Wednesday, September 16, 2026

spot_img

ಕುಂದಾಪುರ ಸ್ಪೋರ್ಟ್ಸ್ ಕ್ಲಬ್‌ನ ನೂತನ ಕ್ರೀಡಾ ಸಂಕೀರ್ಣಕ್ಕೆ ಚಾಲನೆ: ಶಾಸಕ ಕಿರಣ್ ಕೊಡ್ಗಿಯಿಂದ ಗುದ್ದಲಿ ಪೂಜೆ

ಉಡುಪಿ : 1965ರಿಂದ ಕ್ರೀಡಾ ಸಂಸ್ಕೃತಿ ಹಾಗೂ ಸೌಹಾರ್ದತೆಯ ಪ್ರತೀಕವಾಗಿ ಗುರುತಿಸಿಕೊಂಡಿರುವ ಕುಂದಾಪುರ ಸ್ಪೋರ್ಟ್ಸ್ ಕ್ಲಬ್‌ನ ನೂತನ ಅತ್ಯಾಧುನಿಕ ಕ್ರೀಡಾ ಸಂಕೀರ್ಣ ನಿರ್ಮಾಣಕ್ಕೆ ಸೋಮವಾರ ಚಾಲನೆ ದೊರೆಯಿತು.

ಕುಂದಾಪುರ ಶಾಸಕ ಎ. ಕಿರಣ್ ಕುಮಾರ್ ಕೊಡ್ಗಿ ಅವರು ಕ್ಲಬ್ ಆವರಣದಲ್ಲಿ ಗುದ್ದಲಿ ಪೂಜೆ ನೆರವೇರಿಸಿ ಕಾಮಗಾರಿಗೆ ಚಾಲನೆ ನೀಡಿದರು. ಬಳಿಕ ಮಾತನಾಡಿದ ಅವರು, 60 ವರ್ಷಗಳ ಇತಿಹಾಸ ಹೊಂದಿರುವ ಕ್ಲಬ್ ತಾಲೂಕಿನ ಕ್ರೀಡಾ ಪ್ರತಿಭೆಗಳಿಗೆ ಉತ್ತಮ ವೇದಿಕೆಯಾಗಿದೆ. ನೂತನ ಕ್ರೀಡಾ ಸಂಕೀರ್ಣದಿಂದ ಯುವ ಕ್ರೀಡಾಪಟುಗಳಿಗೆ ಹೆಚ್ಚಿನ ಅನುಕೂಲವಾಗಲಿದ್ದು, ಕ್ಲಬ್ ಮತ್ತಷ್ಟು ಎತ್ತರಕ್ಕೆ ಬೆಳೆಯಲಿ ಎಂದು ಹಾರೈಸಿದರು.

ಕಾರ್ಯಕ್ರಮದಲ್ಲಿ ಭಾರತದ ಮಾಜಿ ರಕ್ಷಣಾ ಕಾರ್ಯದರ್ಶಿ ಸುಭಾಷ್ ಚಂದ್ರ, ಉದ್ಯಮಿ ದಿನೇಶ್ ಹೆಗ್ಡೆ, ಕ್ಲಬ್ ಅಧ್ಯಕ್ಷ ಸಿಲೆಸ್ಟರ್ ಅಲ್ಮೇಡಾ, ರಾಕೇಶ್ ಸೋನ್ಸ್, ಪ್ರವೀಣ್ ಟಿ., ವಿನಾಯಕ ಪೈ, ಕೃಷ್ಣಾನಂದ ಚಾತ್ರ, ರಾಜೇಂದ್ರ ತೋಳಾರ್, ಆದರ್ಶ್ ಹೆಬ್ಬಾರ್, ವಿನೋದ್ ಕ್ರಾಸ್ತಾ ಸೇರಿದಂತೆ ಕ್ಲಬ್‌ನ ಪೋಷಕ ಹಾಗೂ ಆಡಳಿತ ಮಂಡಳಿ ಸದಸ್ಯರು ಉಪಸ್ಥಿತರಿದ್ದರು.

Related Articles

LEAVE A REPLY

Please enter your comment!
Please enter your name here

Stay Connected

642FansLike
81FollowersFollow
17SubscribersSubscribe
- Advertisement -spot_img

Latest Articles