡು ವರ್ಷಗಳ ಕಾಲ ನಿರಂತರವಾಗಿ ಶ್ರೀಕೃಷ್ಣ ಪೂಜೆಯನ್ನು ನೆರವೇರಿಸಿದ ಶ್ರೀಪಾದರ ತಪಸ್ಸು, ಸರಳತೆ, ಕರುಣೆ ಹಾಗೂ ವಿಶ್ವವ್ಯಾಪಿ ಧಾರ್ಮಿಕ ಸೇವೆಯನ್ನು ಶ್ಲಾಘಿಸಿದರು. ಗುರುಗಳು ಆರಂಭಿಸಿದ ಸಂಸ್ಥೆಗಳನ್ನು ಉಳಿಸಿ ಬೆಳೆಸುವುದೇ ನಿಜವಾದ ಗುರುಸೇವೆ ಎಂದು ಅಭಿಪ್ರಾಯಪಟ್ಟರು. ಶ್ರೀ ಪುತ್ತಿಗೆ ಮಠದ ಅಂತರರಾಷ್ಟ್ರೀಯ ಕಾರ್ಯದರ್ಶಿ ಶ್ರೀ ಪ್ರಸನ್ನ ಆಚಾರ್ಯ ಅವರು ಚತುರ್ಥ ವಿಶ್ವ ಗೀತಾ ಪರ್ಯಾಯದ ಮಹತ್ವ ಹಾಗೂ ಅದರ ಪ್ರಮುಖ ಸಾಧನೆಗಳನ್ನು ವಿವರಿಸಿದರು.

Related Articles

LEAVE A REPLY

Please enter your comment!
Please enter your name here

Stay Connected

642FansLike
81FollowersFollow
17SubscribersSubscribe
- Advertisement -spot_img

Latest Articles