Friday, June 27, 2025

spot_img

ಕಾಮರ್ಸ್ ಒಲಿಂಪಿಯಾಡ್ 2025 ಸ್ಪರ್ಧೆಯಲ್ಲಿ ದೀಪೇಶ್ ದೀಪಕ್ ಶೆಣೈ ದೇಶಕ್ಕೆ 12ನೇ ರ‍್ಯಾಂಕ್..

ಉಡುಪಿ

ಪದ್ಮಶ್ರೀ ಡಾ ಟಿ. ಎಂ. ಎ . ಪೈ ರಿಂದ ಸ್ಥಾಪಿತವಾಗಿ ಸುವರ್ಣ ಮಹೋತ್ಸವ ಹೊಸ್ತಿಲಲ್ಲಿರುವ ಮಣಿಪಾಲದ ಅಕಾಡಮಿ ಆಫ್ ಜನರಲ್ ಎಜುಕೇಶನ್ (AGE) ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳ ಘಟಕ ಟಿ ಎ ಪೈ ಇಂಗ್ಲಿಷ್ ಮೀಡಿಯಂ ಹೈಸ್ಕೂಲ್, ಕುಂಜಿಬೆಟ್ಟು, ಉಡುಪಿ ಯ 9ನೇ ತರಗತಿಯ ವಿದ್ಯಾರ್ಥಿ ದೀಪೇಶ್ ದೀಪಕ್ ಶೆಣೈ , ಪ್ರತಿಷ್ಠಿತ ಭಾರತೀಯ ಚಾರ್ಟರ್ಡ್ ಅಕೌಂಟೆಂಟ್ಸ್ ಸಂಸ್ಥೆಯವರು (ICAI) ನಡೆಸಿದ ಕಾಮರ್ಸ್ ಒಲಿಂಪಿಯಾಡ್ 2025 ಸ್ಪರ್ಧೆಯಲ್ಲಿ ಅಖಿಲ ಭಾರತೀಯ 12ನೇ ರ‍್ಯಾಂಕ್ ಪಡೆದು ಅತ್ಯುನ್ನತ ಸಾಧನೆ ಮಾಡಿದ್ದಾರೆ. ಈ ಸ್ಪರ್ಧೆಯನ್ನು ಸಂಸತ್ ಅಧಿನಿಯಮದ ಮೂಲಕ ಸ್ಥಾಪಿತವಾದ ಕಾನೂನುಬದ್ಧ ಸಂಸ್ಥೆ ಭಾರತೀಯ ಚಾರ್ಟರ್ಡ್ ಅಕೌಂಟೆಂಟ್ಸ್ ಕಾಯ್ದೆ, 1949 (ಕಾಯ್ದೆ ಸಂಖ್ಯೆ XXXVIII of 1949) ಅಡಿಯಲ್ಲಿ ಸ್ಥಾಪಿತವಾದ ಭಾರತೀಯ ಚಾರ್ಟರ್ಡ್ ಅಕೌಂಟೆಂಟ್ಸ್ ಸಂಸ್ಥೆ (ICAI) ಯ ಉದ್ಯೋಗ ಮಾರ್ಗದರ್ಶನ ಸಮಿತಿ (CCC) ಆಯೋಜಿಸಿತ್ತು. ಈ ಸಾಧನೆಯ ಬಗ್ಗೆ ಶಾಲಾ ಮುಖ್ಯೋಪಾಧ್ಯಾಯಿನಿ ಶ್ರೀಮತಿ ವಿನೋದ ಶೆಟ್ಟಿ , ಶಾಲಾ ಆಡಳಿತ ಮಂಡಳಿ, ಮಣಿಪಾಲದ AGE ಶಿಕ್ಷಣ ಸಂಸ್ಥೆಗಳು, ಶಾಲಾ ಪೋಷಕರ ಮತ್ತು ಶಿಕ್ಷಕರ ಸಂಘ (PTA), ಹಳೆ ವಿದ್ಯಾರ್ಥಿ ಸಂಘಟನೆ, ಮತ್ತು ಎಲ್ಲಾ ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ದೀಪೇಶ್‌ಗೆ ಹೃದಯಪೂರ್ವಕ ಅಭಿನಂದನೆಗಳು ತಿಳಿಸಿ, ಭವಿಷ್ಯದ ಯಶಸ್ಸಿಗೆ ಶುಭ ಹಾರೈಸಿದ್ದಾರೆ.

Related Articles

LEAVE A REPLY

Please enter your comment!
Please enter your name here

Stay Connected

642FansLike
81FollowersFollow
17SubscribersSubscribe
- Advertisement -spot_img

Latest Articles