Thursday, October 23, 2025

spot_img

ಕಸ್ತೂರ್ಬಾ ಆಸ್ಪತ್ರೆ ಮಣಿಪಾಲದ ವೈಲ್ಡರ್‌ನೆಸ್ ಮೆಡಿಸಿನ್ ಕೇಂದ್ರದಿಂದ “ವೆನಮ್ಸ್” ಸಹಾಯವಾಣಿಗೆ ಚಾಲನೆ

ಉಡುಪಿ : ಕಸ್ತೂರ್ಬಾ ಆಸ್ಪತ್ರೆ ಮಣಿಪಾಲದ ತುರ್ತು ವೈದ್ಯಕೀಯ ವಿಭಾಗದ ಅಡಿಯಲ್ಲಿರುವ ಸೆಂಟರ್ ಫಾರ್ ವೈಲ್ಡರ್‌ನೆಸ್ ಮೆಡಿಸಿನ್ ಕೇಂದ್ರವು, ತುರ್ತು ವೈದ್ಯಕೀಯ ತಂತ್ರಜ್ಞಾನ ವಿಭಾಗ, ಮಣಿಪಾಲ್ ಕಾಲೇಜ್ ಆಫ್ ಹೆಲ್ತ್ ಪ್ರೊಫೆಷನ್, ಮಾಹೆ, ಮಣಿಪಾಲ ಮತ್ತು ಉಡುಪಿ ಜಿಲ್ಲೆಯ ಜಿಲ್ಲಾ ಕಣ್ಗಾವಲು ಕಚೇರಿಯ (ಜಿಲ್ಲಾ ಸರ್ವೇಲೆನ್ಸ್ ಆಫೀಸ್) ಸಹಯೋಗದೊಂದಿಗೆ ಹಾವು ಕಡಿತ ಮತ್ತು ವಿಷಕ್ಕೆ ಸಂಬಂಧಿಸಿದ ಇತರ ತುರ್ತು ಪರಿಸ್ಥಿತಿಗಳನ್ನು ಪರಿಹರಿಸಲು ವೆನಮ್ಸ್ ಸಹಾಯವಾಣಿಯನ್ನು ಇಂದು ಪ್ರಾರಂಭಿಸಿತು.

  ಜಿಲ್ಲಾ ಕಣ್ಗಾವಲು ಅಧಿಕಾರಿ (ಜಿಲ್ಲಾ ಸರ್ವೇಲೆನ್ಸ್ ಆಫೀಸರ್) ಡಾ. ನಾಗರತ್ನ ಅವರು ಸಹಾಯವಾಣಿಯನ್ನು ಔಪಚಾರಿಕವಾಗಿ ಉದ್ಘಾಟಿಸಿ ಮಾತನಾಡುತ್ತಾ, ಹಾವು ಕಡಿತದಂತಹ ತುರ್ತು ಪರಿಸ್ಥಿತಿಗಳನ್ನು ನಿರ್ವಹಿಸುವಲ್ಲಿ ಸಾರ್ವಜನಿಕ – ಖಾಸಗಿ ಸಹಭಾಗಿತ್ವದ ಮಹತ್ವವನ್ನು ಒತ್ತಿ ಹೇಳಿದರು.  ಮಣಿಪಾಲ್ ಕ್ಲಸ್ಟರ್‌ನ ಸಿ ಓ ಓ ಡಾ. ಸುಧಾಕರ್ ಕಂಟಿಪುಡಿ ಅವರು ಗೌರವಾನ್ವಿತ ಅತಿಥಿಯಾಗಿ ಭಾಗವಹಿಸಿ ಸಾರ್ವಜನಿಕ ಆರೋಗ್ಯ ಸಂಪರ್ಕದಲ್ಲಿ ಮಾಹೆ ಮಣಿಪಾಲದ ಪ್ರಯತ್ನಗಳನ್ನು ಶ್ಲಾಘಿಸಿದರು. ಹಾವು ಕಡಿತದ ಘಟನೆ ಮತ್ತು ಸಕಾಲಿಕ ಚಿಕಿತ್ಸೆಯ ನಡುವಿನ ಅಂತರವನ್ನು ಕಡಿಮೆ ಮಾಡಲು ವೆನಮ್ಸ್ ಸಹಾಯವಾಣಿಯನ್ನು ವಿನ್ಯಾಸಗೊಳಿಸಲಾಗಿದ್ದು. ಜೀವಗಳನ್ನು ಉಳಿಸಲು ಮತ್ತು ವಿಳಂಬವಾದ ಆರೈಕೆಯಿಂದ ಉಂಟಾಗುವ ತೊಡಕುಗಳನ್ನು ಕಡಿಮೆ ಮಾಡಲು ತ್ವರಿತ ಮಾರ್ಗದರ್ಶನ ಮತ್ತು ಬೆಂಬಲವನ್ನು ಒದಗಿಸುವುದು ನಮ್ಮಗುರಿಯಾಗಿದೆ ಎಂದು ಡಾ. ಫ್ರೆಸ್ಟನ್ ಹೇಳಿದರು. ತುರ್ತು ವೈದ್ಯಕೀಯ ವಿಭಾಗದ ಸಹಾಯಕ ಪ್ರಾಧ್ಯಾಪಕಿ ಡಾ.ವೃಂದಾ ಲಾತ್ ಅವರು ಆರೈಕೆ ಮಾರ್ಗದ ಕುರಿತು ಅವಲೋಕನವನ್ನು ಒದಗಿಸಿದರು, ಮಣಿಪಾಲ್ ಕಾಲೇಜ್ ಆಫ್ ಹೆಲ್ತ್ ಪ್ರೊಫೆಶನ್ಸ್‌ನ ತುರ್ತು ವೈದ್ಯಕೀಯ ತಂತ್ರಜ್ಞಾನ ವಿಭಾಗದ ಅಧ್ಯಾಪಕಿ ಶ್ರೀಮತಿ ಉಷಾ ಅವರು ವೆನಮ್ಸ್ ನೋಂದಾವಣಿಯಲ್ಲಿನ ಸಂಶೋಧನಾ ಫಲಿತಾಂಶಗಳನ್ನು ಎತ್ತಿ ತೋರಿಸಿದರು.

ಉಪನಿರ್ದೇಶಕಿ ಡಾ. ತೇಜಸ್ವಿನಿ ಪಾಟೀಲ್, ಕಸ್ತೂರ್ಬಾ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ. ಅವಿನಾಶ್ ಶೆಟ್ಟಿ, ತುರ್ತು ಚಿಕಿತ್ಸಾ ವಿಭಾಗದ ಪ್ರಾಧ್ಯಾಪಕ ಮತ್ತು ಮುಖ್ಯಸ್ಥ ಡಾ. ವಿಮಲ್ ಕೃಷ್ಣನ್ ಎಸ್, ತುರ್ತು ಚಿಕಿತ್ಸಾ ವಿಭಾಗದ ಪ್ರಾಧ್ಯಾಪಕ ಡಾ. ಜಯರಾಜ್ ಮೈಂಬಿಲ್ಲಿ ಬಾಲಕೃಷ್ಣನ್ ಮತ್ತು ಸೆಂಟರ್ ಫಾರ್ ವೈಲ್ಡರ್‌ನೆಸ್ ಮೆಡಿಸಿನ್‌ನ ಸಂಯೋಜಕ ಡಾ. ಫ್ರೆಸ್ಟನ್ ಮಾರ್ಕ್ ಸಿರೂರ್ ಉಪಸ್ಥಿತರಿದ್ದರು.

Related Articles

LEAVE A REPLY

Please enter your comment!
Please enter your name here

Stay Connected

642FansLike
81FollowersFollow
17SubscribersSubscribe
- Advertisement -spot_img

Latest Articles