ಉಡುಪಿ : ಪಡುತೋನ್ಸೆ ಬಳಿ ಬೈಕ್ ನಲ್ಲಿ ಬಂದು ಗಾಂಜಾ ಮಾರಾಟಕ್ಕೆ ಯತ್ನಿಸುತ್ತಿದ್ದ ನಾಲ್ವರಲ್ಲಿ ಮೂವರನ್ನು ಮಲ್ಪೆ ಪೊಲೀಸ್ ರು ಬಂಧಿಸಿದ ಘಟನೆ ನಡೆದಿದೆ. ಅಚ್ಚುತ ಎನ್/ ಕಿರಣ್ ಮೆಂಡನ್(45), ಪುನೀತ್/ ಪುನೀತ್ ರಾಜ್(24),ಚಂದ್ರಕಾಂತ ಕಟ್ವ ಬಂಧಿತ ಆರೋಪಿಗಳು.

ಪಡುತೋನ್ಸೆ ಗ್ರಾಮದ ಗುಜ್ಜರಬೆಟ್ಟು ಕೆಎಂಪಿ ರಸ್ತೆಯಲ್ಲಿನ ಶ್ರೀ ಬೊಬ್ಬರ್ಯ ದೈವಸ್ಥಾನದ ಬಳಿ ಬೈಕ್ ನಲ್ಲಿ ನಾಲ್ವರು ಗಾಂಜಾ ಮಾರಾಟ ಮಾಡುತ್ತಿರುವ ಮಾಹಿತಿ ಪಡೆದ ಮಲ್ಪೆ ಪೊಲೀಸ್ ಧಾಳಿ ಮಾಡಿದಾಗ, ಕೊಳಲಗಿರಿ ಮೂಲದ ಕಿಶೋರ ತಪ್ಪಿಸಿಕೊಂಡಿದ್ದು, ಉಳಿದ ಮೂವರು ಸಿಕ್ಕಿ ಬಿದ್ದಿದ್ದಾರೆ. ಬೈಕ್ ಪರಿಶೀಲಿಸಿದಾಗ, ಗಾಂಜಾ ಮತ್ತು ಎಂಡಿಎಂಎ ಪತ್ತೆಯಾಗಿದೆ. ಸದ್ಯ ಆರೋಪಿಗಳು ಮಾರಾಟದ ಉದ್ದೇಶಕ್ಕೆ ಗಾಂಜಾ ಮತ್ತು ಮಾದಕ ವಸ್ತು ಇರಿಸಿಕೊಂಡಿರುವುದು ವಿಚಾರಣೆಯ ವೇಳೆ ದೃಢಪಟ್ಟಿರುವ ಹಿನ್ನಲೆಯಲ್ಲಿ ಮಲ್ಪೆ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.



