ಉಡುಪಿ : ಕೊಡವೂರು ಶಂಕರನಾರಾಯಣ ದೇವಸ್ಥಾನದಲ್ಲಿ ಲೋಕಕಲ್ಯಾಣ ಹಾಗೂ ನಾಡಿನ ಜನರ ಸುಭಿಕ್ಷೆಗಾಗಿ ಮೇ 14ರಿಂದ 19ರವರೆಗೆ ನಡೆಯಲಿರುವ ಮಹಾರುದ್ರಯಾಗದ ಪೂರ್ವಭಾವಿಯಾಗಿ ರವಿವಾರ ಚಪ್ಪರ ಮುಹೂರ್ತ ಕಾರ್ಯಕ್ರಮ ಭಕ್ತಿಭಾವದಿಂದ ನೆರವೇರಿತು. ದೇವಸ್ಥಾನದ ಪ್ರಧಾನ ಅರ್ಚಕ ಸೀತಾರಾಮ ಆಚಾರ್ಯ ಅವರ ಪೌರೋಹಿತ್ಯದಲ್ಲಿ ವಿವಿಧ ಧಾರ್ಮಿಕ ವಿಧಿವಿಧಾನಗಳು ಜರುಗಿದವು.

ಕಾರ್ಯಕ್ರಮದಲ್ಲಿ ಮಹಾರುದ್ರಯಾಗ ಸಮಿತಿಯ ಕಾರ್ಯಾಧ್ಯಕ್ಷ ಪ್ರಸಾದ್‌ರಾಜ್ ಕಾಂಚನ್, ಸಮಿತಿ ಸಂಚಾಲಕ ಕೆ. ಕೃಷ್ಣಮೂರ್ತಿ ಆಚಾರ್ಯ, ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಪ್ರಕಾಶ್ ಜಿ. ಕೊಡವೂರು, ರುದ್ರಯಾಗ ಸಮಿತಿಯ ಸಂಚಾಲಕರಾದ ರಮೇಶ್ ಎಸ್. ತಿಂಗಳಾಯ, ನಂದಕಿಶೋರ್ ಕೆಮ್ಮಣ್ಣು, ಬಾಲಕೃಷ್ಣ ಕೊಡವೂರು, ಭಜನಾ ಸಂಚಾಲಕ ಧನಂಜಯ ಕಾಂಚನ್ ಸೇರಿದಂತೆ ಹಲವು ಗಣ್ಯರು ಹಾಗೂ ಭಕ್ತರು ಭಾಗವಹಿಸಿದರು.

ವ್ಯವಸ್ಥಾಪನಾ ಸಮಿತಿಯ ಸದಸ್ಯರಾದ ಭಾಸ್ಕರ ಪಾಲನ್, ಎ. ರಾಜ ಸೇರಿಗಾರ, ವಾದಿರಾಜ್ ಸಾಲ್ಯಾನ್, ಯಶೋದರ ಸಾಲ್ಯಾನ್, ಬಾಬ ಕೆ., ಉಷಾ ಆನಂದ ಸುವರ್ಣ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

ಇದೇ ವೇಳೆ ಪಿ. ಗುರುರಾಜ್ ರಾವ್, ಯಾದವ ಅಮೀನ್, ಸದಾನಂದ ಮೂಲ್ಯ, ಬಿ. ಕುಶಲ ಶೆಟ್ಟಿ, ಆಶಾ ಚಂದ್ರಶೇಖರ್, ಸುರೇಂದ್ರ ಆಚಾರ್ಯ, ಸುನೀಲ್ ಪೂಜಾರಿ, ಶಂಕರ ಕುಂದರ್, ಹರಿಪ್ರಸಾದ್ ಮಲ್ಪೆ, ಶರತ್ ಹನುಮಾನ್‌ನಗರ, ಕುಸುಮ ಕರ್ಕೇರ, ಯಶೋದ ಕೆಮ್ಮಣ್ಣು, ಸತೀಶ್ ಕಲ್ಯಾಣಪುರ, ವಿಠಲ ಪೂಜಾರಿ, ಶಾಲಿನಿ ಸಾಲ್ಯಾನ್, ಅರ್ಚನಾ ದೇವಾಡಿಗ, ವಿಜಯ ಭಾಸ್ಕರ, ಸಂದ್ಯಾ ಪ್ರಕಾಶ್, ಸುಕನ್ಯ ಪೂಜಾರಿ, ಶಕುಂತಳ ಸದಾನಂದ ಹಾಗೂ ಉಮೇಶ್ ರಾವ್ ಕೊಡವೂರು ಮೊದಲಾದವರು ಪಾಲ್ಗೊಂಡಿದ್ದರು.



