Wednesday, October 21, 2026

spot_img

ಕೃಷ್ಣ ಮಠದಲ್ಲಿ ಸಾಂಪ್ರದಾಯಿಕ ತೆನೆಪೂಜೆ

ಉಡುಪಿ: ವಿಜಯದಶಮಿ ಪರ್ವಕಾಲದಲ್ಲಿ ಕೃಷ್ಣ ಮಠದಲ್ಲಿ ಸಾಂಪ್ರದಾಯಿಕ ತೆನೆಪೂಜೆ ನಡೆಯಿತು. ಭತ್ತದ ತೆನೆಯನ್ನು ಸೋದೆ ಮಠದ ಮುಂಭಾಗದಲ್ಲಿ ಪೂಜಿಸಿ, ಚಿನ್ನದ ಪಲ್ಲಕ್ಕಿಯಲ್ಲಿರಿಸಿ ಮಂಗಳವಾದ್ಯಗಳೊಂದಿಗೆ ರಥಬೀದಿಯಲ್ಲಿ ಮೆರವಣಿಗೆಯ ಮೂಲಕ ಕೃಷ್ಣ ಮಠಕ್ಕೆ ತರಲಾಯಿತು.

ವರ್ಷಕ್ಕೊಮ್ಮೆ ಮಾತ್ರ ತೆರೆಯುವ ಕೃಷ್ಣ ಗರ್ಭಗುಡಿಯ ಪೂರ್ವದ ಬಾಗಿಲನ್ನು ತೆರೆದು ಭತ್ತದ ತೆನೆಯನ್ನು ಶ್ರೀಕೃಷ್ಣನಿಗೆ ಸಮರ್ಪಿಸಿ ಪೂಜೆ ಸಲ್ಲಿಸಲಾಯಿತು.

ಬಳಿಕ ಲಕ್ಷ್ಮೀ ಮಂಟಪದಲ್ಲಿ ಅಷ್ಟಮಠಗಳು ಹಾಗೂ ಇತರ ಉಪಮಠಗಳಿಗೆ ತೆನೆ ವಿತರಿಸಲಾಯಿತು. ನಂತರ ಬಡಗುಮಾಳಿಗೆಗೆ ಸಾಂಪ್ರದಾಯಿಕ ಮೆರವಣಿಗೆಯಲ್ಲಿ ಕೊಂಡೊಯ್ದು ಭಕ್ತರಿಗೆ ಹಂಚಲಾಯಿತು.

ಈ ಸಂದರ್ಭದಲ್ಲಿ ಮಠದ ದಿವಾನ ಡಾ. ಉದಯಕುಮಾರ್ ಸರಳತ್ತಾಯ, ಪಾರುಪತ್ಯೆದಾರ ಶ್ರೀಶ ಭಟ್ ಕಡೆಕಾರು, ಮಠದ ಪ್ರಮುಖರು, ಸಿಬ್ಬಂದಿ ಹಾಗೂ ಭಕ್ತರು ಉಪಸ್ಥಿತರಿದ್ದರು.

Related Articles

LEAVE A REPLY

Please enter your comment!
Please enter your name here

Stay Connected

642FansLike
81FollowersFollow
17SubscribersSubscribe
- Advertisement -spot_img

Latest Articles