ಉಡುಪಿ : ಉಡುಪಿ ರಾಷ್ಟ್ರೀಯ ಹೆದ್ದಾರಿ 66 ಕಿನ್ನಿಮೂಲ್ಕಿ ಬಳಿ ಉಡುಪಿ ಸೆನ್ ಪೊಲೀಸರ ಕಾರ್ಯಾಚರಣೆಯಲ್ಲಿ ಸರಿಸುಮಾರು 65 ಕೆಜಿ ಗಾಂಜಾ ವಶಕ್ಕೆ ಪಡೆದ ಘಟನೆ ನಡೆದಿದೆ.
ಇಂದು ಮಧ್ಯಾಹ್ನದ ಸುಮಾರಿಗೆ ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ಐಶರ್ ಲಾರಿ ಮೂಲಕ ಗಾಂಜಾ ಸಾಗಿಸುತ್ತಿದ್ದ ವೇಳೆ ಸೆನ್ ಪೊಲೀಸರು ಕಾರ್ಯಾಚರಣೆ ನಡೆಸಿ ವಾಹನದ ಜೊತೆ ಗಾಂಜಾ ವಶಕ್ಕೆ ಪಡೆದಿದ್ದಾರೆ.

ಐಶರ್ ಲಾರಿಯಲ್ಲಿ ಸುಮಾರು 65 ಕೆಜಿ ಗಾಂಜಾ ಪತ್ತೆಯಾಗಿರುವುದು, ಉಡುಪಿ ಜಿಲ್ಲಾ ಪೊಲೀಸ್ ರ ಸಾಧನೆ ಎನ್ನಬಹುದಾಗಿದೆ. ಇನ್ನು ಈ ಕುರಿತು ತಪಾಸಣೆ ಮುಂದುವರಿದ್ದು, ಗಾಂಜಾದ ಮೂಲ ಮತ್ತು ಎಲ್ಲಿಂದ ಎಲ್ಲಿಗೆ ಸಾಗಿಸಲಾಗುತ್ತಿತ್ತು ಎನ್ನುವ ಕುರಿತು ಪೊಲೀಸ್ ರು ಮಾಹಿತಿ ಕಲೆಹಾಕುತ್ತಿದ್ದಾರೆ


