Wednesday, March 4, 2026

spot_img

ಕೋಟ ಸಾಲಿಗ್ರಾಮ ರೋಟರಿ ಕ್ಲಬ್ ಇಂಟರ್ಯಾಕ್ಟ್ ಪದಪ್ರದಾನ

ಕೋಟ: ಕೋಟ ವಿವೇಕ ಜೂನಿಯರ್ ಕಾಲೇಜಿನ ಮಹಾತ್ಮ ಗಾಂಧಿ ಸಭಾಂಗಣದಲ್ಲಿ ಕೋಟ ಸಾಲಿಗ್ರಾಮ ರೋಟರಿ ಕ್ಲಬ್ ನ ಇಂಟರ್ಯಾಕ್ಟ್ ಪದಪ್ರದಾನ ಸಮಾರಂಭ ನಡೆಯಿತು.

ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ರೋಟೇರಿಯನ್ ಸತೀಶ್ ಶೆಟ್ಟಿ ಅವರು ಉಪನ್ಯಾಸ ನೀಡಿ, ವಿದ್ಯಾರ್ಥಿಗಳಿಗೆ ಈ ವಯಸ್ಸಿನಲ್ಲಿ (14 ರಿಂದ 18 ವರ್ಷಗಳು) ಅನುಭವವಾಗುವ ಮುಖ್ಯ ಬದಲಾವಣೆಗಳ ಬಗ್ಗೆ ವಿವರಿಸಿದರು.

ಟೀನೇಜ್ ವಯಸ್ಸಿನಲ್ಲಿ ಮಕ್ಕಳಿಗೆ ದೈಹಿಕ, ಮಾನಸಿಕ ಮತ್ತು ಸಾಮಾಜಿಕವಾಗಿ ಹಲವಾರು ಬದಲಾವಣೆಗಳು ಆಗುತ್ತವೆ. ಈ ಬದಲಾವಣೆಗಳನ್ನು ಅರ್ಥಮಾಡಿಕೊಳ್ಳುವುದು ಮತ್ತು ತೊಂದರೆಗಳನ್ನು ನಿರ್ವಹಿಸುವುದು ಅತ್ಯಂತ ಮುಖ್ಯವಾಗುವುದು ಎಂದರು.

ಪದಗ್ರಹಣ ಅಧಿಕಾರಿಯಾಗಿ ಮಾಜಿ ಸಹಾಯಕ ರಾಜ್ಯಪಾಲ ಸುರೇಶ್ ಬೇಳೂರ್ ಪದಗ್ರಹಣ ಮಾಡಿ ವಿದ್ಯಾರ್ಥಿಗಳಿಗೆ ಶುಭಾಶಯವನ್ನು ಕೋರಿದರು. ಕೋಟ ಸಾಲಿಗ್ರಾಮ ರೋಟರಿ ಕ್ಲಬ್ ಅಧ್ಯಕ್ಷ ರೋ ಯೋಗೇಶ್ ಕುಮಾರ್ ಅಧ್ಯಕ್ಷತೆ ವಹಿಸಿದ್ದರು. ಸಭೆಯಲ್ಲಿ ಕಾರ್ಯದರ್ಶಿ ಶರಣೆಯ ಹಿರೇಮಠ, ಉದಯ ಕುಂದರ್, ಕಾಲೇಜು ಪ್ರಾಂಶುಪಾಲರಾದ ಜಗದೀಶ್ ನಾವುಡ, ವೆಂಕಟೇಶ್ ಉಡುಪ, ಶ್ರೀಮತಿ ಪ್ರೀತಿ ರೇಖಾ ಉಪಸ್ಥಿತರಿದ್ದರು.

Related Articles

LEAVE A REPLY

Please enter your comment!
Please enter your name here

Stay Connected

642FansLike
81FollowersFollow
17SubscribersSubscribe
- Advertisement -spot_img

Latest Articles