ಕುಂದಾಪುರ : ಪದವಿಪೂರ್ವ ಶಿಕ್ಷಣ ಇಲಾಖೆಯವರು ಆಯೋಜಿಸಿದ ತಾಲ್ಲೂಕು ಮಟ್ಟದ ಬಾಲಕ, ಬಾಲಕಿಯರ ಕಬಡ್ಡಿ ಪಂದ್ಯಾಟದಲ್ಲಿ ಜನತಾ ಪದವಿಪೂರ್ವ ಕಾಲೇಜಿನ ಬಾಲಕ, ಬಾಲಕಿಯರ ಎರಡು ತಂಡ ಗಳು ಪ್ರಥಮ ಸ್ಥಾನ ಪಡೆದು ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.

ಬಾಲಕರ ತಂಡದ ವಿದ್ಯಾರ್ಥಿಗಳಾದ ನಿಹಾಲ್, ಸಾಯಿಮ್ (ಉತ್ತಮ ದಾಳಿಗಾರ)ಓoಕಾರ್, ಯೂನಸ್, ಶಶಾಂಕ್, ಸಾಗರ್ (ಉತ್ತಮ ಹಿಡಿತಗಾರ)ಅಯಾನ್, ಹಾಗೂ ಬಾಲಕಿಯರ ತಂಡದ ನವ್ಯ (ಉತ್ತಮ ದಾಳಿಗಾರ್ತಿ), ರಕ್ಷಾ,ಸಿಂಚನ, ಸಂಜನಾ, ಅನುಷಾ, ಮೋನಿಷಾ (ಉತ್ತಮ ಹಿಡಿತಗಾರ್ತಿ)ಶ್ರಾವ್ಯ ಕ್ರೀಡಾ ಸ್ಫೂರ್ತಿಯಿಂದ ಆಟವಾಡಿ ಕಾಲೇಜಿಗೆ ಕೀರ್ತಿ ತಂದಿರುತ್ತಾರೆ.

ಸಾಧಕ ವಿದ್ಯಾರ್ಥಿಗಳಿಗೆ ಕಾಲೇಜಿನ ಆಡಳಿತ ಮಂಡಳಿ, ಪ್ರಾಂಶುಪಾಲರು, ಬೋಧಕ,ಬೋಧಕೇತರ ವೃಂದದವರು ಅಭಿನಂದನೆ ಸಲ್ಲಿಸಿದ್ದಾರೆ.
