ಉಡುಪಿ : ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಳದಲ್ಲಿ ದರ್ಶನಕ್ಕೆ ಬಂದಿದ್ದ ಭಕ್ತರ ಬ್ಯಾಗ್ ನಲ್ಲಿದ್ದ ಮೂರು ಪವನ್ ತೂಕದ ಚಿನ್ನದ ಸರ ಕದ್ದು ಪರಾರಿಯಾಗಿದ ಆರೋಪಿಯನ್ನು ಕೊಲ್ಲೂರು ಪೊಲೀಸ್ ರು ಬಂಧಿಸಿದ್ದಾರೆ. ತೆಲಂಗಾಣ ಮೂಲದ ಯಾಧವ ದುರ್ಗಮ್ಮ ಎಂಬಾಕೆಯನ್ನು ಪೊಲೀಸ್ ರು ಬಂಧಿಸಿದ್ದಾರೆ.

ಎರಡು ದಿನಗಳ ಹಿಂದೆ ಕೊಲ್ಲೂರು ಮೂಕಾಂಬಿಕಾ ದೇವಸ್ಥಾನದಲ್ಲಿ ರಾತ್ರಿ ಸುಮಾರು 08:50 ಗಂಟೆಯಿಂದ 09:15 ಗಂಟೆಯ ಮಧ್ಯೆ ಅವಧಿಯಲ್ಲಿ, ದೇವಿಪ್ರಿಯಾ ಎನ್ನುವ ಭಕ್ತರ ಬ್ಯಾಗ್‌ನ ಜಿಪ್ ತೆಗೆದು ಅದರಲ್ಲಿದ್ದ ಸುಮಾರು 3 ಪವನ್ ತೂಕದ ಹವಳದ ಚಿನ್ನದ ಸರವನ್ನು ಯಾರೋ ಕಳವು ಮಾಡಿದ್ದರು. 2. 5 ಲಕ್ಷ ಮೌಲ್ಯದ ಸರ ಇದ್ದಾಗಿದ್ದು ಈ ಕುರಿತಿ ದೇವಿಪ್ರಿಯಾ ಕೊಲ್ಲೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.

ಈ ಕುರಿತು ತನಿಖೆ ನಡೆಸಿದ ಪೊಲೀಸ್ ರು ಸಿಸಿಟಿವಿ ಕ್ಯಾಮೆರಾ ಮತ್ತು ತಾಂತ್ರಿಕ ಸಹಾಯದಿಂದ, ಆರೋಪಿತೆಯನ್ನು ಬಂಧಿಸಿದ್ದಾರೆ. ಬಂಧಿತಳಿಂದ ರೂ.2,50,000/- ಮೌಲ್ಯದ 3 ಪವನ್ ನ ಹವಳದ ಚಿನ್ನದ ಸರವನ್ನು ವಶಪಡಿಸಿಕೊಳ್ಳಲಾಗಿದೆ.