ಉಡುಪಿ: ಎನ್ ಡಿಪಿಎಸ್ ಕಾಯ್ದೆಯಡಿ ಗೂಂಡಾ ಕಾಯ್ದೆಯಡಿ ಜಿಲ್ಲೆಯ ಇಬ್ಬರು ಕುಖ್ಯಾತ ಆರೋಪಿಗಳನ್ನು ಬಂಧಿಸಲು ಹೈಕೋರ್ಟ್ ಬಂಧನ ಆದೇಶ ಸ್ವೀಕರಿಸಿದೆ. ಜಿಲ್ಲೆಯ ಕುಖ್ಯಾತ ಗರುಡಾ ಗ್ಯಾಂಗ್ ನ ಸಕ್ರೀಯ ಸದಸ್ಯನಾಗಿದ್ದ ಸದಸ್ಯ ಕಬೀರ್ ಅಲಿಯಾಸ್ ಕಬೀರ್ ಹುಸೇನ್ ಮತ್ತು ಡ್ರಗ್ ಜಾಲದಲ್ಲಿ ತೊಡಗಿಸಿಕೊಂಡಿದ್ದ ಕೃಷ್ಣ ಆಚಾರಿ ಅಲಿಯಾಸ್ ಕೃಷ್ಣ ಜಲಗಾರ ವಿರುದ್ದ ಗೂಂಡಾ ಕಾಯ್ದೆ ಜಾರಿಗೊಳಿಸಲಾಗಿದೆ.

ಉಡುಪಿ ಸೇರಿ ದಕ್ಷಿಣ ಕನ್ನಡ, ಚಿಕ್ಕಮಗಳೂರು ಜಿಲ್ಲೆಗಳಲ್ಲಿಯೂ ಸಹ ತನ್ನ ಅಪರಾಧಿಕ ಚಟುವಟಿಕೆಗಳನ್ನು ನಡೆಸುತ್ತಿದ್ದ ಕುಖ್ಯಾತ ಆರೋಪಿ ಕಬೀರ್, ಜಿಲ್ಲೆಯ ಕುಖ್ಯಾತ ಗರುಡಾ ಗ್ಯಾಂಗ್ ಸದಸ್ಯ, ಈತನ ವಿರುದ್ದ ವಿರುದ್ಧ ಗೂಂಡಾ ಕಾಯ್ದೆಯಡಿ ಬಂಧನ ಆದೇಶ ಹೊರಡಿಸಲು ಮನವಿ ಸಲ್ಲಿಸಲಾಗಿತ್ತು. 2005ನೇ ಸಾಲಿನಿಂದ ಇಲ್ಲಿಯವರೆಗೆ ಈತನ ವಿರುದ್ಧ ಒಟ್ಟು 17 ಪ್ರಕರಣಗಳು ದಾಖಲಾಗಿದ್ದು, ಒಟ್ಟು ಎರಡು ಪ್ರಕರಣಗಳಲ್ಲಿ ಸಜೆಯಾಗಿತ್ತು. ಉಳಿದ ಎಂಟು ಪ್ರಕರಣಗಳಲ್ಲಿ ಸಾಕ್ಷಿದಾರರು ಪ್ರತಿಕೂಲ ಸಾಕ್ಷಿ ನುಡಿದದ್ದರಿಂದ ಖುಲಾಸೆ, ಮೂರು ಪ್ರಕರಣಗಳು ರಾಜಿಯಲ್ಲಿ ಮುಕ್ತಾಯವಾಗಿದ್ದು, 02 ಪ್ರಕರಣಗಳು ನ್ಯಾಯಾಲಯ ವಿಚಾರಣೆಯಲ್ಲಿದ್ದು, ಇನ್ನುಳಿದ 02 ಪ್ರಕರಣಗಳು ತನಿಖೆಯಲ್ಲಿವೆ. ಸದ್ಯ ಈತ ಮೈಸೂರಿನ ಕೇಂದ್ರ ಕಾರಾಗೃಹದಲ್ಲಿದ್ದಾನೆ. ಇನ್ನು ಮತ್ತೋರ್ವ ಆರೋಪಿ ಬ್ರಹ್ಮಾವರ ಠಾಣಾ ಸರಹದ್ದಿನ ಕೃಷ್ಣ ಆಚಾರಿ ವಿರುದ್ಧ ಒಟ್ಟು ನಾಲ್ಕು ಪ್ರಕರಣ ದಾಖಲಾಗಿದ್ದು, ಅವುಗಳಲ್ಲಿ ಎರಡು ಪ್ರಕರಣಗಳಲ್ಲಿ ಸಜೆಯಾಗಿದ್ದು, ಇನ್ನುಳಿದ ಎರಡು ಪ್ರಕರಣಗಳು ವಿಚಾರಣೆಯಲ್ಲಿದೆ.