Wednesday, March 4, 2026

spot_img

ಕ್ಯಾಂಪಾ ಕೋಲಾ ಪ್ರಾಂಚೈಸಿ ಹೆಸರಿನಲ್ಲಿ ಆನ್‌ಲೈನ್‌ ವಂಚನೆ: ಇಬ್ಬರು ವಂಚಕರು ಬಂಧನ..

ಉಡುಪಿ: ಕ್ಯಾಂಪಾ ಕೋಲಾ ಪ್ರಾಂಚೈಸಿ ನೀಡುವುದಾಗಿ ನಂಬಿಸಿ ನಕಲಿ ವೆಬ್‌ಸೈಟ್ ಮೂಲಕ ನಡೆದಿದ್ದ ಆನ್‌ಲೈನ್‌ ವಂಚನೆ ಪ್ರಕರಣವನ್ನು ಉಡುಪಿ ಜಿಲ್ಲಾ ಸೆನ್ ಪೊಲೀಸ್ ಠಾಣೆಯವರು ಭೇದಿಸಿ, ಬಿಹಾರ ಮೂಲದ ಇಬ್ಬರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಆರೋಪಿಗಳಿಂದ ರೂ. 6.15 ಲಕ್ಷ ಮೌಲ್ಯದ ಮೊಬೈಲ್‌ಗಳು, ಲ್ಯಾಪ್‌ಟಾಪ್‌ಗಳು ಮತ್ತು ನಗದು ವಶಪಡಿಸಿಕೊಳ್ಳಲಾಗಿದೆ.ದೇವ್ ಹರ್ಷ (20), ಚಂದನ್ ಕುಮಾರ್ (29) ಬಂಧಿತ ಆರೋಪಿಗಳು.

campacolabusiness.com ಎಂಬ ನಕಲಿ ವೆಬ್‌ಸೈಟ್‌ನಲ್ಲಿ ಕ್ಯಾಂಪಾ ಕೋಲಾ ಪ್ರಾಂಚೈಸಿಗಾಗಿ ಅವಿನಾಶ್ ಇವರು ಅರ್ಜಿ ಸಲ್ಲಿಸಿ, ವೈಯಕ್ತಿಕ ಖಾತೆಯ ಮಾಹಿತಿ ಜೊತೆಗೆ, ಹಂತ ಹಂತವಾಗಿ 5,72,500 ರೂಪಾಯಿ ಹಣವನ್ನು ವಿವಿಧ ಬ್ಯಾಂಕ್ ಖಾತೆಗಳಿಗೆ ವರ್ಗಾಯಿಸಿದ್ದರು. ನಂತರವೂ ಹಣ ಹಾಕುವಂತೆ ಪುನಃ ಪುನಃ ಒತ್ತಾಯಿಸುತ್ತಿದ್ದರಿಂದ ಸಂಶಯಗೊಂಡ ಈ ಕುರಿತ ಪೊಲೀಸರಿಗೆ ದೂರು ನೀಡಿದ್ದಾರೆ.


ಈ ಕುರಿತು ತನಿಖೆ ಆರಂಭಿಸಿದ ಪೊಲೀಸ್ ರು ವಿಶೇಷ ತಂಡ ರಚಿಸಿ ಬಿಹಾರದ ಪಾಟ್ನಾ ಮತ್ತು ಬೆಂಗಳೂರು ನಗರದಲ್ಲಿ ಸಂಚಾರಿ ಕಾರ್ಯಾಚರಣೆ ನಡೆಸಿ ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.

ಆರೋಪಿಗಳ ಬಳಿಯಿಂದ 97 ಸಾವಿರ ಮೊತ್ತದ 10 ಮೊಬೈಲ್‌ಗಳು, 68 ಸಾವಿರ ರೂಪಾಯಿ ಮೌಲ್ಯದ 4 ಲ್ಯಾಪ್‌ಟಾಪ್‌ಗಳು ಮತ್ತು ನಗದು 4,50,000 ರೂಪಾಯಿ ಸೇರಿ ಒಟ್ಟು 6,15,000 ರೂಪಾಯಿ ಮೌಲ್ಯದ ವಸ್ತುಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಈ ಕುರಿತು ತನಿಖೆ ಮುಂದುವರಿದಿದ್ದು, ವಂಚನೆ ಜಾಲದ ಇತರರ ಪತ್ತೆಗೆ ಪೊಲೀಸರು ಕಾರ್ಯಾಚರಣೆ ಕೈಗೊಂಡಿದ್ದಾರೆ.

Related Articles

LEAVE A REPLY

Please enter your comment!
Please enter your name here

Stay Connected

642FansLike
81FollowersFollow
17SubscribersSubscribe
- Advertisement -spot_img

Latest Articles