Thursday, March 5, 2026

spot_img

ಕುಂದಾಪುರದಲ್ಲಿ ಅಂದರ್–ಬಾಹರ್ ಜುಗಾರಿ ಆಟ ಬಯಲು : ನಾಲ್ವರು ಬಂಧನ

ಉಡುಪಿ: ಕುಂದಾಪುರ ಕಸಬಾ ಗ್ರಾಮದ ಮದ್ದುಗುಡ್ಡೆ ಬಳಿ ಸಾರ್ವಜನಿಕ ಸ್ಥಳದಲ್ಲಿ ಅಕ್ರಮವಾಗಿ ಅಂದರ್–ಬಾಹರ್ ಜುಗಾರಿ ಆಟ ಆಡುತ್ತಿದ್ದ ನಾಲ್ವರನ್ನು ಕುಂದಾಪುರ ಪೊಲೀಸರು ಮಧ್ಯರಾತ್ರಿ ಧಾಳಿ ನಡೆಸಿ ಬಂಧಿಸಿದ್ದಾರೆ. ಮಿಥುನ ಖಾರ್ವಿ (35), ಚಂದ್ರ ಪೂಜಾರಿ (45), ರೆಹಮತ್ (51), ನಿರಂಜನ್ ನಾಯಕ್ (39) ಬಂಧಿತರು.

 ಅಕ್ಟೋಬರ್ 12  ರಾತ್ರಿ 11.30 ಗಂಟೆ ಸುಮಾರಿಗೆ ಕುಂದಾಪುರ ಪೊಲೀಸ್ ಠಾಣೆಯ ಉಪನಿರೀಕ್ಷಕ ನಂಜಾನಾಯ್ಕ ಎನ್. ನೇತೃತ್ವದಲ್ಲಿ ಪೊಲೀಸ್‌ ಸಿಬ್ಬಂದಿಗಳು ಖಚಿತ ಮಾಹಿತಿ ಆಧಾರವಾಗಿ ಸ್ಥಳಕ್ಕೆ ತೆರಳಿ, ಜುಗಾರಿ ಆಟ ನಡೆಯುತ್ತಿದ್ದ ಸ್ಥಳವನ್ನು ಸುತ್ತುವರಿದು ಧಾಳಿ ನಡೆಸಿದ್ದಾರೆ. ಪೊಲೀಸರು ಧಾಳಿ ಮಾಡಿದಾಗ ಆರೋಪಿಗಳು ಓಡಿ ಹೋಗಲು ಯತ್ನಿಸಿದರೂ ನಾಲ್ವರನ್ನು ಸ್ಥಳದಲ್ಲೇ ಪೊಲೀಸ್‌ ರು ವಶಕ್ಕೆ ಪಡೆದಿದ್ದಾರೆ. ಸ್ಥಳದಲ್ಲಿ ಅಂದರ್–ಬಾಹರ್ ಜುಗಾರಿ ಆಟಕ್ಕಾಗಿ ಬಳಸಿದ್ದ ವಸ್ತು, ನಗದು ಪೊಲೀಸ್‌ ರು ವಶಕ್ಕೆ ಪಡೆದಿದ್ದಾರೆ. ಧಾಳಿ ವೇಳೆ ಕಿರಣ, ಹರೀಶ್ ಮತ್ತು ಮಂಜುನಾಥ ಓಡಿ ಹೋಗಿದ್ದು, ಓಡಿ ಹೋದ ಆರೋಪಿಗಳನ್ನು ಪೊಲೀಸರು ಗುರುತಿಸಿದ್ದು, ಶೀಘ್ರದಲ್ಲೆ ಬಂಧಿಸುವ ಕ್ರಮ ಜರುಗಲಿದೆ. ಈ ಕುರಿತು ಕುಂದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.

Related Articles

LEAVE A REPLY

Please enter your comment!
Please enter your name here

Stay Connected

642FansLike
81FollowersFollow
17SubscribersSubscribe
- Advertisement -spot_img

Latest Articles